ನ್ಯೂಸ್ ನಾಟೌಟ್: ಅಕ್ರಮ ಮದ್ಯ ಸಂಗ್ರಹಣೆಯ ಆರೋಪದಲ್ಲಿ ಸಿಲುಕಿಕೊಂಡಿದ್ದ ವ್ಯಕ್ತಿಗೆ ಬೆಳ್ತಂಗಡಿ ನ್ಯಾಯಾಲಯ ದೋಷಮುಕ್ತಗೊಳಿಸಿ ತೀರ್ಪು ನೀಡಿದೆ.
ವ್ಯಕ್ತಿಯೊಬ್ಬರು ಅಂಗಡಿಯನ್ನು ಬಾಡಿಗೆ ನೆಲೆಯಲ್ಲಿ ಪಡೆದುಕೊಂಡು ಅಕ್ರಮ ಮದ್ಯ ಸಂಗ್ರಹಣೆ ಮಾಡಿದ್ದ ಆರೋಪ ಎದುರಾಗಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆ ನಡೆಸಿದ ಅಂಗಡಿ ಮಾಲೀಕನ ವಿರುದ್ದ ಬೆಳ್ತಂಗಡಿ ನ್ಯಾಯಾಲಯವು ದೋಷಮುಕ್ತಗೊಳಿಸಿ ತೀರ್ಪು ನೀಡಿದೆ.
ವ್ಯಕ್ತಿಯೋರ್ವ ಮೂಲತಃ ಕಳೆಂಜ ಗ್ರಾಮದ ಟಿ.ವಿ. ಜೋಸೆಫ್ ಮಾಲಿಕತ್ವದ ಅಂಗಡಿಯನ್ನು ಬಾಡಿಗೆ ಪಡೆದಿದ್ದ. ಅಂಗಡಿ ಕೋಣೆಯಲ್ಲಿ ಅಕ್ರಮ ಮದ್ಯ ಮಾರಾಟ ಮತ್ತು ಸಂಗ್ರಹಣೆ ಮಾಡಿದ ವಿಷಯ ತಿಳಿದ ಅಬಕಾರಿ ಇಲಾಖೆಯವರು ದಾಳಿ ಮಾಡಿದ್ದರು.
ತನಿಖೆ ನಡೆಸಿ, ಬೆಳ್ತಂಗಡಿ ವ್ಯವಹಾರಿಕ ನ್ಯಾಯಾಧೀಶರು ಮತ್ತು ಜೆ.ಎಂ.ಎಫ್.ಸಿ. ನ್ಯಾಯಾಲಕ್ಕೆ ದೋಷಾರೋಪಣಾ ಪಟ್ಟಿಯನ್ನು ಸಲ್ಲಿಸಿದ್ದರು. ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಧೀಶರಾದ ಸಂದೇಶ್ ಕೆ. ವಿಚಾರಣೆ ನಡೆಸಲಾಗಿದ್ದು. ಅಂಗಡಿ ಮಾಲೀಕನನ್ನು ನಿರಪರಾಧಿ ಎಂದು ನ್ಯಾಯಾಲಯವು ಆದೇಶ ಹೊರಡಿಸಿದ್ದಾರೆ.