ವಾರಾಣಸಿ: ಪ್ರೇಮಿಗಳ ದಿನಾಚರಣೆಯ ಬಳಿಕ ಹೊಸ ವರ್ಷದ ವರ್ಷಾಚರಣೆಗೂ ಬಜರಂಗದಳ ತೀವ್ರ ವಿರೋಧ ವ್ಯಕ್ತಪಡಿಸಿದೆ.
ಈ ಕುರಿತು ಕಾಶಿಯಲ್ಲಿ ಹೋಟೆಲ್, ಮಾಲ್ ಗಳಲ್ಲಿ ಪೋಸ್ಟರ್ ಅಂಟಿಸಿರುವ ಬಜರಂಗದಳದ ಕಾರ್ಯಕರ್ತರು, ಪಾಶ್ಚಿಮಾತ್ಯ ಸಂಸ್ಕೃತಿಯನ್ನು ಪ್ರೋತ್ಸಾಹಿಸುವುದರ ವಿರುದ್ಧ ಜನರನ್ನು ಎಚ್ಚರಿಸಿದೆ. ಪಾಶ್ಚಿಮಾತ್ಯ ಸಂಸ್ಕೃತಿಯ ಪ್ರಚಾರವನ್ನು ಅನೈತಿಕ ಮತ್ತು ಅಧರ್ಮ ಎಂದು ಬಣ್ಣಿಸಿರುವ ಬಜರಂಗದಳವು ಹೊಸ ವರ್ಷಾಚರಣೆಯನ್ನು ಬಲವಾಗಿ ವಿರೋಧಿಸಿದೆ. ಬಜರಂಗದಳದ ಸಂಚಾಲಕ ನಿಖಿಲ್ ತ್ರಿಪಾಠಿ ರುದ್ರ ಪ್ರತಿಕ್ರಿಯಿಸಿದ್ದು, ‘ಹೊಸ ವರ್ಷಾಚರಣೆ ಅರ್ಥಹೀನ ಕಾರ್ಯಕ್ರಮವಾಗಿದೆ. ಇದರಲ್ಲಿ ಯಾವುದೇ ನೈತಿಕತೆ ಇಲ್ಲ ಮತ್ತು ಆಧ್ಮಾತ್ಮಿಕತೆಗೆ ಯಾವುದೇ ಸಂಬಂಧವಿಲ್ಲ. ಇಂತಹ ಆಚರಣೆಗಳು ದೇಶದ ಯುವ ಜನಾಂಗವನ್ನು ತಪ್ಪು ದಾರಿಗೆ ಎಳೆಯುತ್ತವೆ’ ಎಂದು ಹೇಳಿದ್ದಾರೆ.