ನ್ಯೂಸ್ ನಾಟೌಟ್: ಹಲವು ಬಾರಿ ತಜ್ಣರು, ವೈದ್ಯರು ಹಾಗು ವಿಜ್ಞಾನಿಗಳು ತಮ್ಮ ಕೆಲಸದ ಬಳಿಕ ಫಲಿತಾಂಶ ದೇವರಿಗೆ ಬಿಟ್ಟದ್ದು ಎಂಬದನ್ನು ಬಲವಾಗಿ ನಂಬುತ್ತಾರೆ ಮತ್ತು ಅವುಗಳು ಈ ಹಿಂದೆಯೂ ಸಾಭೀತಾಹಿದೆ. ಅಂತೆಯೇ ಕೆಲವು ದಿನಗಳ ಹಿಂದೆ ಉತ್ತರಕಾಶಿಯ ಸಿಲ್ಕ್ಯಾರಾದಲ್ಲಿ ನಿರ್ಮಾಣ ಹಂತದ ಸುರಂಗ ಕುಸಿದು ಬೀಳಲು ಅಲ್ಲಿ ದೇವರ ದೇಗುಲ ನೆಲಸಮ ಗೊಳಿಸಿದ್ದೇ ಕಾರಣವಾಗಿದೆ ಎಂದು ಹೇಳಲಾಗುತ್ತದೆ.
ಸುರಂಗ ನಿರ್ಮಾಣದ ವೇಳೆ ಅಲ್ಲಿದ್ದ ಶಿವ ದೇವಾಲಯವನ್ನು ನೆಲಸಮಗೊಳಿಸಲಾಗಿತ್ತು ಇದಾದ ಕೆಲ ದಿನಗಳ ಬಳಿಕ ಸುರಂಗ ನಿರ್ಮಾಣ ಕಾರ್ಯ ನಡೆಯುತ್ತಿರಬೇಕಾದರೆ ಏಕಾಏಕಿ ಸುರಂಗ ಕುಸಿದು ಅಲ್ಲಿ ಕೆಲಸ ಮಾಡುತ್ತಿದ್ದ ಸುಮಾರು ನಲವತ್ತೊಂದು ಕಾರ್ಮಿಕರು ಸುರಂಗದೊಳಗೆ ಸಿಲುಕಿದ್ದರು.
ಆದರೆ ಅಲ್ಲಿ ಶಿವ ದೇವಾಲಯ ಇರುವುದು ಕೇವಲ ಅಲ್ಲಿಯ ಸ್ಥಳೀಯರಿಗೆ ಬಿಟ್ಟರೆ ಬೇರೆ ಯಾರಿಗೂ ಗೊತ್ತಿಲ್ಲ ಎನ್ನಲಾಗಿದೆ.
ಈ ದುರಂತ ನಡೆದ ಬಳಿಕ ಅಲ್ಲಿನ ಸ್ಥಳೀಯರು ಹೇಳುವ ಪ್ರಕಾರ ಶಿವ ದೇವಾಲಯವನ್ನು ನೆಲಸಮ ಮಾಡಿರುವುದೇ ಈ ದುರಂತಕ್ಕೆ ಕಾರಣ ದೇವರು ಎಚ್ಚರಿಕೆಯ ರೂಪದದಲ್ಲಿ ಕಾರ್ಮಿಕರನ್ನು ಸುರಂಗದ ಒಳಗೆ ಬಂದಿಯಾಗಿಸಿದ್ದಾರೆ ಆದರೆ ಯಾರಿಗೂ ತೊಂದರೆಯಾಗಲಿಲ್ಲ ಇದರ ಕಾರಣ ದೇವಸ್ಥಾನ ನೆಲಸಮ ಮಾಡಿರುವುದು ಹಾಗಾಗಿ ಅದೇ ಜಗದಲ್ಲಿ ದೇವಸ್ಥಾನ ನಿರ್ಮಾಣ ಮಾಡಿದರೆ ಮುಂದೆ ಈ ರೀತಿಯ ತೊಂದರೆ ಆಗಲಾರದು ಎಂದು ಸ್ಥಳೀಯರು ಅಭಿ[ಪ್ರಾಯಪಟ್ಟದ್ದಾರೆ.
ಈ ಕುರಿತು ಹೇಳಿಕೆ ನೀಡಿದ ಉತ್ತರಖಂಡ ಮುಖ್ಯಮಂತ್ರಿ ಸುರಂಗ ನಿರ್ಮಾಣಡಾ ವೇಳೆ ನೆಲಸಮ ಮಾಡಲಾಗಿದ್ದ ಶಿವ ದೇವಾಲಯವನ್ನು ಮತ್ತೆ ಅದೇ ಜಾಗದಲ್ಲಿ ನಿರ್ಮಾಣ ಮಾಡುತ್ತೇವೆ ನಮ್ಮಿಂದ ತಪ್ಪಾಗಿದೆ. ಅಲ್ಲದೆ ದೇವರು ನಮಗೆ ಒಂದು ಎಚ್ಚರಿಕೆಯ ಸಂದೇಶ ನೀಡಿದ್ದಾರೆ ಇದರಿಂದ ನಾವು ಕಲಿಯಬೇಕಾಗಿದೆ ಹಾಗಾಗಿ ಯಾವ ಸ್ಥಳದಲ್ಲಿ ಮೊದಲು ದೇವಸ್ಥಾನ ಇತ್ತೋ ಅದೇ ಜಾಗದಲ್ಲಿ ಮತ್ತೆ ಮಂದಿರ ನಿರ್ಮಾಣ ಮಾಡುತ್ತೇವೆ ಎಂದು ಮಂಗಳವಾರ ಸುರಂಗದೊಳಗೆ ಸಿಲುಕಿದ್ದ ಕಾರ್ಮಿಕರ ರಕ್ಷಣೆ ನಡೆದ ಬಳಿಕ ಸುದ್ದಿಗೋಷ್ಠಿ ನಡೆಸಿ ಹೇಳಿಕೆ ನೀಡಿದ್ದಾರೆ ಎನ್ನಲಾಗಿದೆ.
Follow us for more updates:
FB PAGE : https://www.facebook.com/NewsNotOut2023
Insta : https://www.instagram.com/newsnotout/
Tweet : https://twitter.com/News_Not_Out
YouTube : https://www.youtube.com/@newsnotout8209
Koo app: https://www.kooapp.com/profile/NewsNotOut
Website : https://newsnotout.com/