ನ್ಯೂಸ್ ನಾಟೌಟ್: ಸೌಜನ್ಯ ಪ್ರಕರಣದ ಬಿಸಿ ಇನ್ನೂ ಆರಿಲ್ಲ. ಪ್ರತಿನಿತ್ಯವೂ ಸೌಜನ್ಯಳಿಗೆ ನ್ಯಾಯ ಸಿಗಬೇಕೆಂಬ ಕೂಗು ಹೆಚ್ಚುತ್ತಿದೆ. ಈ ನಡುವೆ ಸೌಜನ್ಯಳ ತಂಟೆಗೆ ನಾನು ಇನ್ನು ಮುಂದೆ ಬರುವುದಿಲ್ಲವೆಂದು V2 ಸೂರ್ಯ ಎಂಬ ವ್ಯಕ್ತಿ ಸಾಮಾಜಿಕ ಜಾಲತಾಣದಲ್ಲಿ ಹೇಳಿರುವ ಆಡಿಯೋವೊಂದು ಭಾರಿ ವೈರಲ್ ಆಗುತ್ತಿದೆ.
ಇದು ಸೋಷಿಯಲ್ ಮೀಡಿಯಾದಲ್ಲಿ ಹೆಚ್ಚು ಚುರುಕಾಗಿರುವ ಅಹೋರಾತ್ರ ಹಾಗೂ V2 ಸೂರ್ಯ ನಡುವಿನ ಸಂಭಾಷಣೆಯಾಗಿದೆ. ಈ ಸಂಭಾಷಣೆಯಲ್ಲಿ V2 ಸೂರ್ಯ ಮೊಬೈಲ್ ಮೂಲಕ ಮಾತನಾಡುತ್ತಾ ಸೌಜನ್ಯಳ ತಂಟೆಗೆ ಇನ್ನು ಮುಂದೆ ನಾನು ಹೋಗುವುದಿಲ್ಲ. ನನ್ನ ಸೋಷಿಯಲ್ ಮೀಡಿಯಾಗಳಿಗೆ ಹಾನಿಯಾಗಿದೆ. ಜೊತೆಗೆ ಕೆಟ್ಟ ಹೆಸರು ತೆಗೆದುಕೊಂಡಿದ್ದೇನೆ. ಇದರಿಂದ ನಾನು ಈಗ ಸಂಪೂರ್ಣವಾಗಿ ಹೊರ ಬಂದಿದ್ದೇನೆ.
ದಯವಿಟ್ಟು ಕ್ಷಮಿಸಿ ಮುಂದೆ ಸೌಜನ್ಯ ವಿಚಾರದಲ್ಲಿ ನಾನು ಎಂದೂ ತಲೆ ಹಾಕೋದಿಲ್ಲ ಎಂದು ಹೇಳುತ್ತಾನೆ. ಈ ವೇಳೆ ಇದಕ್ಕುತ್ತರಿಸಿ ಮಾತನಾಡುವ ಆಹೋರಾತ್ರ, ಹೆಣ್ಣು ಮಕ್ಕಳ ಬಗ್ಗೆ ಮಾತನಾಡುವಾಗ ಹುಷಾರಾಗಿರು, ಹೆಣ್ಣು ಹೆತ್ತು ಕಳೆದುಕೊಂಡು ನಿತ್ಯ ಸಂಕಟಪಡುತ್ತಿರುವ ಸೌಜನ್ಯ ತಾಯಿಯ ಬಳಿ ಕ್ಷಮೆ ಕೇಳು. ಆಗ ನೀನು ಮಾಡಿದ ಪಾಪ ಎಲ್ಲವೂ ಸರಿ ಆಗುತ್ತದೆ. ಮುಂದೆ ಹೀಗೆಲ್ಲ ಮಾಡಬೇಡ ಎಂದು ಬುದ್ಧಿಮಾತು ಹೇಳುತ್ತಾರೆ. ಸುಮಾರು ಎಂಟು ನಿಮಿಷಗಳ ಆಡಿಯೋ ಈಗ ಎಲ್ಲ ಕಡೆ ವೈರಲ್ ಆಗುತ್ತಿದೆ.