ನ್ಯೂಸ್ ನಾಟೌಟ್ : ಕೇರಳ ರಾಜ್ಯವನ್ನೇ ಬೆಚ್ಚಿ ಬೀಲಿಸುವಂತೆ ಮಾಡಿದ್ದ ಆರು ವರ್ಷದ ಬಾಲಕಿ ಅಪಹರಣ ಪ್ರಕರಣಕ್ಕೆ ಸಂಬಂಧ ಪಟ್ಟ ಹಾಗೆ ಮಹತ್ವದ ಮಾಹಿತಿ ಲಭ್ಯವಾಗಿದೆ. ಕೊಲ್ಲಂನಿಂದ ಅಪಹರಣಗೊಂಡಿದ್ದ ಆರು ವರ್ಷದ ಬಾಲಕಿ ಅಬಿಗೈಲ್ ಸಾರಾ ರೆಜಿ ಸುರಕ್ಷಿತವಾಗಿ ಪತ್ತೆಯಾಗಿದ್ದಾಳೆಂದು ತಿಳಿದು ಬಂದಿದೆ.
ಅಪಹರಣಕಾರರು ಬಾಲಕಿ ತಾಯಿಗೆ ಕರೆ ಮಾಡಿ ೧೦ ಲಕ್ಷ ರೂ. ಹಣ ನೀಡುವಂತೆ ಬೇಡಿಕೆ ಇಟ್ಟಿದ್ದರು ಎಂದು ವರದಿಯಾಗಿತ್ತು.ಈ ಬಗ್ಗೆ ವಿಶೇಷ ಮುತುರ್ವಜಿ ವಹಿಸಿದ್ದ ಕೇರಳ ಸಿ.ಎಂ. ಬಾಲಕಿಯನ್ನು ಶೀಘ್ರ ಪತ್ತೆ ಮಾಡುವಂತೆ ಪೊಲೀಸರಿಗೆ ಸೂಚನೆ ನೀಡಿದ್ದರು. ಇದೀಗ ಬಾಲಕಿ ಕೊಲ್ಲಂ ಆಶ್ರಮದ ಮೈದಾನದಲ್ಲಿ ಬಿಟ್ಟು ಪರಾರಿಯಾಗಿದ್ದಾರೆ ಎಂಬ ಪ್ರಾಥಮಿಕ ಮಾಹಿತಿ ಲಭ್ಯವಾಗಿದೆ. ಬಾಲಕಿಯನ್ನು ಪೊಲೀಸರು ಸದ್ಯ ನಗರ ಪೊಲೀಸ್ ಆಯುಕ್ತರ ಕೇಂದ್ರ ಕಚೇರಿಗೆ ಸ್ಥಳಾಂತರಿಸಿದ್ದಾರೆ ಎನ್ನಲಾಗಿದೆ.
ತನ್ನ ಸಹೋದರನೊಂದಿಗೆ ಟ್ಯೂಷನ್ ತರಗತಿಗೆ ಹೋಗುತ್ತಿದ್ದ ಆರು ವರ್ಷದ ಬಾಲಕಿಯನ್ನು ಅಪಹರಣಕಾರರು ಕಾರಿನಲ್ಲಿ ಅಪಹರಿಸಿದ್ದರು. ಕಾರಿನಲ್ಲಿ ಮಹಿಳೆ ಸಮೇತವಿದ್ದ ತಂಡವೊಂದು ಸೋಮವಾರ ಕೊಲ್ಲಂ ಓಯೂರಿನಿಂದ ಅಪಹರಣ ಮಾಡಿದ್ದರು.ಅದಾದ ಬಳಿಕ ರಾತ್ರಿ ವೇಳೆ ತಾಯಿಗೆ ಕರೆ ಮಾಡಿ 10 ಲಕ್ಷ ರೂ. ನೀಡುವಂತೆ ಡಿಮ್ಯಾಂಡ್ ಮಾಡಿದ್ದರು.ಇದೀಗ ಕಿಡ್ನಾಪ್ ಗೊಂಡ 20 ಗಂಟೆಗಳ ನಂತರ ಮಗು ಸುರಕ್ಷಿತವಾಗಿ ಪೊಲೀಸರ ಕೈ ಸೇರಿದ್ದು, ಸದ್ಯ ಅಪಹರಣಕಾರರ ಪತ್ತೆಗೆ ಪೊಲೀಸರು ಶೋಧ ಕಾರ್ಯ ನಡೆಸುತ್ತಿದ್ದಾರೆ ಎಂದು ವರದಿಯಾಗಿದೆ.