ಸುಳ್ಯ: ಬದಲಾದ ಆಧುನಿಕತೆಯ ಈ ದಿನದಲ್ಲಿ ನಮ್ಮ ಮನೆಯ ಭಾಷೆಗಳಾದ ತುಳು, ಕನ್ನಡವನ್ನು ಮಕ್ಕಳಿಗೆ ಕಲಿಸುವುದರ ಬದಲು ಅನ್ಯಭಾಷೆಯತ್ತ ನಾವು ವಾಲುತ್ತಿದ್ದೇವೆ. ನಮ್ಮ ಭಾಷೆಯನ್ನು ಉಳಿಸಿ ಬೆಳೆಸುವ ಕೆಲಸವನ್ನು ಮಾಡಬೇಕು. ಭಾಷೆ ಬೆಳೆದರೆ ಮಾತ್ರ ನಮ್ಮ ಸಂಸ್ಕ್ರತಿ ಉಳಿಯಲು ಸಾಧ್ಯ ಎಂದು ಕನ್ನಡ ಮತ್ತು ಸಂಸ್ಕ್ರತಿ ಇಲಾಖೆ ಸಚಿವ ವಿ.ಸುನಿಲ್ ಕುಮಾರ್ ಹೇಳಿದರು.
ಸುಳ್ಯದ ಅಮರಶ್ರೀಭಾಗ್ ನ ಜಾನಕಿ ವೆಂಕಟ್ರಮಣ ಗೌಡ ಸಭಾಂಗಣದಲ್ಲಿ ನಡೆದ ಕರ್ನಾಟಕ ಅರೆಭಾಷೆ ಸಂಸ್ಕ್ರತಿ ಮತ್ತು ಸಾಹಿತ್ಯ ಅಕಾಡೆಮಿ ವತಿಯಿಂದ 6 ಮಂದಿ ಸಾಧಕರಿಗೆ ಗೌರವ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮಾತನಾಡಿದರು. 2019-20 ನೇ ಸಾಲಿನ ಗೌರವ ಪ್ರಶಸ್ತಿಯನ್ನು ಎನ್.ಎಸ್. ದೇವಿಪ್ರಸಾದ್ ಸಂಪಾಜೆ (ಸಾಹಿತ್ಯ), ಶ್ರೀಮತಿ ಪಂಜಿಪಳ್ಳ ಇಂದ್ರಾಕ್ಷಿ ವೆಂಕಪ್ಪ (ಜಾನಪದ), ದಿ.ಮೋಹನ್ ಸೋನಾ (ಚಿತ್ರಕಲಾ) ಪರವಾಗಿ ಮನೆಯವರಿಗೆ ಹಾಗೂ ಕುಂಞಿಟ್ಟಿ ಶಿವರಾಮ ಗೌಡ (ಸಾಹಿತ್ಯ), ಡಾ.ಕೋರನ ಸರಸ್ವತಿ ಪ್ರಕಾಶ್ (ಸಂಶೋಧನೆ), ಪದ್ಮಯ್ಯ ಗೌಡ ಪರಿವಾರಕಾನ (ಪಾರಂಪರಿಕ ವೈದ್ಯ) ರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಮೀನುಗಾರಿಕಾ ಬಂದರು ಮತ್ತು ಒಳನಾಡು ಸಾರಿಗೆ ಸಚಿವ ಎಸ್.ಅಂಗಾರ, ಸಂಸದ ನಳಿನ್ ಕುಮಾರ್ ಕಟೀಲ್ಅರೆಭಾಷೆ ಅಕಾಡೆಮಿ ಅಧ್ಯಕ್ಷ ಲಕ್ಷ್ಮೀನಾರಾಯಣ ಕಜೆಗದ್ದೆ, ನ.ಪಂ.ಅಧ್ಯಕ್ಷ ವಿನಯ ಕುಮಾರ್ ಕಂದಡ್ಕ ಮುಖ್ಯ ಅತಿಥಿಗಳಾಗಿದ್ದರು. ಅರೆಭಾಷೆ ಅಕಾಡೆಮಿ ರಿಜಿಸ್ಟ್ರಾರ್ ಚಿನ್ನಸ್ವಾಮಿ, ಅಕಾಡೆಮಿ ಸದಸ್ಯರಾದ ಜಾನಕಿ ಬೆಳ್ಯಪ್ಪ ಬೈತಡ್ಕ, ಸ್ಮಿತಾ ಅಮೃತರಾಜ್, ಚೊಕ್ಕಾಡಿ ಪ್ರೇಮ ರಾಘವಯ್ಯ, ಎ.ಪಿ. ಧನಂಜಯ ಅಗೋಳಿಕಜೆ, ಆನಂದ ದಂಬೆಕೋಡಿ, ಡಾ.ದಯಾನಂದ ಕೂಡಕಂಡಿ, ಪುರುಷೋತ್ತಮ ಕಿರ್ಲಾಯ, ಜಯಪ್ರಕಾಶ್ ಮೋಂಟಡ್ಕ, ಡಾ.ಪುರುಷೋತ್ತಮ ಕೆ.ವಿ. ಕರಂಗಲ್ಲು, ಕಿರಣ್ ಕುಂಬಳಚೇರಿ, ಭರತೇಶ ಅಲಸಂಡೆಮಜಲು ಉಪಸ್ಥಿತರಿದ್ದರು. ಅಕಾಡೆಮಿ ಸದಸ್ಯ ಡಾ.ವಿಶ್ವನಾಥ್ ಬದಿಕಾನ ಸ್ವಾಗತಿಸಿದರು. ಎ.ಟಿ. ಕುಸುಮಾಧರ್ ಕಾರ್ಯಕ್ರಮ ನಿರೂಪಿಸಿದರು.