ನ್ಯೂಸ್ ನಾಟೌಟ್ :ಜಮ್ಮು ಮತ್ತು ಕಾಶ್ಮೀರದ (Jammu and Kashmir) ಗಡಿ ಜಿಲ್ಲೆ ರಜೌರಿಯಲ್ಲಿ ಬುಧವಾರ ಭಯೋತ್ಪಾದಕರ ಜೊತೆ ನಡೆದ ಎನ್ಕೌಂಟರ್ನಲ್ಲಿ ಇಬ್ಬರು ಅಧಿಕಾರಿಗಳು ಸೇರಿದಂತೆ ನಾಲ್ವರು ಸೇನಾ ಸಿಬ್ಬಂದಿ ಹುತಾತ್ಮರಾಗಿದ್ದಾರೆ.ಹುತಾತ್ಮರಾದ ನಾಲ್ವರಲ್ಲಿ 63 ರಾಷ್ಟ್ರೀಯ ರೈಫಲ್ಸ್ನ ಕ್ಯಾಪ್ಟನ್ ಎಂ.ವಿ.ಪ್ರಾಂಜಲ್ ಸೇರಿದ್ದು, ಇವರು ಮಂಗಳೂರು ರಿಫೈನರಿ ಮತ್ತು ಪೆಟ್ರೋಕೆಮಿಕಲ್ಸ್ ಲಿಮಿಟೆಡ್ (MRPL) ನ ಮಾಜಿ ನಿರ್ದೇಶಕ ಎಂ.ವೆಂಕಟೇಶ್ ಎಂಬವರ ಪುತ್ರ.
ಇದೀಗ ಹುತಾತ್ಮ ಕ್ಯಾಪ್ಟನ್ ಎಂ.ವಿ. ಪ್ರಾಂಜಲ್ ಅವರು ಒಬ್ಬ ಕಲೆಗಾರ ಅನ್ನುವ ಬಗ್ಗೆ ಹಲವಾರು ವಿಚಾರಗಳ ಬಗ್ಗೆ ವರದಿಯಾಗಿದೆ.ಇವರು ಅಭಿರುಚಿಯುಳ್ಳ ಛಾಯಾಗ್ರಾಹಕರಾಗಿದ್ದು, ಅತ್ಯಾಸಕ್ತಿಯ ಟ್ರಾವೆಲರ್, ಹವ್ಯಾಸಿ ಜಾದೂಗಾರ ಮತ್ತು ಸ್ಕೌಟ್ ರೇಂಜರ್ ಆಗಿದ್ದರು ಎಂದು ತಿಳಿದು ಬಂದಿದೆ. ಪ್ರಾಂಜಲ್ ಅವರು ಭಾರತೀಯ ಸೇನೆಯಿಂದ ತಮ್ಮ ರಜೆಯ ಸಮಯದಲ್ಲಿ ಮಂಗಳೂರಿಗೆ ಭೇಟಿ ನೀಡಿದಾಗಲೆಲ್ಲ ತಮಗಿರುವ ಜ್ಞಾನವನ್ನು ವಿದ್ಯಾರ್ಥಿಗಳೊಂದಿಗೂ ಹಂಚಿಕೊಳ್ಳುತ್ತಿದ್ದರು ಅನ್ನುವ ಮಾಹಿತಿ ಲಭ್ಯವಾಗಿದೆ.ಅವರು ಬ್ಯಾಚುಲರ್ ಆಫ್ ಎಜುಕೇಶನ್ (ಬಿಎಡ್) ಪದವೀಧರರಿಗೆ ಭಾರತದ ಧ್ವಜ ಸಂಹಿತೆಯ ಬಗ್ಗೆ ತರಗತಿ ತೆಗೆದುಕೊಳ್ಳುತ್ತಿದ್ದರು ಮಾತ್ರವಲ್ಲ ಇತಿಹಾಸ ಮತ್ತು ಅನುಸರಿಸಬೇಕಾದ ಪ್ರೋಟೋಕಾಲ್ಗಳ ಬಗ್ಗೆ ಅಪಾರ ಜ್ಞಾನ ಹೊಂದಿದ್ದ ಇವರು ಅದನ್ನು ವಿದ್ಯಾರ್ಥಿಗಳ ಜತೆ ಶೇರ್ ಮಾಡುತ್ತಿದ್ದರು ಎಂದು ತಿಳಿದು ಬಂದಿದೆ. ಮಂಗಳೂರಿನಲ್ಲಿ ಅವರ ಗುರುಗಳೊಬ್ಬರು ಮಾತನಾಡುತ್ತಾ, ಪ್ರಾಂಜಲ್ ಬದ್ಧಿವಂತ ಯುವಕ ಮತ್ತು ಇತರರಿಗೆ ಯಾವಾಗಲೂ ಸಹಾಯ ಮಾಡಲು ಪ್ರಾಮಾಣಿಕವಾಗಿ ಮುಂದೆ ಬರುತ್ತಿದ್ದರು ಎಂದು ಹೇಳಿದ್ದಾರೆ. ಪ್ರಾಂಜಲ್ ಅವರು 2009 ರಲ್ಲಿ ರಾಷ್ಟ್ರಪತಿ ಸ್ಕೌಟ್ ಪೂರ್ಣಗೊಳಿಸಿದ್ದು, ಅವರು ಮಂಗಳೂರಿಗೆ ಭೇಟಿ ನೀಡಿದಾಗಲೆಲ್ಲಾ ಉದಯೋನ್ಮುಖ ಸ್ಕೌಟ್ಗಳಿಗೆ ತರಗತಿ ತೆಗೆದುಕೊಳ್ಳುತ್ತಿದ್ದರು ಎಂದು ಹೇಳಿದ್ದಾರೆ.ಘಟನೆಯ ಕೆಲವೇ ದಿನಗಳ ಮೊದಲು ಪ್ರಾಂಜಲ್ ಅವರೊಂದಿಗಿನ ಕೊನೆಯ ಸಂಭಾಷಣೆಯನ್ನು ನೆನಪಿಸಿಕೊಂಡ ಗುರುಗಳು ಕಣ್ಣೀರಾಗಿದ್ದಾರೆ. ಪ್ರಾಂಜಲ್, ದೆಹಲಿ ಪಬ್ಲಿಕ್ ಸ್ಕೂಲ್, MRPL ನ ಹಳೆಯ ವಿದ್ಯಾರ್ಥಿಯಾಗಿದ್ದರು.