ನ್ಯೂಸ್ ನಾಟೌಟ್ : ಹಮಾಸ್ ಉಗ್ರರು ಹಾಗೂ ಇಸ್ರೇಲ್ ನಡುವಿನ ಯುದ್ಧದ ನಡೆವೆ ದಿಢೀರ್, ಪ್ರಧಾನಿ ಮೋದಿ ಇಸ್ರೇಲ್ ಪ್ರಧಾನಿ ಜೊತೆಗೆ ಮಾತುಕತೆ ನಡೆಸಿದ್ದಾರೆ ಎನ್ನಲಾಗಿದೆ.
ಇಸ್ರೇಲ್ ಸೇನೆ, ಈಗಾಗಲೇ ಭಾಗಶಃ ಹಮಾಸ್ ಉಗ್ರರ ಪ್ರದೇಶವನ್ನು ವಶಕ್ಕೆ ಪಡೆದಿದೆ. ಈ ಸಮಯದಲ್ಲಿ ಪಿಎಂ ಮೋದಿ ಇಸ್ರೇಲ್ ಪ್ರಧಾನಿ ಜೊತೆಗೆ ಮಾತುಕತೆ ನಡೆಸಿರುವುದು ಭಾರಿ ಕುತೂಹಲವನ್ನು ಕೂಡ ಕೆರಳಿಸಿದೆ.
ಭಾರತ ಜಗತ್ತಿನ ಪ್ರತಿಯೊಂದು ದೇಶದ ಜೊತೆಗೂ ಉತ್ತಮವಾದ ಸಂಬಂಧವನ್ನ ಉಳಿಸಿಕೊಂಡು ಮತ್ತು ಬೆಳೆಸಿಕೊಂಡು ಬರುತ್ತಿದೆ. ಅದರಲ್ಲೂ ಜಗತ್ತಿನಲ್ಲಿ ಯುದ್ಧಗಳು ಶುರುವಾದ ಸಮಯದಲ್ಲೇ ಭಾರತ ಎಚ್ಚರಿಕೆಯ ಹೆಜ್ಜೆ ಇಡುತ್ತಿದೆ. ರಷ್ಯಾ ಮತ್ತು ಉಕ್ರೇನ್ ಯುದ್ಧ ಶುರುವಾದ ವೇಳೆಯು ಇದೇ ರೀತಿ ಭಾರತ ಅಲರ್ಟ್ ಆಗಿ, ಯಾರ ಪರವೂ ನಿಲ್ಲದೆ ಶಾಂತಿಯ ಮಂತ್ರ ಸಾರಿತ್ತು.
ಹಾಗೇ ಹಮಾಸ್ & ಇಸ್ರೇಲ್ ನಡುವೆ ಯುದ್ಧ ಶುರುವಾದ ಸಮಯದಲ್ಲೂ, ಎಚ್ಚರಿಕೆಯ ಹೆಜ್ಜೆ ಇಟ್ಟು ಅಲರ್ಟ್ ಆಗಿತ್ತು. ಈಗ ಇಸ್ರೇಲ್ ಪ್ರಧಾನಿ ಜೊತೆಗೆ ಭಾರತದ ಪ್ರಧಾನಿ ದೂರವಾಣಿ ಮೂಲಕ ಮಾತುಕತೆ ನಡೆಸಿದ್ದಾರೆ ಎಂದು ಪ್ರಧಾನಿಯೇ ಮಾಹಿತಿ ಹಂಚಿಕೊಂಡಿದ್ದಾರೆ.
ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು & ಪ್ರಧಾನಿ ಮೋದಿ ಯುದ್ಧ ನಡೆಯುವ ಸಮಯದಲ್ಲೇ ಮಹತ್ವದ ಮಾತುಕತೆ ನಡೆಸಿದ್ದಾರೆ. ದೂರವಾಣಿ ಮೂಲಕ ಇಬ್ಬರ ನಡುವೆ ಈಗ ಸಂಭಾಷಣೆ ನಡೆದಿದೆ ಎನ್ನಲಾಗಿದೆ. ಹಮಾಸ್ ಮತ್ತು ಇಸ್ರೇಲ್ ಯುದ್ಧದ ಸದ್ಯದ ಪರಿಸ್ಥಿತಿ ಬಗ್ಗೆ ಪ್ರಧಾನಿ ಮೋದಿ ಇಸ್ರೇಲ್ ಪ್ರಧಾನಿ ಜೊತೆಗೆ ಮಾತುಕತೆ ನಡೆಸಿ ಚರ್ಚಿಸಿದ್ದಾರೆ. ಇಸ್ರೇಲ್ & ಹಮಾಸ್ ಯುದ್ಧದ ಇತ್ತೀಚಿನ ಬೆಳವಣಿಗೆ ಬಗ್ಗೆ ನೆತನ್ಯಾಹು ಮೋದಿಗೆ ವಿವರಣೆ ನೀಡಿದ್ದಾರೆ ಎನ್ನಲಾಗಿದೆ.
ಇನ್ನು ಈ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಮಾಹಿತಿ ಹಂಚಿಕೊಂಡಿರುವ ಪ್ರಧಾನಿ ಮೋದಿ ಅವರು ‘ಇಸ್ರೇಲ್-ಹಮಾಸ್ ಸಂಘರ್ಷದ ಬಗ್ಗೆ, ಕಡಲ ಸಂಚಾರದ ಸುರಕ್ಷತೆಯ ಕುರಿತಾಗಿ ಇರುವ ಕಳವಳ ಸೇರಿ ಹಲವು ವಿಚಾರಗಳ ಬಗ್ಗೆ ಮಾತನಾಡಿದ್ದೇವೆ. ಹಾಗೆ ಭಾರತ ಈಗಲೂ ಶಾಂತಿ ಮತ್ತು ಸ್ಥಿರತೆ ಪರ ನಿಲ್ಲುತ್ತದೆ. ಯುದ್ಧ ಸಂತ್ರಸ್ತರಿಗಾಗಿ, ನಿರಂತರ ಮಾನವೀಯ ನೆರವನ್ನ ನೀಡಬೇಕಿದೆ ಎಂಬುದರ ಬಗ್ಗೆ ಮಾತುಕತೆ ನಡೆಸಿದ್ದೇವೆ’ ಎಂದು ತಿಳಿಸಿದ್ದಾರೆ. ಪಿಎಂ ಮೋದಿ ಅವರು ಈ ಬಗ್ಗೆ ಟ್ವಿಟ್ಟರ್ ಅಂದ್ರೆ ಈಗಿನ ಎಕ್ಸ್ ಸೋಷಿಯಲ್ ಮೀಡಿಯಾ ಖಾತೆಯಲ್ಲಿ ಪೋಸ್ಟ್ ಹಾಕಿದ್ದಾರೆ.