ನ್ಯೂಸ್ ನಾಟೌಟ್ : ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಗೆ 53 ವರ್ಷ ವಯಸ್ಸಾದರೂ ಕೂಡ ಯಾಕೆ ಮದುವೆಯಾಗಿಲ್ಲ ಎನ್ನುವ ಪ್ರಶ್ನೆಗಳು ಎದ್ದಿದ್ದವು.ಈ ಹಿಂದೆ ಕೆಲ ನಟಿಯರ ಜೊತೆ ರಾಹುಲ್ ಹೆಸರು ತಳುಕು ಹಾಕಿದ್ರೂ ಕೂಡ, ಇದುವರೆಗೆ ಅವರು ಮದುವೆಯ ವಿಷಯಕ್ಕೆ ಹೋಗಿಲ್ಲ. ಈ ಬಗ್ಗೆ ರಾಹುಲ್ ಅವರೇ ಈ ವಿಚಾರಕ್ಕೆ ಸಂಬಂಧ ಪಟ್ಟಂತೆ ಮಾತನಾಡಿದ್ದಾರೆ.
ಹೌದು,ಜೈಪುರದ ಮಹಾರಾಣಿ ಕಾಲೇಜಿನ ವಿದ್ಯಾರ್ಥಿಗಳೊಂದಿಗೆ ರಾಹುಲ್ ಗಾಂಧಿ ಅವರು ಸಂವಾದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ್ದರು.ಈ ವೇಳೆ ಮಹಿಳೆಯೊಬ್ಬರು ಮದುವೆ ಬಗ್ಗೆ ಪ್ರಶ್ನೆಯೆತ್ತಿದ್ದಾರೆ.ಆಗ ಅವರು ಕೇಳಿದ ಪ್ರಶ್ನೆಗಳಿಗೆ ರಾಹುಲ್ ಗಾಂಧಿ ಮಾತನಾಡಿದ್ದಾರೆ.
ಮಹಿಳೆ ಎದ್ದು ನಿಂತು “ನೀವು ತುಂಬಾ ಸ್ಮಾರ್ಟ್ ಆಗಿದ್ದೀರ. ಆದ್ರೆ ಮದುವೆಯ ಬಗ್ಗೆ ಏಕೆ ಯೋಚಿಸಲಿಲ್ಲ?” ಎಂದು ಮಹಿಳೆಯೊಬ್ಬರು ರಾಹುಲ್ ಗಾಂಧಿ ಅವರಿಗೆ ಪ್ರಶ್ನೆಯನ್ನು ಕೇಳಿದ್ದಾರೆ.ಈ ವೇಳೆ ಈ ಪ್ರಶ್ನೆಗೆ ನಗುತ್ತಾ ತುಂಬಾ ಸಮಾಧಾನದಿಂದ ಉತ್ತರಿಸಿದ ಅವರು, “ನೋಡಿ , ನಾನು ನನ್ನ ಕೆಲಸದಲ್ಲಿ ಮಗ್ನನಾಗಿದ್ದೇನೆ. ಮಾತ್ರವಲ್ಲ ,ಕಾಂಗ್ರೆಸ್ ಪಕ್ಷದಲ್ಲಿ ಸಂಪೂರ್ಣವಾಗಿ ಸಿಕ್ಕಿಹಾಕಿಕೊಂಡಿದ್ದೇನೆ” ಎಂದು ಹೇಳಿದರು.
ಇದಾದ ಬಳಿಕ ಮಹಿಳೆ ಪ್ರಶ್ನೆಯನ್ನು ಮುಂದುವರಿಸಿ ತಮ್ಮ ನೆಚ್ಚಿನ ಭಕ್ಷ್ಯಗಳ ಬಗ್ಗೆ ಕೇಳಿದ ಪ್ರಶ್ನೆಗಳನ್ನು ಕೇಳಿದ್ದಾರೆ. ಹಾಗಲಕಾಯಿಯನ್ನು ಹೊರತುಪಡಿಸಿ ಎಲ್ಲವೂ ಇಷ್ಟ ಎಂದಿದ್ದಾರೆ.