ನ್ಯೂಸ್ ನಾಟೌಟ್: ಇತ್ತೀಚಿನ ದಿನಗಳಲ್ಲಿ ಯಾವುದೇ ವಿಚಾರವನ್ನು ತಿಳಿದು ಕೊಳ್ಳೋದಕ್ಕೆ,ಕಂಡು ಹಿಡಿಯೋದಕ್ಕೆ ಹೆಚ್ಚು ಹೊತ್ತು ಬೇಕಾಗಿಲ್ಲ.ಅದಕ್ಕಾಗಿಯೇ ಹೊಸ ಆ್ಯಪ್ಗಳು ಕೂಡ ಪರಿಚಯವಾಗುತ್ತಲೇ ಇದೆ.ಇದೀಗ ಇಲ್ಲೊಬ್ಬಳು ತಾಯಿ ತನ್ನ ಮಗನ ಅಕ್ರಮ ಸಂಬಂಧವನ್ನು ಪತ್ತೆ ಮಾಡಿದ್ದಾಳೆ.ಅದು ಕೂಡ ಲೈಫ್ ೩೬೦ ಎಂಬ ಅಪ್ಲಿಕೇಶನ್ ಬಳಸೋದ್ರ ಮುಖಾಂತರ..!ಆಶ್ಚರ್ಯವೆನಿಸಿದ್ರೂ ಇದು ಸತ್ಯ.
ಈ ಘಟನೆ ನಡೆದಿರೋದು ಅಮೆರಿಕಾದಲ್ಲಿ.ತಾಯಿಯೊಬ್ಬಳಿಗೆ ತನ್ನ ಮಗನ ಅಕ್ರಮ ಸಂಬಂಧದ ಬಗ್ಗೆ ಅನುಮಾನವಿರುತ್ತೆ.ಇದಕ್ಕಾಗಿ ಆಕೆ ಒಂದು ಉಪಾಯ ಹೂಡುತ್ತಾಲೆ.ಇದಕ್ಕೆ ಸಂಬಂಧಿಸಿ ಬೇರೆನಾದ್ರೂ ಆ್ಯಪ್ ಗಳಿವೆಯಾ ಅನ್ನೋದನ್ನು ಹುಡುಕಾಡಲು ಶುರು ಮಾಡುತ್ತಾಳೆ.ಕೊನೆಗೂ ಆಕೆಗೆ ಒಂದು ಆ್ಯಪ್ ಲಭ್ಯವಾಗುತ್ತೆ.ಅದುವೇ ಲೈಫ್ 360.ಇದರ ಮೂಲಕ ಮಗ ಲೈಂಗಿಕ ಸಂಪರ್ಕ ಹೊಂದಿರುವುದನ್ನು ಪತ್ತೆ ಹಚ್ಚಿದ್ದಾಳೆ.
ಈ ವಿಷಯ ಎಲ್ಲೆಡೆ ವೈರಲ್ ಆಗಿದ್ದು ಆ ಅಪ್ಲಿಕೇಶನ್ ಬಗ್ಗೆ ತಿಳಿದು ಕೊಳ್ಳಲು ಜನ ಉತ್ಸುಕರಾಗಿದ್ದಾರೆ.ತನ್ನ ಮಗ ಅವನ ಶಿಕ್ಷಕಿಯೊಂದಿಗೆ ಸಂಬಂಧ ಇಟ್ಟುಕೊಂಡಿದ್ದು, ತನ್ನ 18 ವರ್ಷದ ಮಗ ಮತ್ತು 26 ವರ್ಷದ ಸೌತ್ ಮೆಕ್ಲೆನ್ಬರ್ಗ್ ಹೈಸ್ಕೂಲ್ ಶಿಕ್ಷಕಿ ಗೇಬ್ರಿಯೆಲಾ ಕಾರ್ಟಾಯಾ- ನ್ಯೂಫೆಲ್ಡ್ ಅವರನ್ನು ಕಾರಿನಲ್ಲಿ ಲೈಂಗಿಕ ಕ್ರಿಯೆ ನಡೆಸಿರುವುದನ್ನು ಕಂಡು ಹಿಡಿದಿದ್ದಾರೆ. ವಿದ್ಯಾರ್ಥಿಯೊಂದಿಗೆ ಅಕ್ರಮ ಸಂಬಂಧ ನಡೆಸಿದ ಆರೋಪ ಮೇರೆಗೆ ಶಿಕ್ಷಕಿ ಈಗ ಜೈಲು ಪಾಲಾಗಿದ್ದಾಳೆ.
