ಕರಾವಳಿ

ಸುಳ್ಯ ಬಂಟರ ಸಂಘದಿಂದ ಪ್ರತಿಭಾ ಪುರಸ್ಕಾರ ಹಾಗೂ ವಿದ್ಯಾರ್ಥಿ ವೇತನಕ್ಕಾಗಿ ಅರ್ಜಿ ಆಹ್ವಾನ, ಅರ್ಜಿ ಸಲ್ಲಿಸೋದು ಹೇಗೆ..? ಇಲ್ಲಿದೆ ಡಿಟೇಲ್ಸ್

ನ್ಯೂಸ್ ನಾಟೌಟ್: ಸುಳ್ಯ ಬಂಟರ ಸಂಘದಿಂದ ಪ್ರತಿಭಾ ಪುರಸ್ಕಾರ ಹಾಗೂ ವಿದ್ಯಾರ್ಥಿ ವೇತನಕ್ಕಾಗಿ ಅರ್ಜಿ ಸಲ್ಲಿಸಲು ಆಹ್ವಾನಿಸಲಾಗಿದೆ. ಸುಳ್ಯ ತಾಲೂಕಿನ 2021-22 ಹಾಗೂ 2022-23ನೇ ಸಾಲಿನ ವಿದ್ಯಾರ್ಥಿಗಳು  ಅರ್ಜಿ ಸಲ್ಲಿಸಬಹುದಾಗಿದೆ.

ಈ ಬಗ್ಗೆ ಪತ್ರಿಕಾ ಪ್ರಕಟಣೆ ಹೊರಡಿಸಿರುವ ಬಂಟರ ಸಂಘ ( ರಿ), ಸುಳ್ಯ ಪ್ರಧಾನ ಕಾರ್ಯದರ್ಶಿ ಸುಭಾಶ್ಚಂದ್ರ ರೈ “ಡಿಸೆಂಬರ್  ಕೊನೆಯ ವಾರದಲ್ಲಿ ನಡೆಯಲಿರುವ ಬಂಟರ ಸಮಾವೇಶದಲ್ಲಿ ವಿದ್ಯಾರ್ಥಿ ವೇತನ ನೀಡಲಾಗುತ್ತದೆ.  2022-23ರ SSLC , PUC ಮತ್ತು ಅಂತಿಮ ಪದವಿಯಲ್ಲಿ ಪಾಸಾದ (ಅಂಕಗಳ ಪರಿಗಣನೆ ಇಲ್ಲ) ಬಿಪಿಎಲ್ ಪಡಿತರ ಚೀಟಿ ಹೊಂದಿರುವ ವಿದ್ಯಾರ್ಥಿಗಳು ತಮ್ಮ ಬಿಪಿಎಲ್ ಪಡಿತರ ಚೀಟಿಯ ಮತ್ತು ಮಾರ್ಕ್ ಕಾರ್ಡಿನ ಪ್ರತಿಯನ್ನು ಒಂದು ಪಾಸ್ ಪೋರ್ಟ್ ಸೈಜ್ ಫೋಟೋದೊಂದಿಗೆ ತಮ್ಮ ಮಾಹಿತಿಯನ್ನುಕಳುಹಿಸಿಕೊಡಿ. ಹಾಗೂ  ಪ್ರತಿಭಾ ಪುರಸ್ಕಾರಕ್ಕಾಗಿ 2021_22  ಮತ್ತು 2022_23ನೇ  ಸಾಲಿನಲ್ಲಿ  ಶೇ.80 ಕ್ಕಿಂತ ಹೆಚ್ಚು ಅಂಕ ಗಳಿಸಿದ ಎಪಿಎಲ್   ಪಡಿತರ ಚೀಟಿ ಹೊಂದಿರುವ ವಿದ್ಯಾರ್ಥಿಗಳ   ಮತ್ತು ಜಿಲ್ಲಾ ಮಟ್ಟದಲ್ಲಿ ವಿಜೇತರಾಗಿ ರಾಜ್ಯಮಟ್ಟವನ್ನು ಪ್ರತಿನಿಧಿಸುತ್ತಿರುವ ವಿದ್ಯಾರ್ಥಿಗಳ ಮತ್ತು ವಿಶೇಷ ಸಾಧನೆ ಮಾಡಿರುವ ವಿದ್ಯಾರ್ಥಿಗಳ ಮಾಹಿತಿ ಯನ್ನು ನವಂಬರ್ 30 ರ ಒಳಗೆ ಆಯಾ ವಲಯದ ಅಧ್ಯಕ್ಷರು ಅಥವಾ ಕಾರ್ಯದರ್ಶಿ ಗಳಲ್ಲಿ ಅಥವಾ ಸಂಘದ ಕಛೇರಿ ಕಾರ್ಯದರ್ಶಿ  ಕುಸುಮಾಧರ ರೈ ಬೂಡು ಇವರಲ್ಲಿ ನೀಡಬೇಕಾಗಿ ಮನವಿ ಮಾಡಿಕೊಂಡಿದ್ದಾರೆ.

Related posts

ಸುಳ್ಯದಲ್ಲಿ ಸ್ವಾಮಿ ಕೊರಗಜ್ಜ ದೈವದ ಮತ್ತೊಂದು ಪವಾಡ

ಉಪ್ಪಿನಂಗಡಿಯ ಮೇಸ್ತ್ರಿಗೊಲಿದ ಅದೃಷ್ಟಲಕ್ಷ್ಮೀ,ಕೇರಳ ಲಾಟರಿಯಲ್ಲಿ ಬಂಪರ್ ಪ್ರೈಜ್ ,ಬಹುಮಾನದ ಮೊತ್ತ ಕೇಳಿದ್ರೆ ಹುಬ್ಬೇರಿಸುವಂತಿದೆ..!

ಪುತ್ತೂರು: ಬಿಜೆಪಿ ಅಭ್ಯರ್ಥಿ ಆಶಾ ತಿಮ್ಮಪ್ಪ ಗೌಡ ಧರ್ಮಸ್ಥಳ ಭೇಟಿ