ನ್ಯೂಸ್ ನಾಟೌಟ್: ಲವ್ ಜಿಹಾದ್ ಬಗ್ಗೆ ಹಲವರು ಭಯ ಪಡುತ್ತಿದ್ದು, ಇದನ್ನು ತಡೆಗಟ್ಟಲು ಗದಗದಲ್ಲಿ ವಿಶೇಷ ಕ್ರಮ ಕೈಗೊಳ್ಳಲಾಗಿದೆ. ಶ್ರೀ ಸಹಸ್ರಾರ್ಜುನ ಮಹಾರಾಜರ ಜಯಂತೋತ್ಸವದ ಅಂಗವಾಗಿ ಗದಗ ನಗರದ ವಿಠ್ಠಲ ರೂಢಮಠದಲ್ಲಿ ನಡೆದ ಕಾರ್ಯಕ್ರಮದಲ್ಲಿ ಪೋಷಕರಿಂದ ತಮ್ಮ ಮಕ್ಕಳಿಗೆ ಲವ್ ಜಿಹಾದ್ ಗೆ ಬಲಿಯಾಗುವುದಿಲ್ಲ ಎಂಬ ಬಗ್ಗೆ ಆಣೆ ಪ್ರಮಾಣ ಮಾಡಿಸಲಾಯಿತು ಎಂದು ವರದಿ ತಿಳಿಸಿದೆ.
ಸುಮಾರು 200 ಯುವತಿಯರು, ಪೋಷಕರು ಪಾಲ್ಗೊಂಡಿದ್ದ ಕಾರ್ಯಕ್ರಮ. ಸಭೆಯಲ್ಲಿ ಅನ್ಯ ಧರ್ಮಿ ಯುವಕರಿಂದಾಗುವ ಲವ್ ಜಿಹಾದ್ ಬಗ್ಗೆ ಜಾಗೃತಿ ಮೂಡಿಸಲಾಯಿತು. ಬಳಿಕ ಪೋಷಕರು ತಮ್ಮ ಮಕ್ಕಳಿಗೆ ದೇವರ ಹೆಸರಿನಲ್ಲಿ ಆಣೆ ಪ್ರಮಾಣ ಮಾಡಿಸಿದ ಘಟನೆ ಇಂದು(ನ.೨೬) ರಂದು ನಡೆಯಿತು.
ಪರಸ್ಪರ ಪ್ರೀತಿಸಿ ಮದುವೆಯಾಗುವುದು ಜಾತಿ ಮತ ಪಂಥ ಮೀರಿದ್ದು ನಿಜ. ಆದರೆ ಎಲ್ಲ ಪ್ರೇಮ ವಿವಾಹಗಳು ಒಂದೇ ಆಗಿರುವುದಿಲ್ಲ. ಇಲ್ಲಿ ಪ್ರೀತಿ ಪ್ರೇಮಗಳ ಹೆಸರಿನಲ್ಲಿ ವಂಚನೆಗಳು ನಡೆಯುತ್ತವೆ. ಅದಕ್ಕೆ ಸ್ಪಷ್ಟ ಉದಹಾರಣೆ ಲವ್ ಜಿಹಾದ್.
ಹೀಗಾಗಿ ಪ್ರೀತಿ ಪ್ರೇಮ, ಲವ್ ಜಿಹಾದ್ ಎಂದು ಭಾವಿಸುವ ಆಗಿಲ್ಲ. ಧರ್ಮವನ್ನು ಧಿಕ್ಕರಿಸಿ ಲವ್ ಜಿಹಾದ್ ಗೆ ಬಲಿಯಾಗುವುದನ್ನು ತಡೆಯಬೇಕು ಎಂದು ಆಯೋಜಕರು ತಿಳಿಸಿದ್ದಾರೆ.