ರಾಜಕೀಯವೈರಲ್ ನ್ಯೂಸ್

ನಿಮಗೂ ಪಡಿತರದ ಹಣ ಇನ್ನೂ ಬಂದಿಲ್ಲವೇ..? ಪಡಿತರಚೀಟಿದಾರರಿಗೆ ಶೀಘ್ರವೇ ಬರಲಿದೆಯಂತೆ “ಸ್ಮಾರ್ಟ್‌ ಕಾರ್ಡ್‌”! ಈ ಬಗ್ಗೆ ಆಹಾರ ಸಚಿವ ಹೇಳಿದ್ದೇನು?

3

ನ್ಯೂಸ್‌ ನಾಟೌಟ್‌: ಅನ್ನಭಾಗ್ಯ ಯೋಜನೆ ಜಾರಿಯಾಗಿನಿಂದ ರೇಷನ್‌ ಕಾರ್ಡ್‌ಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ಹಲವಾರು ಬದಲಾವಣೆಗಳನ್ನು ತರುತ್ತಲೇ ಇದೆ. ಇದೀಗ ಪಡಿತರದಾರರಿಗೆ ಚೀಟಿ ಜೊತೆಗೆ ಶೀಘ್ರವೇ ಅನ್ನಭಾಗ್ಯದ ಸ್ಮಾರ್ಟ್‌ ಕಾರ್ಡ್‌ ಕೊಡಲಾಗುವುದು. ಬಿಪಿಎಲ್‌ ಹಾಗೂ ಎಪಿಎಲ್‌ ಚೀಟಿದಾರರಿಗೆ ಇದನ್ನು ವಿತರಣೆ ಮಾಡಲಾಗುವುದು ಎಂದು ಕೋಲಾರದಲ್ಲಿ ಆಹಾರ ಸಚಿವ ಕೆ.ಎಚ್‌.ಮುನಿಯಪ್ಪ ಹೇಳಿಕೆ ನೀಡಿದ್ದಾರೆ.

ಈ ಸ್ಮಾರ್ಟ್‌ ಕಾರ್ಡ್‌ ಬಹು ಉಪಯೋಗಿ ಕಾರ್ಡ್‌ ಆಗಿರಲಿದ್ದು , ಅನ್ನಭಾಗ್ಯ ಯೋಜನೆಯಡಿ 1.13 ಕೋಟಿ ಕಾರ್ಡ್‌ದಾರರಿಗೆ ಅಂದರೆ ಸುಮಾರು ₹4 ಕೋಟಿ ಜನರಿಗೆ ಹಣ ಸಂದಾಯ ಮಾಡಿದ್ದೇವೆ. 2.66 ಲಕ್ಷ ಕಾರ್ಡ್‌ದಾರರು ಪೋಸ್ಟಲ್‌ ಇಲಾಖೆಯಲ್ಲಿ ಖಾತೆ ತೆರೆದಿದ್ದು, ಅವರಿಗೂ ಹಣ ಸಂದಾಯ ಆಗುತ್ತಿದೆ ಎಂದರು. ಇವುಗಳ ಸಂಪೂರ್ಣ ಮಾಹಿತಿಯನ್ನು ಸ್ಮಾರ್ಟ್ ಕಾರ್ಡ್ ಹೊಂದಿರಲಿದೆ ಮತ್ತು ಹಣದ ದುರುಪಯೋಗ ಆಗದಂತೆ ತಡೆಯಲಿದೆ ಎಂದಿದ್ದಾರೆ.

ಶೇಕಡಾ 90ರಷ್ಟು ಅಧಿಕ ಕಾರ್ಡ್‌ದಾರರಿಗೆ ಈಗಾಗಲೇ ಹಣ ತಲುಪಿದೆ. ಇನ್ನೂ 7 ಲಕ್ಷ ಕಾರ್ಡ್‌ದಾರರು ಬ್ಯಾಂಕ್‌ ಖಾತೆ ತೆರೆಯದಿರುವುದು ಸೇರಿದಂತೆ ವಿವಿಧ ಸಮಸ್ಯೆಯಿದೆ. ಅಂತಹವರಿಗೆ ಹಣ ಸಂದಾಯ ಆಗಿಲ್ಲ. ಅವರಿಗೂ ಹಣ ಸಂದಾಯ ಮಾಡಲು ಇಲಾಖೆ ಅಧಿಕಾರಿಗಳೇ ಖುದ್ದಾಗಿ ಕಾರ್ಡ್‌ಗಳನ್ನು ಪರಿಶೀಲನೆ ಮಾಡುತ್ತಿದ್ದಾರೆ. ಈ ಮೂಲಕ ಶೇಕಡಾ 100 ಸಾಧನೆ ಮಾಡಲಿದ್ದೇವೆ ಮತ್ತು ಬಾಕಿ ಇರುವ ಮೊತ್ತವನ್ನೂ ಜನರಿಗೆ ತಲುಪಿಸಲಿದ್ದೇವೆ ಎಂದು ಭರವಸೆ ನೀಡಿದ್ದಾರೆ.