ನ್ಯೂಸ್ ನಾಟೌಟ್ :ಚಿಕ್ಕ ಮಕ್ಕಳ ಎದುರು ತುಂಬಾ ಎಚ್ಚರಿಕೆಯಿಂದ ಇರಬೇಕಾಗುತ್ತದೆ.ಕೈಗೆ ಏನಾದರು ಸಿಕ್ಕರೆ ನೇರವಾಗಿ ಬಾಯಿಗೆ ಹಾಕಿಕೊಂಡು ಬಿಡುತ್ತವೆ. ಹೀಗೆ ಒಬ್ಬ 5 ವರ್ಷದ ಬಾಲಕನೋರ್ವ ತನ್ನ ಮನೆಯ ಹೊರಗೆ ಸಿಕ್ಕ ಹಳೆಯ ಬೀಗವನ್ನು ನುಂಗಿ ಸಾವು ಬದುಕಿನ ಮಧ್ಯೆ ಹೋರಾಟ ನಡೆಸುತ್ತಿದ್ದ ದಾರುಣ ಘಟನೆಯೊಂದು ವರದಿಯಾಗಿದೆ.ಆದರೆ ವೈದ್ಯರು ಯಾವುದೇ ಶಸ್ತ್ರಚಿಕಿತ್ಸೆ ಮಾಡದೇ ಬೀಗವನ್ನು ಹೊರ ತೆಗೆದಿದ್ದಾರೆ.ಅದು ಹೇಗೆ ಗೊತ್ತಾ?
ಹೌದು, ನವದೆಹಲಿಯ ಖಮ್ಮಂ ನಗರದ ರಾಠಿ ದರ್ವಾಜ ಪ್ರದೇಶದಲ್ಲಿ ಈ ದುರಂತ ಸಂಭವಿಸಿದೆ. 5 ವರ್ಷದ ಬಾಲಕ ಮೊಹಮ್ಮದ್ ಮಹೈಜ್ ಎಂಬಾತ ಹಳೆಯ ಬೀಗವನ್ನು ನುಂಗಿ ಒದ್ದಾಡಿದ ಬಾಲಕ .ಈತ ಹೊರಗಡೆ ಆಟವಾಡುತ್ತಾ ಇದ್ದ ವೇಳೆ ಅಲ್ಲೇ ಬಿದ್ದಿದ್ದ ಬೀಗವನ್ನು ಬಾಯಿಗೆ ಹಾಕಿ ನುಂಗಿದ್ದಾನೆ. ತಕ್ಷಣ ಬಾಲಕನ ತಂದೆ ಗಮನಿಸಿ ಹತ್ತಿರದ ಆಸ್ಪತ್ರೆಯೊಂದಕ್ಕೆ ಕರೆದೊಯ್ದಿದ್ದಾರೆ. ಎಕ್ಸರೇ ತೆಗೆದು ನೋಡಿದಾಗ ವೈದ್ಯರೇ ಬೆಚ್ಚಿ ಬಿದ್ದಿದ್ದಾರೆ.ನಿಜ,ಆ ಎಕ್ಸ್ ರೇ ಬಾಲಕನ ಹೊಟ್ಟೆಯಲ್ಲಿ ಬೀಗ ಇರುವುದು ಪತ್ತೆಯಾಗಿದೆ. ಇದನ್ನು ಶಸ್ತ್ರಚಿಕಿತ್ಸೆ ಮೂಲಕವಾಗಿ ತೆಗೆಯಬೇಕಾಗುತ್ತದೆ. ಆದರೆ ಅಧಿಕ ಹಣ ಖರ್ಚಾಗುತ್ತದೆ ಎಂದು ಪೋಷಕರ ಬಳಿ ವೈದ್ಯರು ಹೇಳಿದಾಗ ಬಾಲಕನನ್ನು ಖಮ್ಮಂನಲ್ಲಿರುವ ಸಾಯಿರಾಮ್ ಗ್ಯಾಸ್ಟ್ರೋ ಲಿವರ್ ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಯಿತು.ಸಾಯಿ ರಾಮ್ ಆಸ್ಪತ್ರೆ ಗ್ಯಾಸ್ಟ್ರೋದಲ್ಲಿ ಆಧುನಿಕ ಎಂಡೋಸ್ಕೋಪಿ ಮೂಲಕ ಶಸ್ತ್ರ ಚಿಕಿತ್ಸೆ ಇಲ್ಲದೆ ಬೀಗ ತೆಗೆದು ಬಾಲಕನ ಜೀವ ಉಳಿಸಿದ್ದಾರೆ..! ವೈದ್ಯ ಜಂಗಾಲ ಸುನಿಲ್ ಕುಮಾರ್. ಮಗು ಜೀವ ಉಳಿಸಿದ ವೈದ್ಯರಿಗೆ ಬಾಲಕನ ಪೋಷಕರು ಕೃತಜ್ಞತೆ ಸಲ್ಲಿಸಿದ್ದಾರೆ.ಡಾ.ಜಂಗಾಲ ಸುನೀಲ್ ಕುಮಾರ್ ಮಾತನಾಡಿ, ಅತ್ಯಂತ ಗಂಭೀರವಾದ ಸಮಸ್ಯೆಗೆ ವೈಜ್ಞಾನಿಕ ಚಿಕಿತ್ಸೆ ನೀಡದೆ ಬೀಗ ತೆಗೆದಿದ್ದು, ಪೋಷಕರು ಸಕಾಲದಲ್ಲಿ ಸ್ಪಂದಿಸಿ ಬಾಲಕನನ್ನು ಆಸ್ಪತ್ರೆಗೆ ಕರೆತಂದಿದ್ದರಿಂದ ಅನಾಹುತ ತಪ್ಪಿದೆ. ಇದೀಗ ಬಾಲಕ ಸಂಪೂರ್ಣ ಆರೋಗ್ಯವಂತನಾಗಿರುವುದರಿಂದ ಇಂತಹ ವಿಷಯಗಳನ್ನು ಮಕ್ಕಳಿಂದ ದೂರವಿಡಬೇಕು ಎಂದು ಡಾ.ಜಂಗಾಲ ಸುನೀಲ್ ಕುಮಾರ್ ಪೋಷಕರಿಗೆ ಸಲಹೆ ನೀಡಿದರು.