ನ್ಯೂಸ್ ನಾಟೌಟ್: ಮಸೀದಿಗಳಲ್ಲಿ (Mosque) ಧ್ವನಿವರ್ಧಕಗಳ ಮೂಲಕ ಅಜಾನ್ ಕೂಗುವುದ ಶಬ್ದ ಮಾಲಿನ್ಯವಾಗುತ್ತದೆ, ಧ್ವನಿವರ್ಧಕಗಳನ್ನು ನಿಷೇಧಿಸಬೇಕು ಎಂದು ಅರ್ಜಿಸಲ್ಲಿಸಲಾಗಿತ್ತು. ಆದರೆ ಇದರಿಂದ ಶಬ್ದ ಮಾಲಿನ್ಯ ಆಗುವುದಿಲ್ಲ ಎಂದು ಗುಜುರಾತ್ ಹೈಕೋರ್ಟ್ (Gujarat High Court) ಹೇಳಿದೆ.
ಧ್ವನಿವರ್ಧಕಗಳ ಮೂಲಕ ಅಜಾನ್ ಕೂಗುವುದು ನಿಷೇಧಿಸುವಂತೆ ಕೋರಿ ಸಲ್ಲಿಸಲಾದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ವಿಚಾರಣೆ ನಡೆಸಿದ ಕೋರ್ಟ್ ಅರ್ಜಿದಾರರನ್ನು ತರಾಟೆಗೆ ತೆಗೆದುಕೊಂಡಿದೆ ಎಂದು ವರದಿ ತಿಳಿಸಿದೆ. ಈ ಹಿಂದೆಯೂ ಹಲವು ಬಾರಿ ಇಂತಹ ಪ್ರಯತ್ನಗಳು ನಡೆದಿತ್ತು ಎನ್ನಲಾಗಿದೆ.
ವೈದ್ಯ ಧರ್ಮೇಂದ್ರ ಪ್ರಜಾಪತಿ ಸಲ್ಲಿಸಿದ್ದ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಸುನೀತಾ ಅಗರ್ವಾಲ್ (Sunita Agarwal) ಮತ್ತು ನ್ಯಾಯಮೂರ್ತಿ ಅನಿರುದ್ಧಮಯೀ ವಿಭಾಗೀಯ ಪೀಠವು ವಿಚಾರಣೆ ನಡೆಸಿತ್ತು. ವಿಚಾರಣೆ ವೇಳೆ ಈ ರೀತಿಯ ಪಿಐಎಲ್ (PIL) ಸಲ್ಲಿಕೆ, ಧ್ವನಿವರ್ಧಕಗಳ ಮೂಲಕ ಕೂಗುವುದರಿಂದ ಉಂಟಾಗುವ ಶಬ್ದದ ಪ್ರಮಾಣ ಎಷ್ಟು? ಇದರಿಂದ ಶಬ್ದ ಮಾಲಿನ್ಯ ಹೇಗೆ ಸಾಧ್ಯ ಎಂದು ಪ್ರಶ್ನಿಸಿತು.
ನೀವು ಅಡಚಣೆ ಉಂಟುಮಾಡದ ಸಂಗೀತವನ್ನು ನುಡಿಸುತ್ತೀರಾ? ಎಂದು ಅರ್ಜಿದಾರರ ಪರ ವಕೀಲರನ್ನು ಮುಖ್ಯ ನ್ಯಾಯಮೂರ್ತಿಗಳು ಪ್ರಶ್ನಿಸಿದರು. ಇದಕ್ಕೆ ಉತ್ತರಿಸಿದ ಅರ್ಜಿದಾರರ ಪರ ವಕೀಲರಾದ ಡಿಜಿ ಶುಕ್ಲಾ ಸಂಗೀತವನ್ನು ಮನೆಯಲ್ಲಿ ನುಡಿಸುತ್ತಾರೆಯೇ ಹೊರತು ಮಸೀದಿಯಂತಹ ಸಾರ್ವಜನಿಕ ಸ್ಥಳದಲ್ಲಿ ಅಲ್ಲ ಎಂದು ಪ್ರತಿಕ್ರಿಯಿಸಿದರು. ನಾವು ಮನೆಗಳಲ್ಲಿ ನುಡಿಸುವ ಸಂಗೀತದ ಬಗ್ಗೆ ಮಾತನಾಡುತ್ತಿಲ್ಲ. ನೀವು ದೇವಸ್ಥಾನದಲ್ಲಿ ಭಜನೆ ಅಥವಾ ಆರತಿಗಾಗಿ ಜೋರಾಗಿ ಸಂಗೀತವನ್ನು ನುಡಿಸುತ್ತೀರಿ. ಅದು ಜನರಿಗೆ ತೊಂದರೆ ಉಂಟುಮಾಡುವುದಿಲ್ಲವೇ? ಆಜಾನ್ ಹೇಗೆ ತೊಂದರೆ ಉಂಟುಮಾಡುತ್ತದೆ? ಇದು ಇಡೀ ದಿನದಲ್ಲಿ ಹತ್ತು ನಿಮಿಷಗಳ ಕಾಲ ಕೂಗಬಹುದು. ಇದರಿಂದ ಶಬ್ದ ಮಾಲಿನ್ಯ ಹೇಗೆ ಸಾಧ್ಯ ಎಂದು ನ್ಯಾಯಾಧೀಶರು ಮರು ಪ್ರಶ್ನೆ ಹಾಕಿದ್ದಾರೆ ಎನ್ನಲಾಗಿದೆ.
