ನ್ಯೂಸ್ ನಾಟೌಟ್ :ನಟಿ ಲೀಲಾವತಿ ಅವರು ನಮ್ಮೆಲ್ಲರನ್ನು ಬಿಟ್ಟು ಬಾರದ ಲೋಕಕ್ಕೆ ತೆರಳಿದ್ದಾರೆ. ಇವರ ಅಗಲುವಿಕೆ ನೋವು ಇಡೀ ರಾಜ್ಯದ ಜನತೆಗೆ ಸಹಿಸಲಾಗುತ್ತಿಲ್ಲ.
1937ರಲ್ಲಿ ಹುಟ್ಟಿದ್ದ ಲೀಲಾವತಿ ಅವರು ಮೊದಲು ಸಿನಿಮಾದಲ್ಲಿ ನಟಿಸಿದ್ದು 1949ರಲ್ಲಿ. ಅವರು ಹುಟ್ಟಿದ್ದು ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿಯ ನಾವೂರು ಗ್ರಾಮದ ಮುರ ಎಂಬಲ್ಲಿ. ತಮ್ಮ 12-13ನೇ ವಯಸ್ಸಿನಲ್ಲಿ ಬೆಳ್ತಂಗಡಿಯಲ್ಲಿದ್ದವರು ತದ ನಂತರ ಅಲ್ಲಿನ ಸಂಬಂಧವನ್ನು ನಿಧಾನಕ್ಕೆ ಕಡಿದುಕೊಂಡಿದ್ದರು.ಆದರೆ ತಮ್ಮ ಮಾತೃಭಾಷೆ ತುಳುವಿನ ಮೇಲಿನ ಪ್ರೀತಿ ಹಾಗೆಯೇ ಇತ್ತು ಅನ್ನೋದಕ್ಕೆ ಹಲವು ನಿದರ್ಶನಗಳಿವೆ.ಮನೆಯಲ್ಲೂ ತುಳು ಮಾತನಾಡುತ್ತಿದ್ದರಲ್ಲದೇ ತುಳು ಸಿನಿಮಾದಲ್ಲಿಯೂ ಅಭಿನಯಿಸಿದ್ದರು.
ಇವಿಷ್ಟು ಮಾತ್ರವಲ್ಲ, ತಮ್ಮ ಮಗ ವಿನೋದ್ ರಾಜ್ ಕುಮಾರ್ ಅವರಿಗೂ ತುಳು ಭಾಷೆಯನ್ನು ಕಲಿಸಿಕೊಟ್ಟಿದ್ದರು.ಲೀಲಾವತಿ ಅವರು ತುಳುಭಾಷೆಯನ್ನು ಮಗ ವಿನೋದ್ ರಾಜ್ ಗೂ ಕಲಿಸಿದ್ದರು. ವಿನೋದ್ ಹುಟ್ಟಿದ್ದು ಚೆನ್ನೈನ ತಮಿಳು ವಾತಾವರಣದಲ್ಲಿ.ಬೆಳೆದದ್ದು ಬೆಂಗಳೂರಿನಲ್ಲಿ. ಹೀಗಿದ್ದರೂ ಕೂಡ ಅಮ್ಮ ಮತ್ತು ಮಗ ಕೊನೆಯವರೆಗೆ ಮಾತನಾಡಿದ್ದು ತುಳುವಿನಲ್ಲೇ ಅನ್ನೋದು ವಿಶೇಷ..!
ಇತ್ತೀಚೆಗೆ ಆರೋಗ್ಯ ಹದಗೆಟ್ಟು ಲೀಲಾವತಿ ಅವರನ್ನು ನೋಡಲು ಗಣ್ಯರು ಬಂದಿದ್ದರು.ಚಿತ್ರರಂಗದ ದೊಡ್ಡ ದೊಡ್ಡ ಗಣ್ಯರು ಅಮ್ಮನ ಆರೋಗ್ಯವನ್ನು ವಿಚಾರಿಸಿ ಹೋಗಿದ್ದರು.ಈ ವೇಲೆ ಮಗ ವಿನೋದ್ ರಾಜ್ ಅವರು ಅಮ್ಮನನ್ನು ಎಬ್ಬಿಸಿ ಮಾತನಾಡುತ್ತಿದ್ದುದು ತುಳುವಿನಲ್ಲೇ,ಅಮ್ಮಾ..ಲಕ್ಕ್ಲೇ ಏರ್ ಬತ್ತೆರ್ ತೂಲೆ.. ದರ್ಶನ್ ಬತ್ತೆರ್, ಶಿವಣ್ಣ ಬತ್ತೆರ್ ತೂಲೆ (ಅಮ್ಮಾ ಎದ್ದೇಳಿ, ಯಾರು ಬಂದರು ನೋಡಿ..ದರ್ಶನ್, ಶಿವಣ್ಣ ಬಂದರು ನೋಡಿʼʼ ಎಂದು ಹೇಳುತ್ತಿದ್ದರು ವಿನೋದ್ ರಾಜ್.
ಈ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿತ್ತು. ಮಾತ್ರವಲ್ಲ ಲೀಲಾ ಅಮ್ಮ ಮಾತೃಭಾಷೆಯ ಮೇಲಿಟ್ಟಿರುವ ಪ್ರೀತಿ ಎಂಥಹದ್ದು ಅನ್ನೋದಕ್ಕೆ ಇದೇ ಸಾಕಲ್ಲವೇ?