ನ್ಯೂಸ್ ನಾಟೌಟ್ : ಕೊಡಗು ಜಿಲ್ಲೆಯ ಮಡಿಕೇರಿ ತಾಲೂಕಿನ ಚೆಂಬು ಗ್ರಾಮದ ವ್ಯಕ್ತಿಯೊಬ್ಬರು ಆ್ಯಸಿಡ್ ಸೇವಿಸಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ನಡೆದಿದೆ. ಉದಯ ದೊಡ್ಕಜೆ (38 ವರ್ಷ) ಮೃತ ದುರ್ದೈವಿ ಎಂದು ತಿಳಿದು ಬಂದಿದೆ.
ನವೆಂಬರ್ 16 ರಂದು ರಾತ್ರಿ ರಬ್ಬರ್ ಕೃಷಿಗೆಂದು ತಂದಿದ್ದ ಆ್ಯಸಿಡ್ ಅನ್ನು ಸೇವಿಸಿ ಅಸ್ವಸ್ಥಗೊಂಡಿದ್ದ ಅವರನ್ನು ತಕ್ಷಣ ಸುಳ್ಯದ ಆಸ್ಪತ್ರೆಗೆ ಕರೆದುಕೊಂಡು ಬರಲಾಯಿತು. ಈ ವೇಳೆ ಅವರ ಆರೋಗ್ಯದಲ್ಲಿ ಭಾರಿ ವ್ಯತ್ಯಾಸ ಕಂಡು ಬಂದಿದ್ದನ್ನು ಗಮನಿಸಿದ ವೈದ್ಯರು ಮಂಗಳೂರಿನ ಆಸ್ಪತ್ರೆಗೆ ಕರೆದುಕೊಂಡು ಹೋಗುವಂತೆ ಸೂಚಿಸಿದ್ದಾರೆ. ತಕ್ಷಣ ಅವರನ್ನು ಅಲ್ಲಿಂದ ಮಂಗಳೂರಿನತ್ತ ಕರೆದೊಯ್ದರು.ಆ್ಯಂಬುಲೆನ್ಸ್ನಲ್ಲಿ ಚೆನ್ನಾಗಿ ಮಾತಾಡಿಕೊಂಡೇ ಹೋಗಿದ್ದರು. ಹಾಗೂ ಅಲ್ಲಿಯವರೆಗೆ ಯಾವುದೇ ಜೀವ ಹಾನಿಯಾಗಿರಲಿಲ್ಲ.ಆಸ್ಪತ್ರೆಗೆ ತಲುಪುವ ವೇಳೆ ಜೀವಂತವಾಗಿದ್ದ ವ್ಯಕ್ತಿ ಆಸ್ಪತ್ರೆಯಲ್ಲಿ ಚಿಕಿತ್ಸೆಯನ್ನೂ ನೀಡಲಾಗಿತ್ತು.ಇಂದು ಬೆಳಗ್ಗಿನ ವೇಳೆ ಚಿಕಿತ್ಸೆಗೆ ಸ್ಪಂದಿಸದೇ ಅವರು ಕೊನೆಯುಸಿರೆಳೆದರೆಂದು ತಿಳಿದು ಬಂದಿದೆ. ವಿವಾಹಿತರಾಗಿದ್ದ ಉದಯ್ ಅವರು ಪತ್ನಿ ರುದ್ರಾಕ್ಷಿ ಹಾಗೂ ಪುತ್ರ ಜಿತೇಶ್, ಪುತ್ರಿ ಪೂರ್ವಿ ಸೇರಿದಂತೆ ಕುಟುಂಬದವರನ್ನು ಅಗಲಿದ್ದಾರೆ.