ನ್ಯೂಸ್ ನಾಟೌಟ್ : ಸುಳ್ಯದ ಮುಖ್ಯ ರಸ್ತೆಯಲ್ಲಿರುವ ಹೆಸರಾಂತ ವಸ್ತ್ರಮಳಿಗೆ ಕುಂ..ಕುಂ.. ಮಳಿಗೆಯಲ್ಲಿ ಹಬ್ಬಗಳ ಸಂಭ್ರಮಕ್ಕಾಗಿ ಗ್ರಾಹಕರಿಗೆ ಬಿಗ್ ಸೇಲ್ ಆಫರ್ ಜತೆಜತೆಗೆ ಸ್ಕ್ರಾಚ್ ಕಾರ್ಡ್ ಮೂಲಕ ಬಹುಮಾನ ಗೆಲ್ಲುವ ಅಪೂರ್ವ ಅವಕಾಶವನ್ನು ಆಯೋಜಿಸಲಾಗಿತ್ತು. ಇದೀಗ ವಿಜೇತರಿಗೆ ಬಹುಮಾನವನ್ನು ಹಸ್ತಾಂತರ ಮಾಡಲಾಗಿದೆ.
ಕೆಲವು ತಿಂಗಳುಗಳ ಕಾಲ ಕುಮ್ ಕುಮ್ ಫ್ಯಾಶನ್ ನಲ್ಲಿ ಹಬ್ಬದ ವಾತಾವರಣವೇ ನಿರ್ಮಾಣವಾಗಿತ್ತು.ಗ್ರಾಹಕರಿಗಾಗಿ ವಿಶೇಷ ಆಫರ್ ಜತೆಗೆ ಬಿಗ್ ಸೇಲ್ ಆಫರ್ ನಡೆಯುತ್ತಿತ್ತು.ಬಟ್ಟೆ ಖರೀದಿಯಲ್ಲಿ ಬಹುಮಾನಗಳ ಸ್ಕ್ರಾಚ್ ಕಾರ್ಡ್ ಮತ್ತು ಆಕರ್ಷಕ ಬಹುಮಾನಗಳನ್ನು ನೀಡಲಾಗಿತ್ತು.ಇದೀಗ 5000 ದ ಮೇಲಿನ ಖರೀದಿಗೆ ಡೈಮಂಡ್ ಸ್ಕ್ರಾಚ್ ಕಾರ್ಡ್ ನೀಡಲಾಗಿದೆ. ಇದರಲ್ಲಿ ಅಡ್ಕಾರ್ ವಿನೋಬಾನಗರದ ಆದ್ಯಾ ಕೆ.ಆರ್. ಪ್ರಿಡ್ಜ್ ನ್ನು ತಮ್ಮದಾಗಿಸಿಕೊಂಡಿದ್ದಾರೆ. ಸುಳ್ಯ ಕಾಯರ್ತೋಡಿಯ ಅನುಷಾ. ಕೆ ಯವರು ವಾಷಿಂಗ್ ಮೆಷಿನ್ ಗೆದ್ದುಕೊಂಡರು.ಅವರಿಗೆ ಸಂಸ್ಥೆಯ ಮಾಲಕರು ಬಹುಮಾನ ಹಸ್ತಾಂತರ ಮಾಡಿದರು.
ಆಕರ್ಷಕ ಉಡುಪುಗಳು ಹಾಗೂ ನವ ನವೀನ ಮಾದರಿಯ ವಿನ್ಯಾಸಗಳೊಂದಿಗೆ ಸದಾ ಹೊಸತನಕ್ಕೆ ತೆರೆದು ಕೊಂಡಿರುವ ಈ ಸಂಸ್ಥೆಯಲ್ಲಿ ಇದೀಗ ತರಹೇವಾರಿ ವಸ್ತ್ರಗಳ ಅಪೂರ್ವ ಸಂಗ್ರಹವೇ ಇಲ್ಲಿದೆ.ಬ್ರಾಂಡೆಡ್ ಬಟ್ಟೆಗಳು ಇಲ್ಲಿ ಲಭ್ಯವಿದ್ದು, ಮದುವೆ,ಸಮಾರಂಭ, ಗೃಹಪ್ರವೇಶ, ಪೂಜಾ ಬಟ್ಟೆಗಳ ಖರೀದಿಯ ಮೇಲೆ ವಿಶೇಷ ರಿಯಾಯಿತಿಯನ್ನೂ ಇಲ್ಲಿ ನೀಡಲಾಗುತ್ತದೆ.ಮಾತ್ರವಲ್ಲ, 2000 ರೂಪಾಯಿಯ ಮೇಲಿನ ಲಕ್ಕಿ ಕೂಪನ್ ಕೊಡುಗೆ ನ.29ಕ್ಕೆ ಮುಕ್ತಾಯವಾಗಲಿದೆ. ಬಂಪರ್ ಬಹುಮಾನ ಬೈಕ್,ಸ್ಕೂಟಿ ಇತ್ಯಾದಿ ಬಹುಮಾನಗಳ ಯೋಜನೆ ಮುಂದಿನ ವರ್ಷ ಸುಳ್ಯ ಜಾತ್ರೆಯವರೆಗೂ ಆಫರ್ ಇರಲಿದೆ.ಗ್ರಾಹಕರು ಇದರ ಪ್ರಯೋಜನ ಪಡೆದುಕೊಳ್ಳಬಹುದು ಎಂದು ಸಂಸ್ಥೆಯು ಮಾಲಕರು ತಿಳಿಸಿದ್ದಾರೆ.