ನ್ಯೂಸ್ ನಾಟೌಟ್: ಚುನಾವಣೆಯ ವೇಳೆ ನೂರು ಮೀಟರ್ ದೂರದ ವರೆಗೂ ರಾಜಕೀಯ ಪಕ್ಷದ ಪ್ರಚಾರಕರಿಗೆ ಮತ್ತು ಮುಖಂಡರಿಗೆ ನಿಷೇಧ ಹೇರಿದ್ದರೂ ತೆಲಂಗಾಣದಲ್ಲಿ ಹೊಡೆದಾಟಗಳು ನಡೆದಿದೆ. 119 ವಿಧಾನಸಭಾ ಕ್ಷೇತ್ರಗಳಿಗೆ (Telangana Vidhanasabha Election) ಇಂದು ಮತದಾನ ನಡೆಯುತ್ತಿದ್ದು, ಈ ನಡುವೆ ಮತಗಟ್ಟೆಯೊಂದರಲ್ಲಿ ಮೂರು ಪಕ್ಷದ ಕಾರ್ಯಕರ್ತರ ನಡುವೆ ಗಲಾಟೆ ನಡೆದಿದೆ ಎಂದು ವರದಿ ತಿಳಿಸಿದೆ.
ಜನಗಾಂವ್ನ ಮತಗಟ್ಟೆಯಲ್ಲಿ ಕಾಂಗ್ರೆಸ್ (Congress), ಬಿಜೆಪಿ (BJP) ಹಾಗೂ ಬಿಆರ್ ಎಸ್ ಕಾರ್ಯಕರ್ತರ (BRS Activist) ನಡುವೆ ಮಾರಾಮಾರಿ ನಡೆದಿದೆ. ಇದರ ವೀಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಘಟನೆ ನಡೆಯುತ್ತಿದ್ದಂತೆಯೇ ಮತಗಟ್ಟೆಯಲ್ಲಿದ್ದ ಪೊಲೀಸರು ಕೂಡಲೇ ಮಧ್ಯಪ್ರವೇಶ ಮಾಡಿ ಪರಿಸ್ಥಿತಿಯನ್ನು ಹತೋಟಿಗೆ ತಂದಿದ್ದಾರೆ ಎನ್ನಲಾಗಿದೆ.
ವೀಡಿಯೊದಲ್ಲಿ, ರಾಜಕೀಯ ಪಕ್ಷಗಳ ಕಾರ್ಯಕರ್ತರು ಜನಾಂವ್ನ ಮತಗಟ್ಟೆಯ (Jangaon Polling Booth) ಹೊರಗೆ ಪರಸ್ಪರ ತಳ್ಳಿಕೊಳ್ಳುತ್ತಿರುವುದನ್ನು ಸೆರೆಯಾಗಿದೆ. ಆದರೆ ಕಾರ್ಯಕರ್ತರ ನಡುವಿನ ಗಲಾಟೆಗೆ ನಿಖರ ಕಾರಣ ತಿಳಿದುಬಂದಿಲ್ಲ.
ರಾಜಸ್ಥಾನ, ಮಧ್ಯಪ್ರದೇಶ, ಛತ್ತೀಸ್ಗಢ, ಮಿಜೋರಾಂಗಳಲ್ಲಿ ನ.7 ರಿಂದ ನವೆಂಬರ್ 25ರ ಒಳಗೆ ಮತದಾನ ಮುಕ್ತಾಯವಾಗಿದೆ. ತೆಲಂಗಾಣದಲ್ಲಿ ಇಂದು ಮತದಾನ ನಡೆಯುತ್ತಿದೆ ಎಂದು ವರದಿ ತಿಳಿಸಿದೆ.