ನ್ಯೂಸ್ ನಾಟೌಟ್: ಗ್ರಂಥಾಲಯಗಳ ಬಳಕೆ ಹೆಚ್ಚಿದಂತೆಲ್ಲ ನಮ್ಮ ಜ್ಞಾನ, ಬೌದ್ಧಿಕ ಮಟ್ಟ ವೃದ್ಧಿಸುತ್ತದೆ. ಒಂದು ಒಳ್ಳೆಯ ಗ್ರಂಥಾಲಯ ಆ ಸಂಸ್ಥೆಯ ಆತ್ಮವಿದ್ದಂತೆ ಎಂದು ಎನ್ನೆಂಸಿಯ ನಿವೃತ್ತ ಪ್ರಾಂಶುಪಾಲ ಮತ್ತು ಶೈಕ್ಷಣಿಕ ಸಲಹೆಗಾರ ಪ್ರೊ. ಬಾಲಚಂದ್ರ ಗೌಡ ಹೇಳಿದರು.
ಸುಳ್ಯದ ನೆಹರು ಸ್ಮಾರಕ ಮಹಾವಿದ್ಯಾಲಯದ ಗ್ರಂಥಾಲಯ ವಿಭಾಗ ಮತ್ತು ಐಕ್ಯೂಎಸಿ ಆಶ್ರಯದಲ್ಲಿ ಕಾಲೇಜಿನ ಸಭಾಂಗಣದಲ್ಲಿ ರಾಷ್ಟ್ರೀಯ ಗ್ರಂಥಾಲಯ ಸಪ್ತಾಹದ ಅಂಗವಾಗಿ ಆಯೋಜಿಸಿದ ಗ್ರಂಥಾಲಯ ಮಾಹಿತಿ ಕಾರ್ಯಾಗಾರದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು.
ಈಗ ಮಾಹಿತಿ ತಂತ್ರಜ್ಞಾನದ ಬೆಳವಣಿಗೆಯಿಂದ ಎಲ್ಲಾ ಮಾಹಿತಿಗಳು ಕ್ಷಣಮಾತ್ರದಲ್ಲಿ ದೊರೆಯುವಂತಾಗಿದೆ. ಗ್ರಂಥಾಲಯಗಳ ಬಳಕೆ ಹೆಚ್ಚಾದಂತೆ ನಮ್ಮ ಮನೋವಿಕಾಸವಾಗುತ್ತದೆ ಎಂದರು.
ಕಾಲೇಜಿನ ಪ್ರಾಂಶುಪಾಲ ಪ್ರೊ. ರುದ್ರಕುಮಾರ್ ಎಂ.ಎಂ. ಅಧ್ಯಕ್ಷತೆ ವಹಿಸಿದ್ದರು. ಮಾಹಿತಿ ಕಾರ್ಯಾಗಾರದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಸರಕಾರಿ ಪ್ರಥಮ ದರ್ಜೆ ಕಾಲೇಜು ಬೆಟ್ಟಂಪಾಡಿ ಇದರ ಆಯ್ಕೆ ಶ್ರೇಣಿ ಗ್ರಂಥಪಾಲಕ ರಾಮ ಕೆ. ಇವರು ‘Insights on NLIST, NDLI and SWAYAM’ ಎಂಬ ವಿಷಯದ ಬಗ್ಗೆ ಮಾಹಿತಿ ಕಾರ್ಯಾಗಾರ ನಡೆಸಿಕೊಟ್ಟರು. ಮಾಹಿತಿ ಕಾರ್ಯಾಗಾರದ ಕಾರ್ಯಕ್ರಮ ನಿರ್ದೇಶಕರಾದ ಪ್ರೊ. ಶ್ರೀಧರ ವಿ. ಹಾಗೂ ಮಾಹಿತಿ ಕಾರ್ಯಾಗಾರದ ಸಂಯೋಜಕ ಉಮೇಶ್ ಪ್ರಾಸ್ತಾವಿಕ ಮಾತನಾಡಿದರು. ದ್ವಿತೀಯ ಬಿಕಾಂ ವಿದ್ಯಾರ್ಥಿನಿ ಪದ್ಮಶ್ರೀ ಕಾರ್ಯಕ್ರಮ ನಿರೂಪಿಸಿದರು. ಕಾರ್ಯಕ್ರಮದಲ್ಲಿ ಅಂತಿಮ ಬಿಕಾಂ ವಿದ್ಯಾರ್ಥಿನಿ ರತ್ನಸಿಂಚನ ಬಳಗದವರು ಪ್ರಾರ್ಥನೆಗೈದರು. ಕಾಲೇಜು ವಿದ್ಯಾರ್ಥಿ ನಾಯಕ ತೃತೀಯ ಬಿಕಾಂ ವಿದ್ಯಾರ್ಥಿ ಜೊಸ್ಬಿನ್ ಬಾಬು ಸ್ವಾಗತಿಸಿ, ದ್ವಿತೀಯ ಬಿಕಾಂ ವಿದ್ಯಾರ್ಥಿನಿ ಅಂಕಿತಾ ಅತಿಥಿಗಳನ್ನು ಪರಿಚಯಿಸಿ, ದ್ವಿತೀಯ ಬಿಕಾಂ ವಿದ್ಯಾರ್ಥಿ ಕೀರ್ತನ್ ವಂದಿಸಿದರು. ಕಾಲೇಜಿನ ಐಕ್ಯುಎಸಿ ಸಂಯೋಜಕಿ ಡಾ. ಮಮತಾ ಕೆ., ಪ್ರೊ. ಡಿ.ಎಚ್. ತಿಪ್ಪೇಸ್ವಾಮಿ, ಪ್ರೊ.ಸತ್ಯಪ್ರಕಾಶ್, ಹಿರಿಯ ಉಪನ್ಯಾಸಕರಾದ ಕುಲದೀಪ್ ಪಿ.ಪಿ., ವಿಷ್ಣುಪ್ರಶಾಂತ್, ಅಜಿತ್ ಕುಮಾರ್, ಚಿತ್ರಲೇಖ ಮತ್ತು ಬೋಧಕ-ಬೋಧಕೇತರ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.