ನ್ಯೂಸ್ ನಾಟೌಟ್ :ಸಾಮಾನ್ಯವಾಗಿ ಸೆಲೆಬ್ರಿಟಿಗಳೇ ಇರುವ ಕಾರ್ಯಕ್ರಮವಾದ ಬಿಗ್ ಬಾಸ್ ಅಂದ್ರೆ ಎಲ್ಲರೂ ಇಷ್ಟ ಪಟ್ಟು ನೋಡುವ ಕಾರ್ಯಕ್ರಮ. ಇತ್ತೀಚೆಗೆ ಕೆಲವು ಕಾರಣಗಳಿಂದ ಜನ ಈ ಕಾರ್ಯಕ್ರಮಕ್ಕೆ ಅರ್ಥವಿಲ್ಲದ ಕಾರ್ಯಕ್ರಮ ಎಂದು ಹೇಳೋದಕ್ಕೆ ಶುರು ಮಾಡಿದ್ದಾರೆ.ಹೀಗಿರುವಾಗಲೇ ಬಿಗ್ ಬಾಸ್ ಮತ್ತೆ ಚರ್ಚೆಯಲ್ಲಿದೆ.ಅದಕ್ಕೆ ಕಾರಣ ಓರ್ವ ಸಾಮಾನ್ಯ ಕೃಷಿಕನೋರ್ವನ ಮಗ ಕಾರ್ಯಕ್ರಮದಲ್ಲಿ ವಿನ್ನರ್ ಆಗಿದ್ದು.
ಹೌದು, ಕಿಂಗ್ ನಾಗಾರ್ಜುನ ನಡೆಸಿಕೊಡುತ್ತಿರುವ ಬಿಗ್ ಬಾಸ್ ಸೀಸನ್ 7 ರ ಗ್ರ್ಯಾಂಡ್ ಫಿನಾಲೆಗಾಗಿ ಪ್ರೇಕ್ಷಕರು ಕಾಯುತ್ತಿದ್ದರು.ಅಂತೂ ಇಂತೂ ಆ ಕ್ಷಣ ಬಂದು ಹೋಯ್ತು.ಬಿಗ್ ಬಾಸ್ 7 ರ ವಿನ್ನರ್ ಅನೌನ್ಸ್ ಕೂಡಾ ಆಯ್ತು.. ಅದ್ಧೂರಿಯಾಗಿ ಆರಂಭವಾದ ಗ್ರ್ಯಾಂಡ್ ಫಿನಾಲೆ ಸಂಚಿಕೆ ಒಂದು ಹೊಸ ದಾಖಲೆಯನ್ನೇ ಸೃಷ್ಟಿಸಿದೆ.ಇನ್ನು ಈ ಗ್ರ್ಯಾಂಡ್ ಫಿನಾಲೆ ಸಂಚಿಕೆಯಲ್ಲಿ ಅರ್ಜುನ್, ಪ್ರಶಾಂತ್, ಶಿವಾಜಿ, ಪ್ರಿನ್ಸ್ ಯವರ್, ಅಮರದೀಪ್ ಮತ್ತು ಪ್ರಿಯಾಂಕಾ ವಿನ್ ಆಗೋದಕ್ಕೆ ಪೈಪೋಟಿ ನಡೆಸಿದ್ದರು.. ಆದರೆ ನಾಗಾರ್ಜುನ ಪಲ್ಲವಿ ಪ್ರಶಾಂತ್ ಹೆಸರನ್ನು ಬಿಗ್ ಬಾಸ್ ವಿಜೇತ ಎಂದು ಘೋಷಿಸಿದರು.
