ನ್ಯೂಸ್ ನಾಟೌಟ್: ಅಂದು ರಾಹುಲ್ ಗಾಂಧಿಗೆ ಸೌತೆಕಾಯಿ ನೀಡಿ ಸಂತೈಸಿದ್ದ ಅಜ್ಜಿ ನಿಧನರಾಗಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ. ಹೌದು, ಪಾದಯಾತ್ರೆ ಮಾಡಿ ರಾಹುಲ್ ಗಾಂಧಿಯವರು ದಣಿದು ಬಂದಿದ್ದರು. ಈ ವೇಳೆ ಚಿಕ್ಕನಾಯಕನಹಳ್ಳಿಯ ಶಾರದಮ್ಮ(78) ಅವರಿಗೆ ಸೌತೆ ಕಾಯಿ ನೀಡಿ ಅವರ ದಣಿವನ್ನು ನಿವಾರಿಸಿದ್ದರು. ಇಳಿವಯಸ್ಸಿನಲ್ಲಿ ಫುಟ್ಪಾತ್ನಲ್ಲಿ ತರಕಾರಿ ಮಾರಾಟ ಮಾಡುತ್ತಿದ್ದ ಶಾರದಮ್ಮ ಅವರು ಸ್ವಾವಲಂಬಿ ಜೀವನ ಸಾಗಿಸುತ್ತಿದ್ದರು.ಆದರೆ ವಯೋ ಸಹಜ ಅನಾರೋಗ್ಯದಿಂದ ನಿನ್ನೆ ಇನ್ನಿಲ್ಲವಾದರು.
ದೇಶಾದ್ಯಂತ ಹಲವು ರಾಜ್ಯಗಳಲ್ಲಿ ಬಿರುಬಿಸಿಲನ್ನೂ ಲೆಕ್ಕಿಸದೇ ಪಾದಯಾತ್ರೆ ನಡೆಸಿ ಕಳೆದ ವರ್ಷ 2022ರ ಅಕ್ಟೋಬರ್ ತಿಂಗಳಲ್ಲಿ ತುಮಕೂರು ತಲುಪಿ ಚಿಕ್ಕನಾಯಕನಹಳ್ಳಿ ಮಾರ್ಗವಾಗಿ ಭಾರತ್ ಜೋಡೋ ಯಾತ್ರೆಗೆ ಹೊರಟಿದ್ದ ರಾಹುಲ್ ಗಾಂಧಿಯವರಿಗೆ ಜನರಿಂದ ಸ್ಪಂದನೆ ಸಿಕ್ಕಿತ್ತು.ಇದೇ ಸಂದರ್ಭ ತುಮಕೂರಿನ ಚಿಕ್ಕನಾಯಕನಹಳ್ಳಿ ಮಾರ್ಗವಾಗಿ ಹೊರಟಿದ್ದ ವೇಳೆ ಶಾರದಮ್ಮ ಅವರು ರಾಹುಲ್ ಗಾಂಧಿಗೆ ಸೌತೆಕಾಯಿ ನೀಡಿ ಸಂತೈಸಿದ್ದರು.ಮಾತ್ರವಲ್ಲ ರಾಹುಲ್ ಗಾಂಧಿಯನ್ನು ತಬ್ಬಿ ಸಂತೈಸಿ ಆಶೀರ್ವಾದ ಮಾಡಿದ್ದರು. ಇದೇ ವೇಳೆ ಇಂದಿರಾಗಾಂಧಿಯನ್ನು ನೆನಪಿಸುತ್ತಾ ವೃದ್ಧೆ ಶಾರದಮ್ಮ ಗುಣಗಾನ ಮಾಡಿದ್ದರು.ಈ ಸಂದರ್ಭದಲ್ಲಿ ರಾಹುಲ್ ಗಾಂಧಿಯವರು ವೃದ್ಧೆ ಶಾರದಮ್ಮಳ ಮಮತೆಗೆ ಏನು ಮಾಡಬೇಕೆಂದೇ ತೋಚಲಿಲ್ಲ. ಅವರ ಪ್ರೀತಿಗೆ ಮನಸೋತಿದ್ದರು ರಾಹುಲ್ ಗಾಂಧಿ. ಅಜ್ಜಿ ಕೊಟ್ಟ ಸೌತೆಕಾಯಿಯನ್ನು ಪ್ರೀತಿಯಿಂದ ಸ್ವೀಕರಿಸಿ ಮತ್ತೆ ಪಾದಯಾತ್ರೆ ಮುಂದುವರಿಸಿದ್ದರು. ಆದರೆ ವೃದ್ಧೆ ಶಾರದಮ್ಮ ಇನ್ನಿಲ್ಲ ಅನ್ನುವ ಸುದ್ದಿ ಗಣ್ಯರು, ಊರಿನ ಹಿರಿಯರು ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದ್ದಾರೆ.