ನ್ಯೂಸ್ ನಾಟೌಟ್ : ಮಾಜಿ ಪ್ರಧಾನಿ ದೇವೇಗೌಡರ (HD Deve Gowda) ಸೊಸೆ, ಎಚ್ಡಿ ರೇವಣ್ಣ (HD Revenna) ಅವರ ಪತ್ನಿ ಭವಾನಿ ರೇವಣ್ಣ (Bhavani Revanna) ಪ್ರಯಾಣಿಸುತ್ತಿದ್ದ ಕಾರ್ಗೆ (Car) ಬೈಕ್ ಸವಾರನೊಬ್ಬ ಡಿಕ್ಕಿ ಹೊಡೆದಿದ್ದ. ಈ ವೇಳೆ ತಮ್ಮ ಕಾರಿಗೆ ಡಿಕ್ಕಿ ಹೊಡೆದ ಬೈಕ್ ಸವಾರನ ಮೇಲೆ ಭವಾನಿ ರೇವಣ್ಣ ಗರಂ ಆಗಿದ್ದು, ಅವಾಚ್ಯ ಶಬ್ದಗಳಿಂದಲೂ ನಿಂದಿಸಿರುವ ಬಗ್ಗೆ ಭಾರಿ ಸುದ್ದಿಯಾಗಿತ್ತು.
ಈ ಅವಘಡ ಸಂಭವಿಸಿದ ಬಳಿಕ ಭವಾನಿ ರೇವಣ್ಣ ಅವರು ‘ನನ್ನ ಕಾರಿನ ಬೆಲೆ 1.5 ಕೋಟಿ ರೂಪಾಯಿ. ಈ ಕಾರನ್ನೇ ಡ್ಯಾಮೇಜ್ ಮಾಡಲಾಗಿದೆ. ನ್ಯಾಯ ಮಾತನಾಡೋರು ಕಾರು ರಿಪೇರಿಗೆ 50 ಲಕ್ಷ ರೂ. ದುಡ್ಡು ಕೊಡಿ” ಅಂದ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಜನ ಇದಕ್ಕೆ ಛೀಮಾರಿ ಹಾಕುತ್ತಿದ್ದಾರೆ.
ಒಂದೆಡೆ ಪ್ರಕರಣ ಸುಖಾಂತ್ಯಕ್ಕೆ ಮಾಜಿ ಪ್ರಧಾನಿ ದೇವೇಗೌಡರ ಫ್ಯಾಮಿಲಿ ಸಾಕಷ್ಟು ಶ್ರಮ ಹಾಕುತ್ತಿದ್ದಾರೆ,ನೆಟ್ಟಿಗರು ಇದಕ್ಕೆ ಕೆಂಡಾಮಂಡಲರಾಗಿದ್ದಾರೆ.ಹೀಗಾಗಿ ಈ ಕಾರಿನ ಬಗ್ಗೆ ತಿಳಿದು ಕೊಳ್ಳುವ ಪ್ರಯತ್ನ ಮಾಡಲಾಗಿದ್ದು, ಸದ್ಯ ಇದ್ಯಾವ ಕಾರು? ಮಾಲೀಕರು ಯಾರು? ಈ ಕಾರಿಗೂ ಭವಾನಿ ರೇವಣ್ಣಗೂ ಏನು ಸಂಬಂಧ? ಅನ್ನೋ ಚರ್ಚೆ ಜೋರಾಗಿದ್ದು,ಇದಕ್ಕೆ ಸಂಬಂಧಿಸಿ ಉತ್ತರವನ್ನು ಕಂಡು ಹಿಡಿಯಲಾಗಿದೆ.
ಭವಾನಿ ರೇವಣ್ಣ ಪ್ರಯಾಣಿಸುತ್ತಿದ್ದ ಕಾರಿನ ಬ್ರಾಂಡ್ ನೇಮ್ ಟೊಯೋಟಾ ವೆಲ್ಫೈರ್, ಈ ಕಾರು ಆಶ್ಪ್ರಾ ಇನ್ಫ್ರಾ ಇಂಜಿನಿಯರ್ಸ್ ಪ್ರವೈಟ್ ಲಿಮಿಟೆಡ್ ಅನ್ನೋ ಕಂಪನಿ ಹೆಸರಲ್ಲಿ ರಿಜಿಸ್ಟರ್ ಆಗಿದೆ ಎನ್ನಲಾಗಿದೆ. ಈ ಕಂಪನಿ ಡೈರೆಕ್ಟರ್ಸ್ ಹೆಸರು ಪ್ರಭಾಕರ್ ರೆಡ್ಡಿ ಮತ್ತು ಅಭಿಜಿತ್ ಅಶೋಕ್ ಎಂಬಿಬ್ಬರು ಗುತ್ತಿಗೆದಾರರು ಎನ್ನಲಾಗಿದ್ದು, ಇವರು ಬಿಬಿಎಂಪಿ ಕಂಟ್ರಾಕ್ಟರ್ ಆಗಿದ್ದು, ಇವರಿಗೂ ಗೌಡ್ರ ಕುಟುಂಬಕ್ಕೂ ಏನ್ ಸಂಬಂಧ? ಅನ್ನೋ ಪ್ರಶ್ನೆಗಳು ಇದೀಗ ಚರ್ಚೆಯಲ್ಲಿದೆ.