ನ್ಯೂಸ್ ನಾಟೌಟ್ : ಪ್ರಮುಖ ದೇವಸ್ಥಾನಗಳಲ್ಲಿ ಒಂದಾಗಿರುವ ಹಾಸನದ ಹಾಸನಾಂಬ ದೇವಿಯ ಜಾತ್ರೆಯ ಅಂಗವಾಗಿ ಕೇವಲ 12 ದಿನಗಳಿಗೆ ಭಕ್ತರ ದರ್ಶನಕ್ಕೆ ಅವಕಾಶ ನೀಡಲಾಗಿತ್ತು. ಈ ವೇಳೆ ಭಕ್ತಾದಿಗಳಿಂದ ಭಾರಿ ಪ್ರಮಾಣದ ಹಣ ಹರಿದು ಬಂದಿದ್ದು, ದೇವಾಲಯದ ಹುಂಡಿಯಲ್ಲಿ ಬರೋಬ್ಬರಿ 8.72 ಕೋಟಿ ರೂ. ಹಣ ಸಂಗ್ರಹವಾಗಿದೆ.
ದೇವಾಲಯದ ಟಿಕೆಟ್ ಹಾಗೂ ಲಾಡು ಪ್ರಸಾದ ಮಾರಾಟದಿಂದ 6.15 ಕೋಟಿ ರೂ. ಆದಾಯ ಗಳಿಸಿತ್ತು. ಹಾಸನಾಂಬ ದೇವಿಯ 2023ರ ಜಾತ್ರಾ ಮಹೋತ್ಸವದಿಂದ ಸುಮಾರು 15 ಕೋಟಿ ರೂ. ಆದಾಯ ಬಂದಿದೆ ಎಂದು ಅಂದಾಜಿಸಲಾಗಿದೆ.
ಇನ್ನು ಹಾಸನಾಂಬ ದೇವಾಲಯದಲ್ಲಿ ತಾಳಿಗಳು, ಚೈನು ಸರ, ಬಂಗಾರದ ಪದಕಗಳು, ಬಂಗಾರದ ಕಣ್ಣು, ಬೆಳ್ಳಿಯ ಚೈನುಗಳು ಸೇರಿದಂತೆ ವಿವಿಧ ಬಂಗಾರದ ಆಭರಣಗಳನ್ನು ಹುಂಡಿಗೆ ಹಾಕಲಾಗಿದೆ.
ಹಾಸನಾಂಬೆ ದೇವರ ಹುಂಡಿಯಲ್ಲಿ ಬರೋಬ್ಬರಿ 2 ಕೋಟಿ 55ಲಕ್ಷ 41ಸಾವಿರದ 497 ರೂಪಾಯಿ ಸಂಗ್ರಹವಾಗಿದೆ ಇದನ್ನು 150ಕ್ಕೂ ಹೆಚ್ಚು ಸಿಬ್ಬಂದಿ ಎಣಿಕೆ ಮಾಡಿದ್ದಾರೆ.
ದೇವಾಲಯದ ಟಿಕೆಟ್ ಹಾಗೂ ಲಾಡು ಪ್ರಸಾದ ಮಾರಾಟದಿಂದ 6.15 ಕೋಟಿ ರೂ. ಆದಾಯ ಗಳಿಸಿತ್ತು. ಈಗ ಚಿನ್ನ, ಅಮೇರಿಕಾದ ಡಾಲರ್ ಸೇರಿದಂತೆ ವಿವಿಧ ವಸ್ತುಗಳು ಪತ್ತೆಯಾಗಿವೆ.
ಈ ಬಾರಿ 8 ಕೋಟಿ 72 ಲಕ್ಷದ 41ಸಾವಿರ 531ರೂ ಆದಾಯ ಬಂದಿದ್ದರೆ, ಈ ಹಿಂದೆ ಅತಿಹೆಚ್ಚು ಅಂದರೆ 5.20 ಕೋಟಿ ರೂ. ದಾಖಲೆಯ ಸಂಗ್ರಹವಾಗಿತ್ತು.
ಹಾಸನಾಂಬೆ ಜಾತ್ರಾ ಮಹೋತ್ಸವಕ್ಕೆ ನಿನ್ನೆಯಷ್ಟೇ ವಿದ್ಯುಕ್ತ ತೆರೆ ಬಿದ್ದಿದೆ. ಇದರ ಬೆನ್ನಲ್ಲಿಯೇ ಹಾಸನಾಂಬೆ ದೇವಾಲಯ ಆವರಣದಲ್ಲಿ ಗುರುವಾರ ಬೆಳಗ್ಗೆ ಹುಂಡಿ ಎಣಿಕೆ ಕಾರ್ಯದಿಂದಲೂ ಹಾಸನಾಂಬೆ ಶ್ರೀಮಂತೆ ಎಂದು ತೋರಿಸಿಕೊಟ್ಟಿದ್ದಾಳೆ.
ಹುಂಡಿ ಎಣಿಕೆ ಕಾರ್ಯದಲ್ಲಿ ಕಂದಾಯ ಇಲಾಖೆ ಸಿಬ್ಬಂದಿ, ಬ್ಯಾಂಕ್ ಅಧಿಕಾರಿಗಳು, ಸ್ಕೌಟ್ ಅಂಡ್ ಗೈಡ್ ವಿದ್ಯಾರ್ಥಿಗಳು ಭಾಗಿಯಾಗಿದ್ದರು.