ಆಜಾನ್ನಿಂದ ಶಬ್ದದ ಡೆಸಿಬಲ್ ಎಷ್ಟು? ಹಬ್ಬಗಳಲ್ಲಿ ಬಳಸುವ ಡಿಜೆ ಶಬ್ದದ ಡೆಸಿಬಲ್ ಎಷ್ಟು ಎಂದು ಕೇಳಿದ ಸಿಜೆ ಅಗರ್ವಾಲ್ ಉತ್ತರ ನೀಡಿದ ಅರ್ಜಿದಾರರನ್ನು ತರಾಟೆಗೆ ತೆಗೆದುಕೊಂಡರು. ಆಜಾನ್ ನಂಬಿಕೆ. ಈ ಅಭ್ಯಾಸವು ವರ್ಷಗಳಿಂದ ಒಟ್ಟಿಗೆ ನಡೆಯುತ್ತಿದೆ. ಇಂತಹ ಅರ್ಜಿಗಳನ್ನು ನಾವು ಮಾನ್ಯ ಮಾಡುವುದಿಲ್ಲ ಎಂದು ತಿಳಿಸಿದರು. ಅದಾಗ್ಯೂ ವಾದ ಮುಂದುವರಿಸಿದ ವಕೀಲರು ಆಜಾನ್ ದೇವಾಲಯಗಳಲ್ಲಿ ಆರತಿಗಿಂತ ಭಿನ್ನವಾಗಿದೆ. ಇದು ದಿನಕ್ಕೆ ಐದು ಬಾರಿ ನಡೆಯುತ್ತದೆ ಎಂದು ವಕೀಲರು ಒತ್ತಿ ಹೇಳಿದ್ದಾರೆ.
ಇದಕ್ಕೆ ಗರಂ ಆದ ಸಿಜೆ ಅಗರ್ವಾಲ್, ಹಾಗಾದರೆ ನಿಮ್ಮ ದೇವಸ್ಥಾನಗಳಲ್ಲಿ ಮುಂಜಾನೆ ಪ್ರಾರಂಭವಾಗುವ ಆ ಡೋಲು ಮತ್ತು ಸಂಗೀತದೊಂದಿಗೆ ಬೆಳಗಿನ ಆರತಿ ಇದು ಯಾರಿಗೂ ಯಾವುದೇ ಶಬ್ದ ಅಥವಾ ಗದ್ದಲವನ್ನು ಉಂಟುಮಾಡುವುದಿಲ್ಲವೇ? ಇದು ಪ್ರತಿ ನಿತ್ಯ ನಡೆಯುತ್ತದೆ. ಇದು ಶಬ್ದ ಮಾಲಿನ್ಯ ಮಾಡುವುದಿಲ್ಲ ಎಂದು ನೀವು ಹೇಳಬಹುದೇ ಎಂದು ಕೇಳಿದ್ದಾರೆ.
ಅರ್ಜಿದಾರರು ಯಾವುದೇ ನಿರ್ದಿಷ್ಟ ಪ್ರದೇಶದಲ್ಲಿ ಆಜಾನ್ (Azan) ಸಮಯದಲ್ಲಿ ಡೆಸಿಬಲ್ ಮಟ್ಟವನ್ನು ಅಳೆಯದೇ ಅಜಾನ್ ನಡೆಯುವ ಪ್ರದೇಶಗಳಲ್ಲಿ ವಿವಿಧ ಸಮುದಾಯಗಳು ಮತ್ತು ಧರ್ಮದ ಜನರು ವಾಸಿಸುತ್ತಿದ್ದಾರೆ. ಆದ್ದರಿಂದ ತೊಂದರೆಯಾಗಲಿದೆ ಮತ್ತು ಆರೋಗ್ಯದ ಅಪಾಯವನ್ನು ಉಂಟುಮಾಡುತ್ತದೆ ಎನ್ನುವ ಏಕೈಕ ವಾದವನ್ನು ಒಪ್ಪಲು ಸಾಧ್ಯವಿಲ್ಲ ಎಂದು ಕೋರ್ಟ್ ಹೇಳಿದೆ.
FB PAGE : https://www.facebook.com/NewsNotOut2023
Insta : https://www.instagram.com/newsnotout/
Tweet : https://twitter.com/News_Not_Out
YouTube : https://www.youtube.com/@newsnotout8209
Koo app: https://www.kooapp.com/profile/NewsNotOut
Website : https://newsnotout.com/