ನ್ಯೂಸ್ ನಾಟೌಟ್: ಮನೆ ಕಿಟಕಿಯನ್ನು ಸ್ವಚ್ಛಗೊಳಿಸುವ ವೇಳೆ ಕಾಲು ಜಾರಿ 5ನೇ ಮಹಡಿಯಿಂದ ಬಿದ್ದು ಗೃಹಿಣಿ ಸಾವನ್ನಪ್ಪಿರುವ ಘಟನೆ ಬೆಂಗಳೂರಿನಿಂದ ವರದಿಯಾಗಿದೆ. ಕಾಡುಗುಡಿಯ ದೊಡ್ಡಬನಹಳ್ಳಿಯಲ್ಲಿನ ವಿಂಧ್ಯಗಿರಿ ಅಪಾರ್ಟ್ಮೆಂಟ್ನಲ್ಲಿ ಈ ದುರ್ಘಟನೆ ಸಂಭವಿಸಿದೆ.
ಖೂಷ್ಬು ಅಶೀಷ್ ತ್ರಿವೇದಿ (31) ಸಾವನ್ನಪ್ಪಿರುವ ಮಹಿಳೆ. ವಿಂಧ್ಯಗಿರಿ ಅಪಾರ್ಟ್ಮೆಂಟ್ನಲ್ಲಿ ವಾಸವಿರುವ ಈಕೆ, ಎಂದಿನಂತೆ ತಮ್ಮ ಮನೆ ಸ್ವಚ್ಛಗೊಳಿಸುತ್ತಿದ್ದರು. ಈ ವೇಳೆ ಕಾಲು ಜಾರಿದ್ದು ಕಿಟಕಿ ಮೂಲಕ 5ನೇ ಮಹಡಿಯಿಂದ ಕೆಳಗೆ ಬಿದ್ದು ಸಾವನ್ನಪ್ಪಿದ್ದಾರೆ. ಇನ್ನು ಈ ಸಂಬಂಧ ಕಾಡುಗೋಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.