ನ್ಯೂಸ್ ನಾಟೌಟ್ : ಚಿಲ್ಲರೆ ಸಮಸ್ಯೆ ಹಿನ್ನೆಲೆ NWKRTC ಫೋನ್ ಪೇ ಮೊರೆ ಮೂಲಕ ಟಿಕೆಟ್ ದರ ಪಡೆಯುವ ವಿನೂತನ ಪ್ರಯೋಗ ಆರಂಭಿಸಿದೆ.
ಬಸ್ ಗಳಲ್ಲಿ ಸ್ಕ್ಯಾನರ್ ವ್ಯವಸ್ಥೆ ಮೆಚ್ಚುಗೆ ಪಡೆಯುತ್ತಿದ್ದು, ಕಂಡಕ್ಟರ್ ಕೊರಳಿಗೆ ಸ್ಕ್ಯಾನರ್ ಹಾಕಿರುವ ಫೋಟೋಗಳು ವೈರಲ್ ಆಗುತ್ತಿವೆ. ಪ್ರಯಾಣಿಕರಲ್ಲಿ ಚಿಲ್ಲರೆ ಹಣದ ಸಮಸ್ಯೆ ಹಿನ್ನೆಲೆ ಕ್ಯಾಶ್ ಲೆಸ್ ವ್ಯವಹಾರಕ್ಕೆ NWKRTC ಮುಂದಾಗಿದೆ.
ಹುಬ್ಬಳ್ಳಿ ಡಿಪೋ ವತಿಯಿಂದ ಕಂಡೆಕ್ಟರ್ ಗಳಿಗೆ ಸಾರಿಗೆ ಇಲಾಖೆ ಅಧಿಕಾರಿಗಳು ಸ್ಕ್ಯಾನರ್ ನೀಡಿದ್ದಾರೆ. ಹುಬ್ಬಳ್ಳಿಯಿಂದ ಬೀಳಗಿ ಮಾರ್ಗವಾಗಿ ವಿಜಯಪುರಕ್ಕೆ ಹೊರಟಿದ್ದ ಬಸ್ನಲ್ಲಿ ಸ್ಕ್ಯಾನರ್ ಕಂಡು ಬಾಗಲಕೋಟೆ ಜಿಲ್ಲೆ ಬೀಳಗಿ ಪಟ್ಟಣದ ಪ್ರಯಾಣಿಕರು ಸಂತೋಷ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ.
ಟಿಕೆಟ್ ಖರೀದಿಸುವಾಗ ಪ್ರಯಾಣಿಕರಿಗೆ ಚಿಲ್ಲರೆ ಸಮಸ್ಯೆ ಎದುರಾಗುತ್ತಿದ್ದು, ಹಾರ್ಡ್ ಕ್ಯಾಶ್ ಇಲ್ಲದವರಿಗೂ ಟಿಕೇಟ್ ಖರೀದಿಸಲು ಸಮಸ್ಯೆಯಾಗದಂತೆ ವ್ಯವಸ್ಥೆ ಜಾರಿಗೆ ತರಲಾಗಿದೆ.