ನ್ಯೂಸ್ ನಾಟೌಟ್ : ವಯಸ್ಸು 30 ಸಮೀಪಿಸಿದ್ರೆ ಸಾಕು.ಮದುವೆ ಇದೆಯಾ?ಇನ್ನೂ ಮದ್ವೆ ಆಗಿಲ್ವ?ಅಂತ ಕೇಳೋರ ಸಂಖ್ಯೆಯೇ ಅಧಿಕ.ಆದರೆ ಅದೆಷ್ಟೊ ಯುವಕರು ಹುಡುಗಿ ಸಿಗದೆ ಜಿಗುಪ್ಸೆಗೆ ಒಳಗಾಗುತ್ತಿದ್ದಾರೆ.ಅದರಲ್ಲಂತು ಯುವ ರೈತರಿಗೆ ಕನ್ಯೆ ಸಿಗೋದು ಇನ್ನೂ ಕಷ್ಟವಾಗ್ಬಿಟ್ಟಿದೆ. ಈ ಹಿನ್ನೆಲೆಯಲ್ಲಿ ಮಂಡ್ಯದ 30 ವರ್ಷ ಮೇಲ್ಪಟ್ಟ ಯುವಕರು ವಿಶಿಷ್ಟ ನಿರ್ಧಾರವನ್ನು ಕೈಗೆತ್ತಿಗೊಂಡಿದ್ದಾರೆ.ಹೌದು,ಜಿಲ್ಲೆಯ ಪ್ರಭಾವಿ ಮಠವಾದ ಶ್ರೀ ಆದಿಚುಂಚನಗಿರಿ ಮಠಕ್ಕೆ (Adichunchanagiri Mutt) ಪಾದಯಾತ್ರೆ ಕೈಗೊಳ್ಳಲು ನಿರ್ಧರಿಸಿದ್ದಾರೆ.
ಡಿಸೆಂಬರ್ನಲ್ಲಿ ನಡೆಯಲಿರುವ ಪಾದಯಾತ್ರೆಯನ್ನು ಎರಡು ಉದ್ದೇಶಗಳೊಂದಿಗೆ ಮಾಡಲಾಗುತ್ತಿದೆ.ಒಂದು ಅದೃಷ್ಟದ ಬದಲಾವಣೆಗೆ ಮತ್ತು ಅವರ ಸಂಕಟದ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ ಈ ವಿಶಿಷ್ಟ ರೀತಿಯ ಪಾದಯಾತ್ರೆಯನ್ನು ಹಮ್ಮಿಕೊಳ್ಳಲಾಗಿದೆ.ಅಂದ ಹಾಗೆ ಈ ವರ್ಷ ನಡೆಯುತ್ತಿರುವ ಎರಡನೇ ಪಾದಯಾತ್ರೆ ಇದಾಗಿದ್ದು, ಕೃಷಿಯಲ್ಲಿ ತೊಡಗಿರುವ ಯುವಕರಿಗೆ ‘ವಧು ಭಾಗ್ಯ’ ಕಲ್ಪಿಸಲು ರಾಜ್ಯ ಸರ್ಕಾರ ಕ್ರಿಯಾ ಯೋಜನೆ ಜಾರಿಗೆ ತರಬೇಕು ಎಂದು ಮಂಡ್ಯದ ಯುವಕ ಗಿರಿಮಲ್ಲು ಒತ್ತಾಯಿಸಿದ್ದಾರೆ.ನೂರಾರು ತೊಂದರೆಗಳಿಂದ ನಮ್ಮ ಹಳ್ಳಿ ಯುವಕರು ಮದುವೆಯ ಕನಸು ಕಾಣುವುದನ್ನು ನಿಲ್ಲಿಸಿದ್ದಾರೆ ಎಂದಿದ್ದಾರೆ.ಇದೇನು ಮೊದಲ ಪಾದಯಾತ್ರೆಯಲ್ಲ ಈ ಹಿಂದೆ ಫೆಬ್ರವರಿಯಲ್ಲಿ ಯುವ ಕೃಷಿಕರು ಕನ್ಯೆ ಸಿಗುತ್ತಿಲ್ಲವೆಂದು ಮಳವಳ್ಳಿ ತಾಲೂಕಿನಿಂದ ಚಾಮರಾಜನಗರ ಜಿಲ್ಲೆಯ ಎಂ.ಎಂ.ಹಿಲ್ಸ್ವರೆಗೆ ಪಾದಯಾತ್ರೆ ಕೈಗೊಂಡಿದ್ದರು. ನಾವು ವರದಕ್ಷಿಣೆ ಕೇಳುತ್ತಿಲ್ಲ,ಹುಡುಗಿ ಕೊಟ್ರೆ ಚೆನ್ನಾಗಿ ನೋಡಿಕೊಳ್ಳುತ್ತೇವೆ.ಅವರು ಸಂಸಾರವನ್ನು ನಿಭಾಯಿಸಿಕೊಂಡು ಹೋದರೆ ಸಾಕು.ಆದರೆ ಇಷ್ಟೆಲ್ಲಾ ಹೇಳಿಕೊಂಡರೂ ಕೂಡ ಯಾವ ಕುಟುಂಬವೂ ನಮಗೆ ಹೆಣ್ಣು ಕೊಡಲು ಸಿದ್ಧರಿಲ್ಲ ಎನ್ನುವುದು ವಿಪರ್ಯಾಸ ಎಂದು ಸಂತೋಷ್ ಹೇಳಿದ್ದಾರೆ.