ನ್ಯೂಸ್ ನಾಟೌಟ್ : ಕೈಯಿಂದ ಆಶೀರ್ವಾದ ಪಡೆದುಕೊಳ್ಳುವವರನ್ನು ನೋಡಿದ್ದೇವೆ.ಕಾಲಿಗೆ ಅಡ್ಡ ಬಿದ್ದು ಪಾದ ಹಿಡಿಯೋರನ್ನೂ ನೋಡಿದ್ದೇನೆ.ಆದರೆ ಇಲ್ಲೊಂದೆಡೆ ಚಪ್ಪಲಿ ಮೂಲಕ ಆಶೀರ್ವಾದ ಪಡೆದುಕೊಂಡ ಘಟನೆ ವರದಿಯಾಗಿದೆ.
ಮಧ್ಯಪ್ರದೇಶದ (Madhya Pradesh) ರತ್ಲಂ ವಿಧಾನ ಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯೊಬ್ಬರು ಈ ಕೆಲಸ ಮಾಡಿದ ವ್ಯಕ್ತಿ. “ಅಬ್ಬಾ” ಎಂದು ಕರೆಯಲ್ಪಡುವ ಫಕೀರ್ ಬಾಬಾರಿಂದ ಚಪ್ಪಲಿ ಆಶೀರ್ವಾದ ಪಡೆದಿದ್ದಾರೆ. ಇದೀಗ ಈ ಬಗ್ಗೆ ಒಂದು ವಿಡಿಯೋ ಎಲ್ಲ ಕಡೆ ವೈರಲ್ ಆಗಿದೆ. ಇದೊಂದು ಸಾಂಕೇತಿಕ ಆಶೀರ್ವಾದ, ಇದನ್ನು “ಜೂಟೆ ಖಾನಾ” (ಚಪ್ಪಲಿಯಿಂದ ಹೊಡೆಯುವುದು) ಎಂದು ಕರೆಯುತ್ತಾರೆ ಎಂದು ಹೇಳಲಾಗಿದೆ. ಇಲ್ಲಿ ಪ್ರತಿಯೊಬ್ಬರು ಈ ಬಾಬಾಗೆ ಚಪ್ಪಲಿಯನ್ನು ನೀಡಿ ಆಶೀರ್ವಾದ ಪಡೆಯುತ್ತಾರೆ. ಇದು ಸಾಮಾನ್ಯ ಆಚರಣೆ ಎನ್ನಲಾಗಿದ್ದು, ಸಾಮಾಜಿಕ ಜಾಲತಾಣದಲ್ಲೂ ಈ ವಿಡಿಯೋ ವೈರಲ್ ಆಗಿದೆ. ಮಧ್ಯಪ್ರದೇಶದಲ್ಲಿ ಈಗಾಗಲೇ ಚುನಾವಣೆ ನಡೆದಿದ್ದು, ಚುನಾವಣೆಗೂ ಮುನ್ನ ಈ ಘಟನೆ ನಡೆದಿದೆ ಎಂದು ಹೇಳಲಾಗಿದೆ. ಚಪ್ಪಲಿಯಲ್ಲಿ ಆಶೀರ್ವಾದ ಪಡೆದ ಕಾಂಗ್ರೆಸ್ ಅಭ್ಯರ್ಥಿಯನ್ನು ಪರಸ್ ಸಕ್ಲೇಚಾ ಎಂದು ಹೇಳಲಾಗಿದೆ. ಇವರು ಚುನಾವಣೆಯಲ್ಲಿ ಗೆಲ್ಲಲು ಈ ಫಕೀರನಿಂದ ಚಪ್ಪಲಿ ಆಶೀರ್ವಾದ ಪಡೆದಿದ್ದಾರೆ ಎಂದು ಹೇಳಲಾಗಿದೆ.
ಈ ವಿಡಿಯೋ ವೈರಲ್ ಆಗುತ್ತಿದ್ದಂತೆ, ಇದಕ್ಕೆ ಪ್ರತಿಕ್ರಿಯಿಸಿದ ಪರಸ್ ಸಕ್ಲೇಚಾ, ಈ ಫಕೀರ ಅತ್ಯಂತ ಗೌರವಾನ್ವಿತ, ಅವರು ಮೋವ್ ರಸ್ತೆಯಲ್ಲಿರುವ ದರ್ಗಾದಲ್ಲಿ ವಾಸವಾಗಿರುತ್ತಾರೆ. ಯಾವುದೇ ಒಂದು ಕಾರ್ಯ ಯಶಸ್ವಿಯಾಗಬೇಕಾದರೆ, ಈ ಫಕೀರನಿಗೆ ಲುಂಗಿ ಮತ್ತು ಚಪ್ಪಲಿಗಳಂತಹ ಕಾಣಿಕೆಗಳನ್ನು ನೀಡುತ್ತಾರೆ. ಈ ಕಾಣಿಕೆಯಲ್ಲಿ ಅವರಿಗಿಷ್ಟವಾದುದನ್ನು ಸ್ವೀಕರಿಸಿ, ಉಳಿದದ್ದನ್ನು ಹಿಂದಕ್ಕೆ ನೀಡುತ್ತಾರೆ ಎಂದು ಅಭಿಪ್ರಾಯ ಪಟ್ಟರು.ಪರಸ್ ಸಕ್ಲೇಚಾ ಅವರು ಈ ಫಕೀರನ ಬಳಿಗೆ ಒಂದು ಜತೆ ಚಪ್ಪಲಿಯನ್ನು ತೆಗೆದುಕೊಂಡು ಹೋಗಿ ಆಶೀರ್ವಾದ ಪಡೆದಿದ್ದಾರೆ. ಈ ವಿಚಾರದ ಬಗ್ಗೆ ಸಕ್ಲೇಚಾ ಅವರನ್ನು ಮಾತನಾಡಿಸಿದಾಗ, ಬಾಬಾ ನಾನು ತೆಗೆದುಕೊಂಡ ಹೋಗಿದ್ದ ಚಪ್ಪಲಿಯನ್ನು ಸ್ವೀಕರಿಸಿ, ಅದರಲ್ಲಿ ಹೊಡೆದು ನನ್ನ ಮೇಲಿದ್ದ ದುಷ್ಟ ನೆರಳುಗಳನ್ನು ದೂರ ಮಾಡಿದ್ದಾರೆ ಎಂದು ಹೇಳಿದ್ದಾರೆ.