ಲೈಫ್ 360 ಅಪ್ಲಿಕೇಶನ್ನನ್ನು 2008ರಲ್ಲಿ ಪರಿಚಯಿಸಲಾಗಿದೆ.ಸಾಮಾಜಿಕ ನೆಟ್ವರ್ಕಿಂಗ್ ಅಪ್ಲಿಕೇಶನ್ ಇದಾಗಿದ್ದು,ಇದು ಸ್ಥಳ ಆಧಾರಿತ ಸೇವೆಯಾಗಿ ಕಾರ್ಯನಿರ್ವಹಿಸುತ್ತದೆ. ಜೊತೆಗೆ ಸ್ನೇಹಿತರು ಮತ್ತು ಕುಟುಂಬದವರ ಇರುವಿಕೆಯನ್ನು ಹಂಚಿಕೊಳ್ಳಲು ನಿಮಗೆ ಅನುವು ಮಾಡಿಕೊಡುತ್ತದೆ.ಅದೇ ರೀತಿ ಈ ಅಪ್ಲಿಕೇಶನ್ನ್ನು ಅಧಿಸೂಚನೆಯನ್ನು ಬಳಸಿಕೊಂಡ ತಾಯಿ ಉದ್ಯಾನವನಕ್ಕೆ ಭೇಟಿ ನೀಡಿ ತನ್ನ ಮಗನ ರಾಸಲೀಲೆಯನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ. ಬಳಿಕ ಅವರು ಇರುವ ವಾಹನದ ಫೋಟೋಗಳನ್ನು ಸೆರೆ ಹಿಡಿದು ಆ ದೃಶ್ಯವನ್ನು ಸಂಬಂಧಪಟ್ಟ ಇಲಾಖೆಗೆ ನೀಡುವ ಮೂಲಕ ದೂರು ದಾಖಲಿಸಿದ್ದಾರೆ. ತರುವಾಯ, ಅವರು ಘಟನೆಯನ್ನು ಸ್ವ ವಿವರವಾಗಿ ವರದಿ ಮಾಡಿ, ಅಧಿಕಾರಿಗಳನ್ನು ಸಂಪರ್ಕಿಸಿ ಕಾನೂನು ಕ್ರಮ ಕೈಗೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.
ದಿ ನ್ಯೂಯಾರ್ಕ್ ಪೋಸ್ಟ್ ಪ್ರಕಾರ, ಆ ತಾಯಿ ಷಾರ್ಲೆಟ್- ಮೆಕ್ಲೆನ್ಬರ್ಗ್ ಪೊಲೀಸರಿಗೆ ತಿಳಿಸಿರುವಂತೆ, ತನ್ನ ಮಗನ ಅನುಚಿತ ಸಂಬಂಧ ಮತ್ತು ಸುತ್ತ ಮುತ್ತ ಅವನ ಬಗ್ಗೆ ಬರುತ್ತಿದ್ದ ವದಂತಿಗಳನ್ನು ಗಮನಿಸಿ ಹಾಗೂ ಅವನು ಕಾಲೇಜಿಗೆ ಸ್ಕೂಲ್ಗೆ ಹೋಗದೇ ಇರುವ ಬಗ್ಗೆ ಅನುಮಾನಗೊಂಡು ತಾಯಿ ಈ ರೀತಿ ಮಾಡಿದ್ದಾರೆ. ವಿಜ್ಞಾನ ತರಗತಿಯ ಶಿಕ್ಷಕಿಯಾಗಿರುವ ಕಾರ್ಟಾಯಾ- ನ್ಯೂಫೆಲ್ಡ್ ವಿದ್ಯಾರ್ಥಿಗಳನ್ನು ಹೀಗೆ ಬಳಸಿಕೊಳ್ಳುತ್ತಿದ್ದಾಳೆ. ಹದಿಹರೆಯದ ಮಕ್ಕಳನ್ನು ಆಕೆ ದಾರಿ ತಪ್ಪಿಸುತ್ತಿದ್ದಾಳೆ ಎಂದು ತನಿಖೆಯಲ್ಲಿ ತಿಳಿದು ಬಂದಿದೆ. ಈ ಕಾರಣಕ್ಕೆ ಆಕೆಯನ್ನು ಬಂಧಿಸಲಾಗಿದೆ.ಮಾಹಿತಿಯ ಪ್ರಕಾರ, ಲೈಫ್ 360 ಸರಿಸುಮಾರು 50 ಮಿಲಿಯನ್ ಸಕ್ರಿಯ ಬಳಕೆದಾರರನ್ನು ಹೊಂದಿದೆ. ಈ ಅಪ್ಲಿಕೇಶನ್ 300 ಮಿಲಿಯನ್ ಆದಾಯವನ್ನು ಗಳಿಸುತ್ತದೆ. ಇದು ಮಾರುಕಟ್ಟೆಯಲ್ಲಿ ಗಮನಾರ್ಹವಾದ ಬಳಕೆ ಹಾಗೂ ಪ್ರಚಾರವನ್ನು ಪಡೆದಿದೆ.