ನ್ಯೂಸ್ ನಾಟೌಟ್: ಮನೆಯಲ್ಲಿ ಗ್ಯಾಸ್ ಸಿಲಿಂಡರ್ ಖಾಲಿಯಾಗಿತ್ತು ಎಂಬ ಕಾರಣಕ್ಕೆ ಬೆಂಗಳೂರಿನ ನಿವಾಸಿ ಕೃಷ್ಣಪ್ಪ ಎಂಬುವವರು ಐಟಿಐ ಲೇಔಟ್ನಲ್ಲಿರುವ ಹೋಟೆಲ್ ಪ್ರಶಾಂತ್ಗೆ ಹೋಗಿ 150 ರು. ಕೊಟ್ಟು ಬಿರಿಯಾನಿ ಪಾರ್ಸಲ್ ತಗೊಂಡು ಬಂದಿದ್ದರಂತೆ. ಮನೇಲಿ ಬಿರಿಯಾನಿ ಓಪನ್ ಮಾಡಿ ನೋಡಿದ್ರೆ ಚಿಕನ್ ಪೀಸೇ ಇರಲಿಲ್ಲ ಎನ್ನಲಾಗಿದೆ.
ಹೋಟೆಲ್ ಮಾಲೀಕನಿಗೆ ವಿಷಯ ಮುಟ್ಟಿಸಿದಾಗ 5 ನಿಮಿಷದಲ್ಲಿ ಬೇರೆ ಪಾರ್ಸೆಲ್ ನೀಡುವ ಬಗ್ಗೆ ಭರವಸೆ ನೀಡಿದ್ದಾರೆ ಎನ್ನಲಾಗಿದೆ.
ಆದರೆ 2 ಗಂಟೆ ಕಳೆದರೂ ಹೋಟೆಲ್ನಿಂದ ಯಾವುದೇ ಪ್ರತಿಕ್ರಿಯೆ ಬರದೇ ಇದ್ದಾಗ ಗ್ರಾಹಕರ ನ್ಯಾಯಾಲಯಕ್ಕೆ ದೂರು ನೀಡಿದ್ದಾರೆ ಎನ್ನಲಾಗಿದೆ. ಸಾಕ್ಷಿಗೆಂದು ಬಿರಿಯಾನಿ ಫೋಟೋನೆ ನೀಡಿದ್ದರು ಎನ್ನಲಾಗಿದೆ, ಮೇ ತಿಂಗಳಿನಲ್ಲಿ ಬೆಂಗಳೂರು ನಗರ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗವನ್ನು ಭೇಟಿ ಮಾಡಿ ಉಪಾಹಾರ ಗೃಹದ ಮಾಲೀಕರ ವಿರುದ್ಧ ದೂರು ನೀಡಿ 30,000 ಪರಿಹಾರ ನೀಡುವಂತೆ ಕೋರಿದ್ದರು ಎನ್ನಲಾಗಿದೆ. ಬಳಿಕ ಕೋರ್ಟ್ ಹೋಟೆಲ್ಗೆ 1,000 ಪರಿಹಾರ ಮತ್ತು 150 ರು. ನೀಡುವಂತೆ ಆದೇಶಿಸಿದೆ ಎಂದು ವರದಿ ತಿಳಿಸಿದೆ.
ಕೃಷ್ಣಪ್ಪ ಯಾವುದೇ ವಕೀಲರನ್ನು ನೇಮಿಸಿಕೊಳ್ಳದೆ ಸ್ವಂತವಾಗಿ ವಾದ ಮಂಡಿಸಿದ್ದರು ಎನ್ನಲಾಗಿದೆ. ಅವರು ಬಿರಿಯಾನಿಯ ಛಾಯಾಚಿತ್ರಗಳನ್ನು ತೆಗೆದುಕೊಂಡಿದ್ದರು. ಮತ್ತು ಅವರ ಪತ್ನಿ ಆ ದಿನ ಆಹಾರವನ್ನು ಬೇಯಿಸಲು ಸಾಧ್ಯವಾಗದೆ ಮಾನಸಿಕ ಸಂಕಟವನ್ನು ಅನುಭವಿಸಿದರು ಎಂದು ನ್ಯಾಯಾಲಯದ ಮುಂದೆ ವಾದ ಮಂಡಿಸಿದ್ದರು ಎನ್ನಲಾಗಿದೆ.
ವಾದವನ್ನು ಪರಿಗಣಿಸಿದ ನ್ಯಾಯಾಧೀಶರು, ರೆಸ್ಟೋರೆಂಟ್ ತಿಳಿದೋ ತಿಳಿಯದೆಯೋ ತಪ್ಪು ಮಾಡಿದೆ ಮತ್ತು ಗ್ರಾಹಕರಿಗೆ ಸರಿಯಾದ ಸೇವೆಗಳನ್ನು ನೀಡಲಿಲ್ಲ ಎಂದು ಪರಿಹಾರವಾಗಿ 1 ಸಾವಿರ ರೂಪಾಯಿ ಮತ್ತು 150 ರೂ ಮರಳಿಸುವಂತೆ ಆದೇಶಿಸಿದೆ ಎನ್ನಲಾಗಿದೆ.