ನ್ಯೂಸ್ ನಾಟೌಟ್: ಕಾಂತಾರ ಸಿನಿಮಾ ರಾಷ್ಟ್ರಮಟ್ಟದಲ್ಲಿ ಮಾತ್ರವಲ್ಲದೆ ಅಂತಾರಾಷ್ಟ್ರೀಯ ಮಟ್ಟದಲ್ಲಿಯೂ ಸದ್ದು ಮಾಡಿತ್ತು ಮತ್ತು ಈಗ ಈ ಸಿನಿಮಾ ಬಗ್ಗೆ ಚಿತ್ರತಂಡ ಇನ್ನೊಂದು ಗುಡ್ನ್ಯೂಸ್ ಕೊಟ್ಟಿದೆ.
ಇಂದು (ಡಿ.12) ರಂದು ಹೊಂಬಾಳೆ ಫಿಲ್ಮ್ ತಂಡ ಹೊಸ ಪೋಸ್ಟರ್ ಅನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದೆ.
ಆ ಪೋಸ್ಟರ್ ನಲ್ಲಿ ಕಾಂತಾರ ಸಿನಿಮಾಕ್ಕೆ ಕಲಾವಿದರು ಬೇಕಾಗಿದ್ದಾರೆ ಎಂದು ವಿವರ ನೀಡಿದ್ದು, 30 ರಿಂದ 60 ವಯಸ್ಸಿನ ವರೆಗಿನ ಪುರುಷರು ಮತ್ತು 18 ರಿಂದ 60 ವಯಸ್ಸಿನೊಳಗಿನ ಮಹಿಳೆಯರು ಬೇಕಾಗಿದ್ದಾರೆ ಎನ್ನಲಾಗಿದೆ.
ಕಾಂತಾರ ಚಾಪ್ಟರ್ ಒನ್ ನಲ್ಲಿ ಇತಿಹಾಸದ ನಿಗೂಢತೆ ಇರುತ್ತದೆ. ಪ್ರತಿಕ್ಷಣವೂ ದೈವಿಕ ಸ್ಪರ್ಶವೂ ಅನುಭವಕ್ಕೆ ಬರುತ್ತದೆ. ಈ ಮೂಲಕ ಇಲ್ಲಿ ಇನ್ನೂ ಒಂದು ವಿಸ್ಮಯ ಲೋಕ ತೆರೆದುಕೊಳ್ಳುತ್ತಿದೆ. ಹಾಗಂತ ಸ್ವತಃ ಸಿನಿಮಾ ನಿರ್ಮಾಣ ಸಂಸ್ಥೆ ಹೊಂಬಾಳೆ ಅಧಿಕೃತವಾಗಿಯೇ ಹೇಳಿಕೊಂಡಿದೆ.
ಸಿನಿಮಾ ತಂಡ ಕೆಲ ನಿಯಮಗಳನ್ನು ಹೇಳಿದ್ದು, ರೀಲ್ಸ್ ಮತ್ತು ಅದಕ್ಕೆ ಹೋಲು ಇತರೆ ವಿಡಿಯೋಗಳ್ನನ್ನು ಪರಿಗಣಿಸಲಾಗುವುದಿಲ್ಲ ಎಂದು ಹೇಳಲಾಗಿದೆ.
ಕಾಂತಾರ ಚಾಪ್ಟರ್ ಒನ್ (Kantara Chapter-1) ಸಿನಿಮಾದ ಫಸ್ಟ್ ಲುಕ್ ಟೀಸರ್ ಸಖತ್ ವೈರಲ್ ಆಗಿದೆ. ಅಪ್ ಲೋಡ್ ಆದ ಮೂರೇ ಗಂಟೆಯಲ್ಲಿ 2 ಮಿಲಿಯನ್ ವೀವ್ಸ್ ಪಡೆದು ಮುನ್ನುಗ್ಗುತ್ತಿದೆ.
ಕೆಜಿಎಫ್ ಚಿತ್ರಕ್ಕಾಗಿಯೂ ಜನ ಇದೇ ರೀತಿ ಕಾಯ್ತಾ ಇದ್ದರು. ಕೆಜಿಎಫ್ -2 ಚಿತ್ರದ ಟ್ರೈಲರ್ ಬಂದಾಗ ಎಲ್ಲೆಡೆ ವೈರಲ್ ಆಗಿತ್ತು. ಅದೇ ರೀತಿನೇ ಕೆಜಿಎಫ್ ಚಾಪ್ಟರ್ ಒನ್ ಚಿತ್ರದ ಫಸ್ಟ್ ಲುಕ್ ಟೀಸರ್ ಅತಿ ಹೆಚ್ಚು ವೀಕ್ಷಿಸಲ್ಪಡುತ್ತಿದೆ. ಕಾಂತಾರ ಚಾಪ್ಟರ್ ಒನ್ ಚಿತ್ರದ ಫಸ್ಟ್ ಲುಕ್ ಟೀಸರ್ ವೈರಲ್ ಆಗಿದೆ. ಯುಟ್ಯೂಬ್ನಲ್ಲಿ ವೀಕ್ಷಕರ ಸಂಖ್ಯೆ ಏರುತ್ತಿದೆ. ಮೂರೇ ಮೂರು ಗಂಟೆಯಲ್ಲಿ 2 ಮಿಲಿಯನ್ ವೀವ್ಸ್ ಬಂದಿದೆ. ಅಲ್ಲಿಗೆ ಈ ಚಿತ್ರದ ಕ್ರೇಜ್ ಎಷ್ಟಿದೆ ಅನ್ನೋದು ತಿಳಿಯುತ್ತದೆ. ವಿಶೇಷವಾಗಿ ಈ ಸಿನಿಮಾದ ಫಸ್ಟ್ ಲುಕ್ ಬಗ್ಗೆ ಸಾಕಷ್ಟು ಕುತೂಹಲ ಇತ್ತು.
ಉಡುಪಿಯ ಗಣೇಶ ದೇವಸ್ಥಾನದಲ್ಲಿ ಈ ಚಿತ್ರದ ಮುಹೂರ್ತ ನೆರವೇರಿದೆ. ಹೊಂಬಾಳೆ ಸಂಸ್ಥೆಯ ಯುಟ್ಯೂಬ್ ಚಾನೆಲ್ನಲ್ಲಿ ಇದರ ಫಸ್ಟ್ ಲುಕ್ ಟೀಸರ್ ರಿಲೀಸ್ ಆಗಿತ್ತು.