ನ್ಯೂಸ್ ನಾಟೌಟ್: ಶಿವರಾಜ್ ಕುಮಾರ್ ಗೆ (Shivaraj Kumar) ಲೋಕಸಭೆಗೆ ನಿಲ್ಲಲು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಆಫರ್ ಕೊಟ್ಟಿದ್ದು, ಸಿನಿಮಾ ಅವಕಾಶ ನಿಮಗೆ ಬೇಕಾದಷ್ಟಿದೆ ಆದರೆ ಈ ಅವಕಾಶ ಸಿಗೋದು ಕೆಲವರಿಗೆ ಮಾತ್ರ ಇದನ್ನು ಉಪಯೋಗಿಸಿಕೊಳ್ಳಿ ಎಂದಿದ್ದಾರೆ.
ಆಗ ಅವರು, ಇಲ್ಲ ಒಂದು 5 ಚಿತ್ರ ಒಪ್ಪಿಕೊಂಡಿದ್ದೇನೆ ಅಂದ್ರು. ಚಿತ್ರ ಯಾವಾಗಾದ್ರೂ ಮಾಡಬಹುದು. ಆದರೆ ಪಾರ್ಲಿಮೆಂಟ್ಗೆ ಹೋಗುವ ಅವಕಾಶ ಎಲ್ಲರಿಗೂ ಸಿಗಲ್ಲ ಅಂತಾ ಹೇಳಿದ್ದೇನೆ ಎಂದು ಡಿಕೆಶಿ (DK Shivakumar) ತಿಳಿಸಿದರು.
ಇಂದು(ಡಿ.೧೦) ಅರಮನೆ ಮೈದಾನದಲ್ಲಿ ಈಡಿಗರ (Ediga) ಅಮೃತ ಮಹೋತ್ಸವ ಕಾರ್ಯಕ್ರಮದಲ್ಲಿ ಡಿಕೆಶಿ ನಟ ಶಿವಣ್ಣಗೆ ಈ ಆಫರ್ ನೀಡಿದ್ದಾರೆ. ಪಾರ್ಲಿಮೆಂಟಿಗೆ ರೆಡಿ ಆಗಿ ಅಂತ ನಾನು ಈಗಾಗಲೇ ಶಿವಣ್ಣಗೆ ಹೇಳಿದ್ದೇನೆ.
ಲೋಕಸಭೆಯಲ್ಲಿ (Loksabha) ನಮಗೆ ಆಶೀರ್ವಾದ ಮಾಡುವ ಕೆಲಸ ನೀವು ಮಾಡಬೇಕು. ಮಂಗಳೂರು, ಉಡುಪಿ, ಉತ್ತರ ಕರ್ನಾಟಕ ಎಲ್ಲೆ ಇರ್ಲಿ ನಮ್ಮ ಅಭ್ಯರ್ಥಿ ಗೆಲ್ಲಿಸುವ ಕೆಲಸ ಮಾಡಿ ಎಂದರು.
ನನ್ನ ರಾಜಕೀಯ ಜೀವನ ಆರಂಭವಾಗಿದ್ದು ಬಂಗಾರಪ್ಪನವರ (Bangarappa) ಜೊತೆಯಲ್ಲಿ ನಿಮ್ಮ ಉತ್ಸಾಹ ದೊಡ್ಡ ಶಕ್ತಿ ಬರುತ್ತಿದೆ. ಮಂಗಳೂರು ಹೊರತುಪಡಿಸಿ ಇಡೀ ರಾಜ್ಯದ ಈಡಿಗ ಸಮುದಾಯ ಕಾಂಗ್ರೆಸ್ ಸರ್ಕಾರವನ್ನು ಅಧಿಕಾರಕ್ಕೆ ತಂದಿದ್ದಿರಾ. ನಿಮಗೆ ಕೊಟ್ಟ ಮಾತನ್ನು ಪೂರೈಸುತ್ತೇವೆ. ಇಂದಿನ ಸಮಾವೇಶದಿಂದ ಕಾಂಗ್ರೆಸ್ ಸರ್ಕಾರ ನಿಮ್ಮ ಜೊತೆ ಇದ್ದೇವೆ ಅಂತಾ ತೋರಿಸಿದ್ದೀರಾ. ಯಾರು ನಮಗೆ ಸಹಾಯ ಮಾಡ್ತಾರೆ ಅವರಿಗೆ ಸಹಾಯ ಮಾಡೋದು ನಮ್ಮ ಸಿದ್ದಾಂತ. ನಿಮ್ಮ ಜೊತೆ ನಮ್ಮ ಸರ್ಕಾರ ಇದೆ ಎಂದು ಡಿಸಿಎಂ ಹೇಳಿದ್ದಾರೆ.
ಇದಕ್ಕೆ ಪ್ರತಿಕ್ರಿಯಿಸಿದ ಶಿವರಾಜ್ ಕುಮಾರ್ ನಾನು ರಾಜಕೀಯಕ್ಕೆ ಬರೋದಿಲ್ಲ, ಆದರೆ ನನ್ನ ಪತ್ನಿ ಬರುತ್ತಾರೆ, ಅವರಿಗೆ ಬೆಂಬಲವಾಗಿ ನಿಲ್ಲುತ್ತೇನೆ ಎಂಬ ಅರ್ಥದಲ್ಲಿ ಉತ್ತರಿಸಿದ್ದಾರೆ.