ನ್ಯೂಸ್ ನಾಟೌಟ್ : ಶಾಲಾ ಮಕ್ಕಳು ಇರುವಾಗ ವಾಹನ ಚಲಾಯಿಸುವವರು ಸದಾ ಎಚ್ಚರಿಕೆಯಿಂದಲೇ ಇರಬೇಕಾಗುತ್ತದೆ.ಆದರೆ ಇಲ್ಲೊಂದು ದುರಂತ ನಡೆದಿದ್ದು,ಈ ವಿಡಿಯೋ ನೋಡಿದ್ರೆ ಎದೆ ನಡುಕವೇ ಶುರುವಾಗುತ್ತದೆ.ವೇಗವಾಗಿ ಬರುತ್ತಿದ್ದ ಟ್ರಕ್ಗೆ (Truck) ಆಟೋರಿಕ್ಷಾ (Auto rickshaw) ಡಿಕ್ಕಿ ಹೊಡೆದ ಪರಿಣಾಮ, ಅದರಲ್ಲಿದ್ದ ಶಾಲಾ ಮಕ್ಕಳು ಗಾಳಿಯಲ್ಲಿ ಹಾರಿ ಬಿದ್ದ (School Children flung into air) ಹೃದಯವಿದ್ರಾವಕ ಘಟನೆಯೊಂದು ವರದಿಯಾಗಿದೆ.ಈ ಘಟನೆಯ ದೃಶ್ಯಾವಳಿ ಸೋಷಿಯಲ್ ಮೀಡಿಯಾದಲ್ಲಿ ವೈರಲ್ (Video Viral) ಆಗಿದ್ದು, ಆಟೋದಲ್ಲಿದ್ದ ಎಂಟೂ ಮಕ್ಕಳು ಗಾಯಗೊಂಡಿದ್ದಾರೆ.
ಆಂಧ್ರ ಪ್ರದೇಶದ (Andhra Pradesh) ವಿಶಾಖಪಟ್ಟಣಂ ನಗರದಲ್ಲಿ (Vishakhapatnam City)ಈ ಘಟನೆ ನಡೆದಿದ್ದು,ಮಕ್ಕಳು ಬೆಳಗ್ಗೆ 7 ಗಂಟೆಗೆ ಸ್ಕೂಲ್ಗೆ ಆಟೋದಲ್ಲಿ ಹೊರಟಿದ್ದರು.ವಿಶಾಖಪಟ್ಟಣದ ಸಂಗಂ ಶರತ್ ಥಿಯೇಟರ್ ಜಂಕ್ಷನ್ನಲ್ಲಿ ಈ ಅಪಘಾತ ಸಂಭವಿಸಿದೆ.35 ಸೆಕೆಂಡ್ಗಳ ವಿಡಿಯೋದಲ್ಲಿ ಮಕ್ಕಳು ಗಾಳಿಯಲ್ಲಿ ಹಾರಿ ಬೀಳುವುದನ್ನು ಕಾಣಬಹುದಾಗಿದೆ. ಬೆಳಗ್ಗೆ ಸರಿಸುಮಾರು 7.35ಕ್ಕೆ ಫ್ಲೈಓವರ್ನ ಕೆಳಗೆ ಕ್ರಾಸಿಂಗ್ನಲ್ಲಿ ಟ್ರಕ್ ಸಮೀಪಿಸಿದಾಗ ಎಡಭಾಗದಿಂದ ವೇಗವಾಗಿ ಬರುತ್ತಿದ್ದ ಆಟೋ ಅದರೊಳಗೆ ನುಗ್ಗಿತು. ಲಾರಿ ನಿಲ್ಲಿಸಲು ವಿಫಲವಾದ ಕಾರಣ ಶಾಲಾ ಮಕ್ಕಳು ಆಟೋದಿಂದ ಗಾಳಿಯಲ್ಲಿ ಹಾರಿ ಬಿದ್ದರು.ಅಪಘಾತ ಸಂಭವಿಸಿದ ಕೆಲವೇ ಸೆಕೆಂಡುಗಳಲ್ಲಿ ಬೈಕರ್ಸ್, ಅಲ್ಲಿದ್ದ ಸ್ಥಳೀಯರು ಗಾಯಾಳುಗಳ ಸಹಾಯಕ್ಕೆ ಮುಂದಾದರು. ಮುಗಿಚಿಬಿದ್ದಿದ್ದ ಆಟೋವನ್ನು ಮೇಲಕ್ಕೆ ಎತ್ತಿ, ಕೆಳಗಿದ್ದ ಮಕ್ಕಳನ್ನು ರಕ್ಷಿಸಲಾಯಿತು. ಗಾಯಗೊಂಡಿದ್ದ 8 ಮಕ್ಕಳ ಪೈಕಿ ನಾಲ್ಕು ಮಕ್ಕಗಳನ್ನು ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ. ಒಬ್ಬ ಮಗುವಿನ ಸ್ಥಿತಿ ಚಿಂತಾಜನಕವಾಗಿದ್ದು, ಮೂವರು ಮಕ್ಕಳಿಗೆ ಚಿಕಿತ್ಸೆ ನೀಡಲಾಗುತ್ತಿದೆ ಎಂದು ತಿಳಿದು ಬಂದಿದೆ.