ನ್ಯೂಸ್ ನಾಟೌಟ್: ಡಿ. 9 ಮತ್ತು 10ಕ್ಕೆ ಬ್ರಾಹ್ಮಣ ಸಂಘ (ರಿ) ವತಿಯಿಂದ ವಿಪ್ರ ಸಮಾವೇಶವನ್ನು ಹಮ್ಮಿಕೊಳ್ಳಲಾಗಿದೆ. ಈ ಕಾರ್ಯಕ್ರಮವನ್ನು ಪಂಚವಟಿ ಸಭಾಭವನ ಶ್ರೀ ರಾಮ ಭಜನಾ ಮಂದಿರ ಕಲ್ಮಡ್ಕ ದಲ್ಲಿ ಆಯೋಜಿಸಲಾಗಿದೆ ಎಂದು ಸುಳ್ಯ ತಾಲೂಕು ಬ್ರಾಹ್ಮಣ ಸಂಘದ (ರಿ) ಅಧ್ಯಕ್ಷ ಬಾಲಸುಬ್ರಮಣ್ಯ ಭಟ್ ಪಾಲೆಪ್ಪಾಡಿ ತಿಳಿಸಿದ್ದಾರೆ.
ಸುಳ್ಯದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಬಾಲಸುಬ್ರಮಣ್ಯ ಭಟ್ ಪಾಲೆಪ್ಪಾಡಿ, “ಡಿ. 9 ಮತ್ತು 10ಕ್ಕೆ ಬ್ರಾಹ್ಮಣ ಸಂಘ (ರಿ) ವತಿಯಿಂದ ವಿಪ್ರ ಸಮಾವೇಶಕ್ಕೆ ಆಗಮಿಸುವ ಎಲ್ಲರನ್ನೂ ಕೂಡ ಕಾರ್ಯಕ್ರಮಕ್ಕೆ ಸ್ವಾಗತಿಸುತ್ತಿದ್ದೇವೆ. ಮೊದಲ ದಿನ ಬೆಳ್ಳಗ್ಗೆ 10 ಗಂಟೆಗೆ ಶ್ರೀ ಸಂಪುಟ ನರಸಿಂಹ ಮಠ ಸುಬ್ರಹ್ಮಣ್ಯ ದ ಶ್ರೀ ವಿದ್ಯಾ ಪ್ರಸನ್ನ ತೀರ್ಥ ಸ್ವಾಮೀಜಿ ದಿವ್ಯ ಉಪಸ್ಥಿತಿಯಲ್ಲಿ ಆಶೀರ್ವಚನ ಮಾಡಲಿದ್ದಾರೆ. ಉದ್ಘಾಟನೆಯನ್ನು ಪದ್ಮಶ್ರೀ ಪುರಸ್ಕೃತ ಗಿರೀಶ್ ಭಾರದ್ವಾಜ್ ಮಾಡಲಿದ್ದಾರೆ. ಮುಖ್ಯ ಅತಿಥಿಯಾಗಿ ಅಖಿಲ ಕರ್ನಾಟಕ ಬ್ರಾಹ್ಮಣ ಸಭಾ (ರಿ)ದ ಉಪಾಧ್ಯಕ್ಷ ಮಹೇಶ್ ಕಜೆ ಭಾಗಿಯಾಗಲಿದ್ದಾರೆ. ಸಂಜೆ 7 ರಿಂದ ಯಕ್ಷಗಾನ ಬಯಲಾಟ ನಡೆಯಲಿದೆ. ಡಿ.10 ರಂದು ಅಖಿಲ ಕರ್ನಾಟಕ ಬ್ರಾಹ್ಮಣ ಸಭಾ (ರಿ) ಅಧ್ಯಕ್ಷ ಅಶೋಕ್ ಹಾರ್ನಳ್ಳಿ, ಪ್ರಧಾನ ಭಾಷಣ ಬಳಿಕ ಸಂಜೆ ಸಮಾರೋಪ ಸಮಾರಂಭ ,ಸಾಧಕರಿಗೆ ಸನ್ಮಾನ, ಬಳಿಕ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ ಎಂದು ತಿಳಿಸಿದರು.
ಸುಳ್ಯ ತಾಲೂಕು. ಬ್ರಾಹ್ಮಣ ಸಂಘ ( ರಿ. ಬಾಲಕೃಷ್ಣ ಭಟ್ ಪಾಲೆಪ್ಪಾಡಿ,ಉಪಾಧ್ಯಕ್ಷ ಕೃಷ್ಣ ಸೋಮಯಾಗಿ ಎಂ.ಎನ್, ಕಾರ್ಯದರ್ಶಿ ಕೃಷ್ಣ ರಾವ್ ನಾವೂರು,ಜೊತೆ ಕಾರ್ಯದರ್ಶಿ ಸತೀಶ್ ರಾವ್ ಐ.ಕೆ ದಾಸರ ಬೈಲು, ಸದಸ್ಯ ಅರುಣ್ ಕುಮಾರ್ ಎನ್. ಸುಳ್ಯ, ಈಶ್ವರ ಕುಮಾರ್ ಭಟ್ ಉಬರಡ್ಕ ಉಪಸ್ಥಿತರಿದ್ದರು.