ನ್ಯೂಸ್ ನಾಟೌಟ್ : ಭಾರತಕ್ಕೆ ಬೇಕಿದ್ದ ಮೋಸ್ಟ್ ವಾಂಟೆಡ್ ಉಗ್ರ, ಭೂಗತ ಪಾತಕಿ ದಾವೂದ್ ಇಬ್ರಾಹಿಂನನ್ನು ಪಾಕಿಸ್ತಾನದ ಕರಾಚಿಯ ಆಸ್ಪತ್ರೆಯ ದಾಖಲಿಸಲಾಗಿದೆ ಮತ್ತು ಅಹಿತಕರ ಘಟನೆ ನಡೆಯದಂತೆ ಇಂಟರ್ ನೆಟ್ ಸೇವೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ ಎಂದು ವರದಿ ತಿಳಿಸಿದೆ.
ಆಸ್ಪತ್ರೆಯ ಮಹಡಿಯಲ್ಲಿ ದಾವೂದ್ ನನ್ನು ಮಾತ್ರ ಇರಿಸಲಾಗಿದ್ದು ಹತ್ತಿರದ ಕುಟುಂಬ ಸದಸ್ಯರಿಗೆ ಮಾತ್ರ ಪ್ರವೇಶಾವಕಾಶ ನೀಡಲಾಗಿದೆ. ಆತ ವಿಷ ಸೇವಿಸಿರಬಹುದು ಎಂದು ಶಂಕೆ ವ್ಯಕ್ತವಾಗಿದ್ದು, ನಿಖರವಾದ ಮಾಹಿತಿಯನ್ನು ಪಾಕ್ ಆರೋಗ್ಯ ಇಲಾಖೆ ಅಧಿಕೃತವಾಗಿ ಬಿಡುಗಡೆ ಮಾಡಿಲ್ಲ.
1993ರ ಮುಂಬೈ ಸ್ಫೋಟದ ಮಾಸ್ಟರ್ ಮೈಂಡ್ ಮತ್ತು ಭಾರತದ ಮೋಸ್ಟ್ ವಾಂಟೆಡ್ ದಾವೂದ್ ಇಬ್ರಾಹಿಂಗೆ ವಿಷ ಪ್ರಾಶನ ಮಾಡಲಾಗಿದೆ ಎಂದು ಹೇಳಲಾಗಿದೆ. ಕಳೆದ 2 ದಿನಗಳಿಂದ ದಾವೂದ್ ಆಸ್ಪತ್ರೆಯಲ್ಲಿದ್ದಾರೆ ಎಂದು ತಿಳಿದುಬಂದಿದ್ದು, ಕರಾಚಿ ಆಸ್ಪತ್ರೆಯಲ್ಲಿ ಇರಿಸಲಾಗಿದೆ.
ಭೂಗತ ಪಾತಕಿ ಆಸ್ಪತ್ರೆಗೆ ದಾಖಲಾಗಿರುವ ಕುರಿತು ಮುಂಬೈ ಪೊಲೀಸರು ಆತನ ಸಂಬಂಧಿಕರಾದ ಅಲಿಶಾ ಪಾರ್ಕರ್ ಮತ್ತು ಸಾಜಿದ್ ವಾಗ್ಲೆ ಅವರಿಂದ ಹೆಚ್ಚಿನ ಮಾಹಿತಿ ಪಡೆಯಲು ಪ್ರಯತ್ನಿಸುತ್ತಿದ್ದರು. ದಾವೂದ್ ಎರಡನೇ ವಿವಾಹ ಆದ ಬಳಿಕ ಕರಾಚಿಯಲ್ಲಿ ಇರುತ್ತಾನೆ ಆತನ ಸಹೋದರಿ ಹಸೀನಾ ಪಾರ್ಕರ್ ಅವರ ಪುತ್ರ ರಾಷ್ಟ್ರೀಯ ತನಿಖಾ ಸಂಸ್ಥೆಗೆ (NIA) ತಿಳಿಸಿದ್ದರು.
ದಾವೂದ್ ಇಬ್ರಾಹಿಂನನ್ನು ಆಸ್ಪತ್ರೆಯೊಳಗೆ ಬಿಗಿ ಭದ್ರತೆಯಲ್ಲಿ ಇರಿಸಲಾಗಿದೆ ಮತ್ತು ಆ ಇಡೀ ಕಟ್ಟಡದ ಫ್ಲೋರ್ನಲ್ಲಿ ಅವರೊಬ್ಬರೇ ಏಕೈಕ ರೋಗಿ ಎಂದು ತಿಳಿದುಬಂದಿದೆ.
ಉನ್ನತ ಆಸ್ಪತ್ರೆ ಅಧಿಕಾರಿಗಳು ಮತ್ತು ಅವರ ನಿಕಟ ಕುಟುಂಬ ಸದಸ್ಯರಿಗೆ ಮಾತ್ರ ಮಹಡಿಗೆ ಪ್ರವೇಶವಿದೆ ಎಂದೂ ಹೇಳಲಾಗಿದೆ.