ನ್ಯೂಸ್ ನಾಟೌಟ್: ಲವ್ ಜಿಹಾದ್ ನಿಂದ ಹಿಂದೂ ಹುಡುಗಿಯನ್ನು ರಕ್ಷಿಸಿದ ಬಜರಂಗದಳ ಕಾರ್ಯಕರ್ತರ ವಿರುದ್ಧ ಪೊಲೀಸರು ಸುಳ್ಳು ಕೇಸ್ ದಾಖಲಿಸಿದ್ದಾರೆಂದು ವಿಶ್ವ ಹಿಂದೂ ಪರಿಷದ್ ಬಜರಂಗದಳ ಖಂಡನೆ ವ್ಯಕ್ತಪಡಿಸಿದೆ.
ದ್ವೇಷ ರಾಜಕಾರಣಕ್ಕೆ ಬಜರಂಗದಳ ಕಾರ್ಯಕರ್ತರ ವಿರುದ್ಧ ಸುಳ್ಳು ಕೇಸ್ ಹಾಕಲಾಗುತ್ತಿದೆ. ವಿನಾಕಾರಣ ಬಂಧಿಸಿ ಕಾರ್ಯಕರ್ತರ ಮನೋಸ್ಥೈರ್ಯವನ್ನು ಕುಗ್ಗಿಸುವಂತಹ ಕೆಲಸ ನಡೆಯುತ್ತಿದೆ. ಕಾಂಗ್ರೆಸ್ ಸರ್ಕಾರ ಹಿಂದೂ ವಿರೋಧಿ ನೀತಿಯನ್ನು ಅನುಸರಿಸುತ್ತಿದೆ.
ತಕ್ಷಣ ಬಜರಂಗದಳ ಕಾರ್ಯಕರ್ತರ ಮೇಲೆ ಹಾಕಿರುವ ಕೇಸ್ ಅನ್ನು ಹಿಂದಕ್ಕೆ ಪಡೆಯಬೇಕು ಮತ್ತು ಲವ್ ಜಿಹಾದ್ ಗೆ ಹಿಂದೂ ಹುಡುಗಿಯನ್ನು ತಳ್ಳಲು ಯತ್ನಿಸಿದ ಪಾಂಡೇಶ್ವರದ ನೂರುಲ್ ಅಮಿನ್ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕೆಂದು ವಿಶ್ವ ಹಿಂದೂ ಪರಿಷದ್ ಮಂಗಳೂರು ಜಿಲ್ಲಾಧ್ಯಕ್ಷ ಎಚ್ .ಕೆ. ಪುರುಷೋತ್ತಮ್ ಆಗ್ರಹಿಸಿದ್ದಾರೆ.
ಮಂಗಳೂರಿನ ಮಂಕಿಸ್ಟಾಂಡ್ ಬಳಿ ಚಿಕ್ಕಮಗಳೂರಿನ ಯುವತಿಯನ್ನು ಸ್ಥಳೀಯ ಯುವಕರು ಪೊಲೀಸರಿಗೆ ಮಾಹಿತಿ ನೀಡಿ ಲವ್ ಜಿಹಾದ್ ನಿಂದ ರಕ್ಷಣೆ ಮಾಡಿದ್ದರು.