ಕರಾವಳಿಸುಳ್ಯ

ಸಂಪಾಜೆ:ಕೇರಳ ರಾಜ್ಯದಲ್ಲಿ ಕೊರೊನಾ ಪಾಸಿಟಿವ್ ಪ್ರಕರಣ ಹೆಚ್ಚಳ ಹಿನ್ನಲೆ,ಮತ್ತೆ ಚುರುಕುಪಡೆದ ಕೋವಿಡ್ ತಪಾಸಣೆ

ನ್ಯೂಸ್ ನಾಟೌಟ್ : ಕೇರಳ (Kerala) ರಾಜ್ಯದಲ್ಲಿ ಕೊರೊನಾ (Corona) ಪಾಸಿಟಿವ್ ಪ್ರಕರಣ ಹೆಚ್ಚಾಗುತ್ತಿದೆ. ಕರ್ನಾಟಕದ ಗಡಿಭಾಗದಲ್ಲೂ ಆತಂಕ ಹೆಚ್ಚಾಗಿದೆ ಎಂದು ಆರೋಗ್ಯ ಇಲಾಖೆ ಎಚ್ಚರಿಕೆ ನೀಡಿದ ಬೆನ್ನಲ್ಲೇ ಇದೀಗ ಕೋವಿಡ್‌ ತಪಾಸಣೆ ಚುರುಕು ಪಡೆದುಕೊಂಡಿದೆ.ಈ ಹಿನ್ನಲೆ ಕೊಡಗು-ಸಂಪಾಜೆ ಅರಣ್ಯ ತಪಾಸಣಾ ಚೆಕ್ ಪೋಸ್ಟ್ ನಲ್ಲಿ ಮತ್ತೆ ಕೋವಿಡ್ ತಪಾಸಣೆ ಪ್ರಾರಂಭಗೊಂಡಿದೆ.

ಕೇರಳದಲ್ಲಿ ಕೇರಳ ಸರ್ಕಾರ ಅಯ್ಯಪ್ಪ ಮಾಲಾಧಾರಿಗಳಿಗೆ ನಿಯಮಗಳನ್ನು ಹೇರಲು ನಿರ್ಧರಿಸಿದೆ.ಆರೋಗ್ಯ ಸಚಿವ ದಿನೇಶ್ ಗುಂಡುರಾವ್ ಆರೋಗ್ಯ ಇಲಾಖೆ ಸಿಬ್ಬಂದಿ ಜೊತೆ ಮತ್ತು ಅಧಿಕಾರಿಗಳ ಜೊತೆ ಸಭೆ ನಡೆಸಿದ್ದು, ಅಯ್ಯಪ್ಪ ಮಾಲಾಧಾರಿಗಳು ಸೇರಿದಂತೆ , ಕೇರಳಕ್ಕೆ ಹೋಗಿ ಬಂದವರು ಕೋವಿಡ್ ಟೆಸ್ಟ್ ಮಾಡಿಸುವ ಬಗ್ಗೆ ನಿರ್ಧಾರ ಪ್ರಕಟಿಸಲಾಗಿದೆ.ಈ ಸಂಬಂಧ ಆರೋಗ್ಯ ಇಲಾಖೆಯ ಸಿಬ್ಬಂದಿ ಕೇರಳ ರಾಜ್ಯದಿಂದ ಬರುವ ವಾಹನ ಪ್ರಯಾಣಿಕರ ಆರೋಗ್ಯ ತಪಾಸಣೆ ನಡೆಸುತ್ತಿದ್ದಾರೆ.

ದೇಶದಲ್ಲಿ (India) ದಾಖಲಾದ ಒಟ್ಟು ಪ್ರಕರಣಗಳ ಪೈಕಿ 90% ಹೊಸ ಕೋವಿಡ್ ಪ್ರಕರಣಗಳು ಕೇರಳದಲ್ಲೇ ದಾಖಲಾಗಿದೆ. ಇದೀಗ ಪತ್ತೆಯಾಗುತ್ತಿರುವ ಸೋಂಕು ಕೋವಿಡ್‌ನ ಸಬ್ ವೇರಿಯಂಟ್ JN1 ಎಂದು ದೃಢಪಟ್ಟಿರುವುದರಿಂದ ಇದು ಅಪಾಯಕಾರಿಯಲ್ಲ ಎನ್ನಲಾಗಿದ್ದು, ಹೀಗಾಗಿ ಇದನ್ನು ನಿರ್ವಹಿಸಬಹುದೆಂದು ಆರೋಗ್ಯ ಇಲಾಖೆ ಸ್ಪಷ್ಟಪಡಿಸಿದೆ.

ಹೀಗಾಗಿ ಕೇಂದ್ರದ ಅಧಿಕಾರಿಗಳ ಜತೆ ನಮ್ಮ ಅಧಿಕಾರಿಗಳು ಚರ್ಚೆ ನಡೆಸಿದ್ದಾರೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡುರಾವ್ ತಿಳಿಸಿದ್ದಾರೆ. ಐಎಲ್‌ಐ ಹಾಗೂ ಸಾರಿ ಪ್ರಕರಣ ಕಂಡು ಬಂದರೆ ಕಡ್ಡಾಯವಾಗಿ ಟೆಸ್ಟ್ ಮಾಡಬೇಕು. ಕೊರೊನಾ ಲಕ್ಷಣ ಕಂಡು ಬಂದರೆ ಕಡ್ಡಾಯ ಪರೀಕ್ಷೆಗೆ ಸೂಚಿಸಲಾಗಿದೆ ಎಂದು ತಿಳಿಸಿದ್ದಾರೆ.

Related posts

ಬಿಟುಮೆನ್ ಆಯಿಲ್ ಫಿಲ್ಲಿಂಗ್ ವೇಳೆ ಪೈಪ್‌ ಸ್ಪೋಟ:ಮೂವರಿಗೆ ಗಾಯ,ಓರ್ವ ಗಂಭೀರ

ಕಲ್ಲುಗುಂಡಿ, ಕೊಯನಾಡಿಗೆ ಎಸ್ ಡಿಪಿಐ ರಾಜ್ಯಾಧ್ಯಕ್ಷ ಭೇಟಿ

ಉಡುಪಿ: ಆತ್ಮಹತ್ಯೆಗೆ ಯತ್ನಿಸುತ್ತಿದ್ದಾಗ ಹಗ್ಗ ತುಂಡಾಗಿ ಬಿದ್ದು ವ್ಯಕ್ತಿ ಸಾವು..! ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದಿಂದ ಅಂಗಾಗ ದಾನ ಪ್ರತಿಜ್ಞಾ ಪತ್ರ ಪಡೆದಿದ್ದ ವ್ಯಕ್ತಿ..!