ನ್ಯೂಸ್ ನಾಟೌಟ್ : ಮನುಷ್ಯರಿಗಿಂತಲೂ ಪ್ರಾಣಿಗಳಿಗೆ ನಿಯತ್ತು, ಕರುಣೆ ಹೆಚ್ಚು.ಮನೆಯಲ್ಲಿ ಸಾಕು ಪ್ರಾಣಿಗಳಿದ್ದರೆ ಅವುಗಳ ಬಗ್ಗೆ ನೀವು ಅರ್ಥೈಸಿಕೊಂಡಿರಬಹುದು.ಆದರೆ ಕಾಡು ಪ್ರಾಣಿಗಳು ಕೂಡ ಇಂತಹ ಗುಣವನ್ನು ಹೊಂದಿದೆ ಅಂದರೆ ನಿಜಕ್ಕೂ ಅಚ್ಚರಿಯ ವಿಚಾರ.ಅದರಲ್ಲೂ ಉಳಿದ ಪ್ರಾಣಿಗಳನ್ನೇ ಬೇಟೆಯಾಡಿ ತಿನ್ನುವ ಚಿರತೆಯೇ ವಾತ್ಸಲ್ಯದ ಗುಣವನ್ನು ಹೊಂದಿವೆ ಅನ್ನೋದಕ್ಕೆ ಈ ವಿಡಿಯೋನೇ ಸಾಕ್ಷಿಯಾಗಿದೆ.ಈ ದೃಶ್ಯ ಕಂಡಾಗ ಕಾಡಿನಲ್ಲಿಯೂ ಸಹ ಇಂತಹ ಅಪರೂಪದ ಘಟನೆಗಳು ನಡೆಯುತ್ತಿರುವೆಯಾ ಅಂತ ಆಶ್ಚರ್ಯವಾಗದಿರದು.ಹುಲಿ,ಚಿರತೆ ,ಸಿಂಹದಂತ ಪ್ರಾಣಿಗಳು ಹೊಟ್ಟೆ ತುಂಬಿಸಿಕೊಳ್ಳು ಒಂದು ಬೇಟೆ ಸಿಕ್ಕಿದ್ರೆ ಸಾಕು ಒಂದು ಕ್ಷಣವೂ ಯೋಚಿಸದೇ ತಿಂದು ಬಿಡುತ್ತವೆ.ಆದರೆ ಈ ವಿಡಿಯೋ ಅದಕ್ಕೆ ತದ್ವಿರುದ್ಧವಾಗಿದೆ.
ಈ ಕುರಿತು ವಿಡಿಯೋ ಒಂದು ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ.ಯಸ್.. ಚಿರತೆಯೊಂದು ಜಿಂಕೆಮರಿಯನ್ನು ಮುದ್ದಿಸುತ್ತಿರುವ ವಿಡಿಯೋ ಎಕ್ಸ್ ಖಾತೆಯಲ್ಲಿ ವೈರಲ್ ಆಗಿದೆ. ಈ ವಿಡಿಯೋವನ್ನು Figen ಎಂಬ ಬಳಕೆದಾರರು ಹಂಚಿಕೊಂಡಿದ್ದಾರೆ.
ವಿಡಿಯೋದಲ್ಲಿ ತಾಯಿ ಅಂತ ತಿಳಿದು ಜಿಂಕೆ ಮರಿಯೂ ಸಹ ಚಿರತೆಯ ಹತ್ತಿರ ಬಂದು ನಿಂತು ಮುತ್ತಿಡುವ ದೃಶ್ಯವನ್ನೂ ಸಹ ಕಾಣಬಹುದು.ಇನ್ನು ಅಚ್ಚರಿಯ ವಿಷಯ ಏನಪ್ಪಾ ಅಂದ್ರೆ, ಆ ಪುಟ್ಟ ಜಿಂಕೆ ಮರಿಯ ಮೇಲೆ ಹೈನಾ ದಾಳಿ ಮಾಡಲು ಬರುತ್ತೆ ಎನ್ನುವ ಸೂಚನೆ ಅರಿತ ಚಿರತೆ ತಕ್ಷಣ ಜಿಂಕೆಮರಿಯನ್ನು ತನ್ನ ಬಾಯಲ್ಲಿ ಕಚ್ಚಿ ಮರದ ಮೇಲೆ ತೆಗೆದುಕೊಂಡು ಹೋಗಿ ರಕ್ಷಣೆ ಮಾಡುತ್ತದೆ. ಒಟ್ಟಾರೆಯಾಗಿ ಸದಾ ಸ್ವಾರ್ಥಪರವಾಗಿ ಯೋಚಿಸುವ ಮಾನವನಿಗಿಂತ ಪ್ರಾಣಿಗಳು ಎಷ್ಟೋ ಒಳ್ಳೆಯವು ಎನ್ನುವ ಸತ್ಯ ಈ ವಿಡಿಯೋ ನೋಡಿದ್ರೆ ಅರ್ಥವಾಗುತ್ತೆ.