ನ್ಯೂಸ್ ನಾಟೌಟ್ :ಅಪ್ರಾಪ್ತ ವಯಸ್ಸಿನ ಬಾಲಕಿಯನ್ನು ಪ್ರೀತಿಸಿ ಮದುವೆಯಾಗುವುದಾಗಿ ನಂಬಿಸಿ ಅತ್ಯಾಚಾರ ಎಸಗಿದ್ದ ಪೋಕ್ಸೋ ಪ್ರಕರಣದ ಆರೋಪ ಸಾಬೀತಾದ ಹಿನ್ನೆಲೆ ಅಪರಾಧಿಗೆ ನ್ಯಾಯಾಲಯ 20 ವರ್ಷ ಕಠಿನ ಶಿಕ್ಷೆ ಮತ್ತು 50 ಸಾವಿರ ರೂ. ದಂಡ ವಿಧಿಸಿ ತೀರ್ಪು ನೀಡಿದೆ.
ಆರೋಪಿಯು ಶ್ರೀಮಂಗಲ ಠಾಣಾ ವ್ಯಾಪ್ತಿಯ ಪೂಜೆಕಲ್ಲು ನಿವಾಸಿ ಆನಂದ್ ಕುಮಾರ್ ಶಿಕ್ಷೆಗೊಳಗಾದವ.ಆನಂದ್ ಕುಮಾರ್ ಅಲಿಯಾಸ್ ಕುಶಾ ಅರುಣ 2017ರ ಜನವರಿಯಿಂದ ಜೂನ್ 30ರ ಅವಧಿಯಲ್ಲಿ ಅಪ್ರಾಪ್ತ ವಯಸ್ಸಿನ ಬಾಲಕಿ ಮೇಲೆ ಅತ್ಯಾಚಾರ ಎಸಗಿದ್ದನು. ಮಾತ್ರವಲ್ಲದೇ ಬಾಲಕಿಯ ಮನೆಗೂ ಆಕೆಯ ತಂದೆ ತಾಯಿ ಇಲ್ಲದ ಸಮಯದಲ್ಲಿ ಪ್ರವೇಶ ಮಾಡಿ ಶ್ರೀಮಂಗಲಕ್ಕೆ ಬರುವಂತೆ ಕರೆದಿದ್ದನು ಎನ್ನಲಾಗಿದೆ. ಇದಕ್ಕೆ ಬಾಲಕಿ ಒಪ್ಪದಿದ್ದಾಗ ಕೊಲೆ ಮಾಡುವುದಾಗಿ ಬೆದರಿಸಿದ್ದ ಎನ್ನಲಾಗಿತ್ತು.ಮಾತ್ರವಲ್ಲದೇ ತನ್ನ ಜತೆಯಲ್ಲಿ ಕರೆದುಕೊಂಡು ಹೋಗಿ ಅವನ ಮನೆಯಲ್ಲಿ ಬಾಲಕಿ ಮೇಲೆ ದೊಣ್ಣೆಯಿಂದ ಹಲ್ಲೆ ಮಾಡಿ ಗಾಯಗೊಳಿಸಿದ್ದಲ್ಲದೇ ಅತ್ಯಾಚಾರ ಎಸಗಿದ್ದ ಎಂದು ಆರೋಪಿಸಿ ದೂರು ದಾಖಲಾಗಿತ್ತು.
ಈ ಕುರಿತು ಶ್ರೀಮಂಗಲ ಪೊಲೀಸರು ಪೋಕ್ಸೋ ಕಾಯಿದೆ ಅಡಿ ಪ್ರಕರಣ ದಾಖಲಿಸಿದ್ದರು.ತನಿಖೆ ನಡೆಸಿದ್ದರು. ಇದೀಗ
ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಲಯ ಆರೋಪಿ ಆನಂದ್ ಕುಮಾರ್ ಅಲಿಯಾಸ್ ಕುಶಾ ಅರುಣನಿಗೆ ಪೋಕ್ಸೋ ಕಾಯಿದೆ ಅಡಿ 20 ವರ್ಷದ ಜೈಲು ಶಿಕ್ಷೆ ಹಾಗೂ 50 ಸಾವಿರ ದಂಡ ವಿಧಿಸಿ ತೀರ್ಪು ನೀಡಿದೆ.