ನ್ಯೂಸ್ ನಾಟೌಟ್ : ಲೋಕಸಭೆಯಿಂದ ಐವರು ಕಾಂಗ್ರೆಸ್(Congress) ಸಂಸದರನ್ನು ಅಮಾನತ್ತುಗೊಳಿಸಿದ ಘಟನೆ ಇಂದು (ಡಿ.14) ರಂದು ನಡೆಯಿತು.
ಲೋಕ ಸಭಾ ಕಲಾಪದ ವೇಳೆ ಭಾರಿ ಭದ್ರತಾ ಲೋಪ ಪ್ರಕರಣದ ಕುರಿತು ಸದನದ ಬಾವಿಗಿಳಿದು ಪ್ರತಿಭಟಿಸಿದ್ದ ಐವರು ಕಾಂಗ್ರೆಸ್ ಸಂಸದರನ್ನು ಚಳಿಗಾಲದ ಅಧಿವೇಶನ ಮುಗಿಯುವವರೆಗೂ ಅಮಾನತ್ತುಗೊಳಿಸಲಾಗಿದೆ ಎಂದು ವರದಿ ತಿಳಿಸಿದೆ.
ಟಿಎನ್ ಪ್ರತಾಪನ್, ಹೈಬಿ ಈಡನ್, ಜೋತಿಮಣಿ, ರಮ್ಯಾ ಹರಿದಾಸ್ ಮತ್ತು ಡೀನ್ ಕುರಿಯಾಕೋಸ್ ಎಂಬ ಐವರನ್ನು ಅಮಾನತ್ತುಗೊಳಿಸಲಾಗಿದೆ. ಈ ವಿಚಾರದಲ್ಲಿ ಯಾವುದೇ ಸದಸ್ಯರಿಂದ ರಾಜಕೀಯ ನಿರೀಕ್ಷಿಸುವುದಿಲ್ಲ, ಪಕ್ಷ ರಾಜಕಾರಣ ಮೀರಿ ಕೆಲಸ ಮಾಡಬೇಕು ಎಂದು ಸ್ಪೀಕರ್ ಹೇಳಿದ್ದಾರೆ ಎನ್ನಲಾಗಿದೆ.
ಈ ಹಿಂದೆಯೂ ಸಂಸತ್ತಿನಲ್ಲಿ ಇಂತಹ ಭದ್ರತಾ ಲೋಪದ ಘಟನೆಗಳು ನಡೆದಿದ್ದು, ಅಂದಿನ ಲೋಕಸಭಾ ಸ್ಪೀಕರ್ಗಳ ಸೂಚನೆಯಂತೆ ಕಲಾಪ ನಡೆಸಲಾಗಿದೆ.
ಲೋಕಸಭೆಯಲ್ಲಿ ಬುಧವಾರ ಗದ್ದಲ ಉಂಟಾಗಿತ್ತು, ಪ್ರೇಕ್ಷಕರ ಗ್ಯಾಲರಿಯಿಂದ ಸಂಸದರಿರುವ ಕಡೆಗೆ ಇಬ್ಬರು ನುಗ್ಗಿದ್ದರು, ಅಷ್ಟೇ ಅಲ್ಲದೇ ಸ್ಮೋಕ್ ಬಾಂಬ್ ಸಿಡಿಸಿದ್ದರು.
ಈ ಕುರಿತು ಕಾಂಗ್ರೆಸ್ ಸಂಸದರು ಸದನದ ಬಾವಿಗಿಳಿದು ಪ್ರತಿಭಟನೆ ನಡೆಸಿದ್ದಾರೆ. ಸಂಸದರ ಅಶಿಸ್ತಿನ ವರ್ತನೆಗಾಗಿ ಐವರು ಸಂಸದರನ್ನು ಲೋಕಸಭೆಯಿಂದ ಅಮಾನತ್ತುಗೊಳಿಸಲಾಗಿದೆ ಎಂದು ವರದಿ ತಿಳಿಸಿದೆ.