ನ್ಯೂಸ್ ನಾಟೌಟ್: ರಾಜ್ಯ ಸರ್ಕಾರದ ಈ ಒಂದು ನಿರ್ಧಾರ ಈಗ ವಿವಾದಕ್ಕೆ ಕಾರಣವಾಗಿದೆ. ಕೆಇಎ (KEA) ಪರೀಕ್ಷೆಯಲ್ಲಿ ಹಿಜಬ್ (Hijab) ಧರಿಸಿ ಪರೀಕ್ಷೆ ಬರೆಯಲು ಅವಕಾಶ ಕೊಟ್ಟ ಸರ್ಕಾರದ ನಡೆಯ ಬಗ್ಗೆ ಪರ ವಿರೋಧ ಚರ್ಚೆಗಳು ಜೋರಾಗಿವೆ.
ನವೆಂಬರ್ 18 ಮತ್ತು 19ರಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ನಡೆಸುವ ವಿವಿಧ ನಿಗಮ-ಮಂಡಳಿಗಳ ಪರೀಕ್ಷೆಗೆ ಅಭ್ಯರ್ಥಿಗಳು ಹಿಜಬ್ ಧರಿಸಿ ಪರೀಕ್ಷೆ ಬರೆಯಲು ಅನುಮತಿ ನೀಡಿದೆ. ಮೊದಲ ಹಂತದ ಪರೀಕ್ಷೆ ವೇಳೆಯೂ ಹಿಜಬ್ ಅವಕಾಶ ಕೊಟ್ಟಿದ್ದ ಕೆಇಎ ನಿರ್ಧಾರಕ್ಕೆ ಹಿಂದೂಪರ ಸಂಘಟನೆಗಳು ವಿರೋಧ ವ್ಯಕ್ತಪಡಿಸಿದ್ದವು. ಪ್ರತಿಭಟನೆ ಕೂಡ ನಡೆಸಿದ್ದವು.
ಈ ಎಲ್ಲಾ ವಿರೋಧದ ಬಳಿಕವೂ ಎರಡನೇ ಹಂತದ ನಿಗಮ-ಮಂಡಳಿ ಪರೀಕ್ಷೆಗೆ ಕೆಇಎ ಹಿಜಬ್ ಧರಿಸಿ ಪರೀಕ್ಷೆ ಬರೆಯಲು ಅವಕಾಶ ನೀಡಿದೆ ಎಂದು ವರದಿ ತಿಳಿಸಿದೆ.
ಈ ಸಂಬಂಧ ಕೆಇಎ ವೆಬ್ಸೈಟ್ನಲ್ಲಿ ಮಾಹಿತಿ ನೀಡಲಾಗಿದ್ದು, ಹಿಜಬ್ ಧರಿಸುವ ಅಭ್ಯರ್ಥಿಗಳು ಪರೀಕ್ಷೆ ಪ್ರಾರಂಭವಾಗುವ ಎರಡು ಗಂಟೆ ಮೊದಲು ಪರೀಕ್ಷಾ ಕೇಂದ್ರಕ್ಕೆ ಹಾಜರಾಗಿ ತಪಾಸಣೆ ಮಾಡಿಸಿಕೊಳ್ಳುವಂತೆ ಕೆಇಎ ಸೂಚನೆ ನೀಡಿದೆ. ಇನ್ನು ನಿಗಮ-ಮಂಡಳಿ ಪರೀಕ್ಷೆಗೆ ಟಫ್ ಡ್ರೆಸ್ ಕೋಡ್ (Dress Code) ಜಾರಿ ಮಾಡಿದ್ದರೂ ಹಿಜಬ್ ಗೆ ಅವಕಾಶ ಕೊಟ್ಟಿರುವುದು ಕೆಲವು ಹಿಂದೂ ಸಂಘಟನೆಗಳ ಆಕ್ರೋಶಕ್ಕೆ ಕಾರಣವಾಗಿದೆ ಎನ್ನಲಾಗಿದೆ. ಈ ಹಿಂದೆ ಕೋರ್ಟ್ ಶಿಕ್ಷಣ ಸಂಸ್ಥೆಗಳ ಒಳಗೆ ಕೇವಲ ಸಮವಸ್ತ್ರಕ್ಕೆ ಮಾತ್ರ ಅವಕಾಶ ನೀಡಬೇಕು ಎಂದಿದ್ದು ಎನ್ನಲಾಗಿದೆ.