ನ್ಯೂಸ್ ನಾಟೌಟ್ : ಟಿವಿ ಸ್ಕ್ರೀನ್ನಲ್ಲಿ ಅಶ್ಲೀಲ ವಿಡಿಯೊ (Adult Video) ಪ್ರಸಾರವಾಗಿ ಅಲ್ಲಿದ್ದ ಜನ ಮುಜುಗರಕ್ಕೊಳಗಾದ ಘಟನೆ ಪಾಕಿಸ್ತಾನದ ಕರಾಚಿಯಲ್ಲಿರುವ ಇಂಗ್ಲೆಂಡ್ ವೀಸಾ ಕಚೇರಿಯ ಇಂದು(ನ.27) ರಂದು ನಡೆದಿದೆ.
ಗೆರ್ರಿ ಎಂಬಲ್ಲಿನ ವೀಸಾ ಕೇಂದ್ರದಲ್ಲಿ ಈ ಮುಜುಗರದ ಘಟನೆ ನಡೆದಿದೆ. ಮಹಿಳೆಯರು ಮತ್ತು ಭದ್ರತಾ ಸಿಬ್ಬಂದಿ ನೋಡುತ್ತಿರುವಂತೆಯೇ ಈ ದೃಶ್ಯ ಪ್ರಸಾರವಾಗಿದೆ. ಸ್ವಲ್ಪ ಹೊತ್ತಿನಲ್ಲಿ ಕಚೇರಿಯ ಸಿಬ್ಬಂದಿ ಟಿವಿ ಸ್ವಿಚ್ ಆಫ್ ಮಾಡಿದ್ದಾರೆ ಎನ್ನಲಾಗಿದೆ. ಕರಾಚಿಯ ವೀಸಾ ಕಚೇರಿಗೆ ಆಗಮಿಸಿದ್ದ ಜನರಿಗೆ ಅನುಕೂಲವಾಗಲೆಂದು ಕಾರ್ಯವಿಧಾನವನ್ನು ಟಿವಿಯಲ್ಲಿ ಪ್ರದರ್ಶಿಸಲಾಗುತ್ತದೆ.
ಅದರಂತೆ ದೃಶ್ಯ ಪ್ರಸಾರವಾಗುತ್ತಿತ್ತು. ಈ ವಿಡಿಯೊವನ್ನು ಹೈಲೈಟ್ ಮಾಡಲು ಕೆಮೆರಾ ಜೂಮ್ ಮಾಡಲಾಗಿದೆ. ಆಗ ಇದ್ದಕ್ಕಿದ್ದಂತೆ ದೊಡ್ಡ ಸ್ಕ್ರೀನ್ ಮೇಲೆ ಅಶ್ಲೀಲ ವಿಡಿಯೊ ಪ್ರಸಾರವಾಗಿದೆ. ಇದನ್ನು ನೋಡುತ್ತಿದ್ದಂತೆ ಅಲ್ಲಿದ್ದವರು ಒಂದು ಕ್ಷಣ ಶಾಕ್ಗೆ ಆಗಿದ್ದಾರೆ.
ಈ ದೃಶ್ಯ ಕೆಮರಾದಲ್ಲಿ ಸೆರೆಯಾಗಿದ್ದು, ವಿಡಿಯೊ ಸೋಷಿಯಲ್ ಮೀಡಿಯಾಗಳಲ್ಲಿ ಹರಿದಾಡಿದೆ. ಇದೇ ರೀತಿಯ ಘಟನೆ ಈ ಹಿಂದೆ ಭಾರತದಲ್ಲೂ ನಡೆದಿತ್ತು. ವರ್ಷಾರಂಭದಲ್ಲಿ ಬಿಹಾರದ ಪಾಟ್ನಾ ರೈಲ್ವೆ ಸ್ಟೇಶನ್ನ 10ನೇ ಪ್ಲಾಟ್ಫಾರ್ಮ್ನಲ್ಲಿ ಮೂರು ನಿಮಿಷಗಳ ಕಾಲ ಅಶ್ಲೀಲ ಚಿತ್ರ ಪ್ರದರ್ಶನವಾಗಿತ್ತು.