ಸಾಮಾನ್ಯ ವ್ಯಕ್ತಿಯಾಗಿ ಮುಗ್ಧತೆಯಿಂದ ಮನೆ ಪ್ರವೇಶಿಸಿದ ಪಲ್ಲವಿ ಪ್ರಶಾಂತ್ ಬಿಗ್ ಬಾಸ್ ವಿನ್ನರ್ ಆಗಿ ಗೆದ್ದು ಬಂದಿದ್ದಾರೆ.ತೆಲಂಗಾಣದ ಸಿದ್ದಿಪೇಟ್ ಜಿಲ್ಲೆಯ ದೂರದ ಹಳ್ಳಿಯ ಪಲ್ಲವಿ ಪ್ರಶಾಂತ್ ಬಿಗ್ ಬಾಸ್ ಅವಕಾಶ ಬರುತ್ತದೆ ಎಂದು ನಿರೀಕ್ಷಿಸಿರಲಿಲ್ಲ.ಸಾಮಾನ್ಯ ವ್ಯಕ್ತಿ ಹಾಗೆಯೇ ರೈತನ ಮಗ ಬಿಗ್ ಬಾಸ್ ಪ್ರಶಸ್ತಿಯನ್ನು ಗೆದ್ದಿರುವುದು ಇದೇ ಮೊದಲು ಎಂಬ ಹೆಗ್ಗಳಿಕೆಗೆ ಕಾರಣರಾದರು.ವಿನ್ನರ್ ಆಗಿರುವ ಪ್ರಶಾಂತ್ ಅವರಿಗೆ ಬಹುಮಾನದ ಜೊತೆಗೆ ಮಾರುತಿ ಬ್ಲೇಜರ್ ಕಾರು ಮತ್ತು 15 ಲಕ್ಷ ಮೌಲ್ಯದ ಜೋಯಾಲುಕ್ಕಾಸ್ ಚಿನ್ನಾಭರಣವನ್ನು ನೀಡಲಾಗಿದೆ..
ಬಿಗ್ ಬಾಸ್ ಇತಿಹಾಸದಲ್ಲಿ ಪ್ರಶಾಂತ್ ಗೆ ಈ ದಾಖಲೆ ಹೇಗೆ ಸಾಧ್ಯವಾಯಿತು.. ಅನ್ನೋದು ಇದೀಗ ಅಭಿಮಾನಿಗಳ ಕುತೂಹಲಕ್ಕೆ ಕಾರಣವಾಗಿದೆ. ಪ್ರಶಾಂತ್ ಮನೆ ಪ್ರವೇಶಿಸಿದಾಗ ಪ್ರೇಕ್ಷಕರಿಗೆ ಅವರ ಮೇಲೆ ಈ ಮಟ್ಟದ ನಿರೀಕ್ಷೆ ಇರಲಿಲ್ಲ. ರೈತನ ಮಗನಾಗಿ ತನ್ನಂತಹ ಯುವಕರಿಗೆ ಮತ್ತು ರೈತರಿಗೆ ಮಾದರಿಯಾಗಲು ಈ ಮನೆಗೆ ಬಂದಿದ್ದೇನೆ ಎಂದು ಪ್ರಶಾಂತ್ ಆಗಾಗ ನೆನಪಿಸಿಕೊಳ್ಳುತ್ತಿದ್ದರು. ಈ ಅಂಶವೇ ಪ್ರೇಕ್ಷಕರಿಗೆ ಹೆಚ್ಚು ಇಷ್ಟವಾಗಿದ್ದು.. ಜನ ಸಾಮಾನ್ಯರೆಲ್ಲ ಪ್ರಶಾಂತ್ ಗೆ ಮತ ಹಾಕಿದರು…ಒಟ್ಟಿನಲ್ಲಿ ಬಿಗ್ ಬಾಸ್ ರಿಯಾಲಿಟಿ ಶೋನಲ್ಲಿ ರೈತನ ಮಗ ಪಲ್ಲವಿ ಪ್ರಶಾಂತ್ ಇತಿಹಾಸ ಸೃಷ್ಟಿಸಿದ್ದಾರೆ ಎಂದೇ ಹೇಳಬಹುದು.