ನ್ಯೂಸ್ ನಾಟೌಟ್: ಅಯ್ಯಪ್ಪಸ್ವಾಮಿ ಮಾಲಾಧಾರಿಗಳ ಮೇಲೆ ಹಲ್ಲೆ ನಡೆಸಿದ ಘಟನೆ ತಮಿಳುನಾಡಿನಲ್ಲಿ (Tamilnadu) ಇಂದು(ಡಿ.12) ರಂದು ನಡೆದಿದೆ.
ಶಬರಿಮಲೆಯಿಂದ ವಾಪಸ್ಸಾಗಿ ಮಾಲಾಧಾರಿಗಳು ತಮಿಳುನಾಡಿನ ರಂಗನಾಥ್ ಸ್ವಾಮಿ (Ranganathswamy) ದೇವಸ್ಥಾನದಲ್ಲಿ ಪೂಜೆಗೆ ಆಗಮಿಸಿದ್ದರು ಎನ್ನಲಾಗಿದೆ. ಈ ವೇಳೆ ದೇವಸ್ಥಾನ ಆಡಳಿತ ಮಂಡಳಿಯು ಕೆಲವರಿಗೆ ವಿಶೇಷ ದರ್ಶನಕ್ಕೆ ಅವಕಾಶ ನೀಡುತ್ತಿತ್ತು. ಹೀಗಾಗಿ ಈ ಕ್ರಮವನ್ನು ಅಯ್ಯಪ್ಪಸ್ವಾಮಿ ಮಾಲಾಧಾರಿಗಳು ಪ್ರಶ್ನಿಸಿದರು ಎಂದು ವರದಿ ತಿಳಿಸಿದೆ.
ಈ ವೇಳೆ ಘರ್ಷಣೆ ಏರ್ಪಟ್ಟು ಮಾಲಾಧಾರಿಗಳ ಮೇಲೆ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ. ಸದ್ಯ ಘಟನೆಯನ್ನು ತಮಿಳುನಾಡು ರಾಜ್ಯಾಧ್ಯಕ್ಷ ಅಣ್ಣಾಮಲೈ (Annamalai) ಖಂಡಿಸಿದ್ದಾರೆ.
ಹಿಂದೂ ಧರ್ಮದಲ್ಲಿ ನಂಬಿಕೆ ಇಲ್ಲದ ಸರ್ಕಾರದ ಅವಧಿಯಲ್ಲಿ ಇಂತಹ ಘಟನೆಗಳು ನಡೆಯುತ್ತಿವೆ. ಇಂತಹ ದುರ್ವರ್ತನೆ ಕಾರಣಕ್ಕಾಗಿ ಅವರನ್ನು ಅಧಿಕಾರದಿಂದ ಕೆಳಗಿಳಿಸಲು ಬಿಜೆಪಿ (BJP) ಬಯಸುತ್ತಿದೆ ಎಂದು ಹೇಳಿಕೆ ನೀಡಿದ್ದಾರೆ.