ನ್ಯೂಸ್ ನಾಟೌಟ್ : ಮರಿ ಹಾಕಿ ಜನರ ಗದ್ದಲದಿಂದ ಕಾಡಿನೊಳಗೆ ಮರಿಯನ್ನು ಅಲ್ಲೇ ಬಿಟ್ಟು ಓಡಿ ಹೋಗಿದ್ದ ತಾಯಿ ಆನೆ ಜತೆ ಮರಿಯಾನೆಯನ್ನು ಸೇರಿಸುವಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ಯಶಸ್ವಿಯಾಗಿದ್ದಾರೆ.ಕಾಡಾನೆಯೊಂದು ಸೋಮವಾರ(ನ.13) ವಿರಾಜಪೇಟೆ ಸಮೀಪದ ನರಿಯಂದಡ ಗ್ರಾಮ ಪಂಚಾಯಿತಿಯ ಕರಡ ಗ್ರಾಮದ ಕೀಮಲೆ ಕಾಡುವಿನಲ್ಲಿ ಮನೆಯೊಂದರ ಆವರಣದಲ್ಲಿ ಮರಿ ಹಾಕಿ ಜನರ ಗದ್ದಲಕ್ಕೆ ಆನೆ ಮರಿಯನ್ನು ಬಿಟ್ಟು ಓಡಿದ ಘಟನೆ ನಡೆದಿತ್ತು.ಮಂಗಳವಾರ ಬೆಳಿಗ್ಗೆ ವಿಷಯ ತಿಳಿಯುತ್ತಿದ್ದಂತೆ ಅಕ್ಕಪಕ್ಕದ ಗ್ರಾಮಸ್ಥರು ತಂಡೋಪತಂಡವಾಗಿ ಬಂದು ವೀಕ್ಷಿಸಲಾರಂಭಿಸಿದರು.
ಇದರಿಂದ ವಿಚಲಿತವಾದ ಕಾಡಾನೆ ಮರಿಯಾನೆಯನ್ನು ಬಿಟ್ಟು ತೆರಳಿತ್ತು.ಸ್ಥಳಕ್ಕೆ ಬಂದ ಅರಣ್ಯ ಇಲಾಖೆ ಸಿಬ್ಬಂದಿಯು ಮರಿಯಾನೆಗೆ ಗುಕ್ಲೋಸ್ ನೀಡಿ ಸ್ವಲ್ಪದೂರ ಎತ್ತಿಕೊಂಡು, ಸ್ವಲ್ಪ ದೂರ ಜೀಪ್ ನಲ್ಲಿ ನಂತರ ಕಾಡಿನೊಳಗೆ ನಡೆಸಿಕೊಂಡು ಅಂತಿಮವಾಗಿ ತಾಯಿಯಾನೆಯೊಂದಿಗೆ ಸೇರಿಸಿದರು. ಈ ವೇಳೆ ಸ್ಥಳೀಯರು ಸಾಕಷ್ಟು ಸಹಕಾರ ನೀಡಿದರು ಎಂದು ವರದಿ ತಿಳಿಸಿದೆ.