ನ್ಯೂಸ್ ನಾಟೌಟ್ :ಸರ್ಕಾರಿ ಆಸ್ಪತ್ರೆಯ ಕ್ಯಾಂಟೀನ್ ಆಹಾರದಲ್ಲಿ ತಿನ್ನಲೆಂದು ಹೋದ ವ್ಯಕ್ತಿ ಬಿಗ್ ಶಾಕ್ ಆಗಿದೆ.ಹೌದು,ಆಹಾರದ ಮೇಲೆಯೇ ಇಲಿ ಓಡಾಡುತ್ತಿರುವ ದೃಶ್ಯವೊಂದು ಕಂಡುಬಂದಿದ್ದು,ಭಾರಿ ಆಕ್ರೋಶಕ್ಕೆ ಕಾರಣವಾಗಿದೆ. ಚೆನ್ನೈನ ಸ್ಟಾನ್ಲಿ ವೈದ್ಯಕೀಯ ಕಾಲೇಜಿನ ಕ್ಯಾಂಟೀನ್ನ ಆಹಾರದಲ್ಲಿ ಇಲಿ ಇರುವುದನ್ನು ರೋಗಿಯೊಬ್ಬರ ಸಂಬಂಧಿಕರು ವಿಡಿಯೋದ ಮೂಲಕ ಸೆರೆ ಹಿಡಿದಿದ್ದಾರೆ.ಈ ದೃಶ್ಯ ವೈರಲ್ ಆದ ಬೆನ್ನಲ್ಲೇ ಇದೀಗ ಕ್ಯಾಂಟೀನನ್ನ ಮುಚ್ಚಲಾಗಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.
ರೋಗಿಯೊಬ್ಬನ ಸಂಬಂಧಿಕರು ಹಸಿವಾಗುತ್ತಿದೆ ಎಂದು ಆಹಾರವನ್ನು ಸೇವಿಸಲು ಆಸ್ಪತ್ರೆಯ ಕ್ಯಾಂಟೀನ್ಗೆ ತೆರಳುತ್ತಾರೆ. ಈ ವೇಳೆ ಅವರಿಗೆ ಈ ಇಲಿಗಳ ಓಡಾಟ ಕಂಡು ಬಂದಿದೆ. ಗಾಜಿನ ಪೆಟ್ಟಿಯ ಒಳಗಿದ್ದ ಆಹಾರ ಮೇಲೆ ಇಲಿಯೊಂದು ಓಡಾಡುವುದನ್ನು ಕಂಡು ಬೆಚ್ಚಿಬಿದ್ದಿದ್ದಾರೆ.ಮಾತ್ರವಲ್ಲ ಕ್ಯಾಂಟಿನ್ ಸಿಬ್ಬಂದಿಗೆ ಕೂಡ ಇದು ಗಮನದಲ್ಲಿದ್ದು,ಇದನ್ನು ಓಡಿಸುವ ಪ್ರಯತ್ನವನ್ನು ಮಾಡುತ್ತಿರುವ ದೃಶ್ಯ ವಿಡಿಯೋದಲ್ಲಿದೆ. ಗ್ರಾಹಕರೊಬ್ಬರು ಈ ಬಗ್ಗೆ ಕ್ಯಾಂಟೀನ್ ಸಿಬ್ಬಂದಿ ಬಳಿ ಪ್ರಶ್ನಿಸಿದಾಗ, ಆಹಾರ ಹಳಸಿದೆ ಇದನ್ನು ಜನರಿಗೆ ನೀಡುತ್ತಿಲ್ಲ ಎಂದು ಹೇಳಿದ್ದಾರೆ.ಘಟನೆ ವೈರಲ್ ಆಗುತ್ತಿದ್ದಂತೆ ಆಸ್ಪತ್ರೆಯ ಡೀನ್ ಡಾ.ಪಿ.ಬಾಲಾಜಿ ಕ್ಯಾಂಟೀನ್ ಮುಚ್ಚುವಂತೆ ಹೇಳಿದ್ದಾರೆ. ಸದ್ಯ ಕ್ಯಾಂಟಿನ್ನನ್ನು ಮುಚ್ಚಲಾಗಿದೆ.