ನ್ಯೂಸ್ ನಾಟೌಟ್ : ಬಹುಭಾಷಾ ನಟಿ ಸಮಂತಾ ಅದೊಂದು ಸಮಯದಲ್ಲಿ ಎಲ್ಲರ ಮನಸ್ಸನ್ನೆ ಕದ್ದ ಬ್ಯೂಟಿಫುಲ್ ಚೆಲ್ವೆ.ಆರೋಗ್ಯ ಸಮಸ್ಯೆ ಎದುರಾದ ಬಳಿಕ ಸಿನಿಮಾದಿಂದ ಬ್ರೇಕ್ ಪಡೆದುಕೊಂಡಿದ್ದರು.ಇದೀಗ ನಿರ್ಮಾಣ ಸಂಸ್ಥೆಯೊಂದನ್ನು ಆರಂಭಿಸುವ ಮೂಲಕ ಮತ್ತೆ ಸಿನಿಮಾ ಕ್ಷೇತ್ರದತ್ತ ಹೆಜ್ಜೆಯಿಡುತ್ತಿದ್ದಾರೆ.ನಿರ್ಮಾಪಕಿಯಾಗಿ ಮೊದಲ ಹೆಜ್ಜೆಯಿಡಲು ಸಮಂತಾ ಮುಂದಾಗಿದ್ದಾರೆ.
ಸಮಂತಾ ಫಿಲ್ಮ್ ಇಂಡಸ್ಟ್ರೀಯಲ್ಲಿ ಕಾಣಿಸಿಕೊಳ್ಳದೇ ಇದ್ದುದರಿಂದ ಅವರ ಅಭಿಮಾನಿಗಳು ಕೊಂಚ ಬೇಸರದಲ್ಲಿದ್ದರು.ಇದೀಗ ಅವರ ಅಭಿಮಾನಿಗಳಿಗಾಗಿ ಮತ್ತೆ ಸಿನಿಮಾರಂಗದತ್ತ ಮುಖ ಮಾಡಿದ್ದಾರೆ. ಆರೋಗ್ಯ ಸಮಸ್ಯೆ ಕಾಡಿದ್ರೂ ಕೂಡ ಅದಕ್ಕೆ ಸವಾಲೆಸೆದು ನಗುವಿನ ಮೂಲಕವೇ ಕೆಲಸ ಮಾಡಲು ಉತ್ಸಾಹ ತೋರುತ್ತಿದ್ದಾರೆ. ಪ್ರವಾಸ ಮಾಡುತ್ತಾ,ಟಿವಿ ಶೋಗಳಲ್ಲಿ ಭಾಗಿಯಾಗುತ್ತಾ ಸಮಯ ಕಳೆಯುತ್ತಿದ್ದಾರೆ. ಸದ್ಯ ಅವರು ಸಿನಿಮಾದಿಂದ ಕೆಲ ಸಮಯ ಬ್ರೇಕ್ ಪಡೆದುಕೊಂಡಿದ್ದರು.ಸೋಶಿಯಲ್ ಮೀಡಿಯಾದಲ್ಲಿಯೂ ಅಷ್ಟೊಂದು ಆ್ಯಕ್ಟೀವ್ ಆಗಿರಲಿಲ್ಲ.
ಇದೀಗ ಸೋಶಿಯಲ್ ಮೀಡಿಯಾದಲ್ಲಿ ಸಮಂತಾ ಸಖತ್ ಆ್ಯಕ್ಟಿವ್ ಆಗಿದ್ದು,ಭಾನುವಾರ ತನ್ನ ಇನ್ಸ್ಟಾಗ್ರಾಮ್ ನಲ್ಲಿ ಅಭಿಮಾನಿಗಳಿಗಾಗಿ ಕೆಲ ಸಮಯವನ್ನು ಮೀಸಲಿಟ್ಟಿದ್ದಾರೆ. ಇಲ್ಲಿ ಫ್ಯಾನ್ಸ್ ಗಳು ಕೇಳಿದ ಪ್ರಶ್ನೆಗೆ ಸಮಾಧಾನದಿಂದ ಉತ್ತರಿಸಿದ್ದಾರೆ.ಒಬ್ಬ ಅಭಿಮಾನಿ ಸಮಂತಾ ಅವರ ಬಳಿ ಅವರ ಮತ್ತೆ ಮದುವೆ ಆಗುವ ಬಗ್ಗೆ ಪ್ರಶ್ನೆ ಕೇಳಿದ್ದಾರೆ. ಇದಕ್ಕೆ ಸಮಂತಾ ತಮಾಷೆಯ ರೀತಿಯಲ್ಲೇ ಉತ್ತರವನ್ನು ನೀಡಿದ್ದಾರೆ. “ಅಂಕಿಅಂಶಗಳ ಪ್ರಕಾರ, ಇದು ಕೆಟ್ಟ ಹೂಡಿಕೆಯಾಗಿದೆ” ಎನ್ನುವ ಪ್ರತಿಕ್ರಿಯೆಯನ್ನು ನೀಡಿದ್ದಾರೆ. ಕೆಲ ಅಂಕಿಅಂಶಗಳ ಉದಾಹರಣೆಯನ್ನು ನೀಡಿದ್ದಾರೆ.
ಪರಸ್ಪರ ಪ್ರೀತಿಸಿ, ಡೇಟ್ ಮಾಡಿ ಒಬ್ಬರನ್ನೊಬ್ಬರು ಅರ್ಥ ಮಾಡಿಕೊಂಡು 2017 ರಲ್ಲಿ ನಾಗಚೈತನ್ಯ – ಸಮಂತಾ ಎಲ್ಲರ ಸಮ್ಮುಖದಲ್ಲಿ ಮದುವೆಯಾಗಿದ್ದರು. 2021 ರಲ್ಲಿ ತಾವು ಪ್ರತ್ಯೇಕವಾಗುವುದಾಗಿ ಇಬ್ಬರು ಘೋಷಿಸಿದ್ದರು.