ನ್ಯೂಸ್ ನಾಟೌಟ್ : ಪ್ರಧಾನಿ ಮೋದಿ ಮಾದಿಗ ಮೀಸಲಾತಿ ಹೋರಾಟ ಸಮಿತಿ ರ್ಯಾಲಿಯಲ್ಲಿ ಭಾಗಿಯಾಗಿದ್ದರು. ಹೈದರಾಬಾದ್ನಲ್ಲಿ ಮೋದಿ ಭಾಷಣ ಮಾಡುತ್ತಿದ್ದ ವೇಳೆ ಬಾಲಕಿಯೊಬ್ಬಳ ವರ್ತನೆಯಿಂದ ಮೋದಿ ಭಾಷಣಕ್ಕೆ ಅಡ್ಡಿಯಾಗಿದ್ದು, ಮೋದಿ ಆಕೆಯ ಮುಂದೆ ಬೇಡಿಕೊಳ್ಳುವಂತೆ ಆಗಿತ್ತು.
ಶನಿವಾರ ಹೈದರಾಬಾದ್ನಲ್ಲಿ ರ್ಯಾಲಿಯನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ ಪರೇಡ್ ಮೈದಾನದಲ್ಲಿ ಲೈಟ್ಗಳನ್ನು ಅಳವಡಿಸಿದ್ದ ಕಂಬದ ಮೇಲೆ ಯುವತಿ ಏರುತ್ತಿರುವುದನ್ನು ಗಮನಿಸಿದರು. ಮಾದಿಗ ಮೀಸಲಾತಿ ಹೋರಾಟ ಸಮಿತಿ (ಎಂಆರ್ಪಿಎಸ್) ತೆಲುಗು ರಾಜ್ಯಗಳಲ್ಲಿ ಪರಿಶಿಷ್ಟ ಜಾತಿಗಳ ದೊಡ್ಡ ಘಟಕಗಳಲ್ಲಿ ಒಂದಾದ ಮಾದಿಗರ ಸಮುದಾಯ ಸಂಘಟನೆ ಆಯೋಜಿಸಿದ್ದ ಸಭೆಯನ್ನು ಉದ್ದೇಶಿಸಿ ಪ್ರಧಾನಿ ಮೋದಿ ಮಾತನಾಡುತ್ತಿದ್ದರು.
ಈ ವೇಳೆ ತಮ್ಮ ಭಾಷಣದಲ್ಲಿ ಯುವತಿಯನ್ನು ಕೆಳಗೆ ಬರುವಂತೆ ಪ್ರಧಾನಿ ಪದೇ ಪದೇ ವಿನಂತಿಸಿದರು ಮತ್ತು ವಿದ್ಯುತ್ ತಂತಿಗಳ ಸ್ಥಿತಿ ಚೆನ್ನಾಗಿಲ್ಲ ಎಂದೂ ಹೇಳಿದರು.
ಬಾಲಕಿ ಪ್ರಧಾನಿ ಮೋದಿಯವರಿಗೆ ಏನನ್ನೋ ತಿಳಿಸಲು ಪ್ರಯತ್ನಿಸುತ್ತಿದ್ದಾಗ ಹಿಂದಿಯಲ್ಲಿ “ಬೇಟಾ, ನಾನು ನಿಮ್ಮ ಮಾತು ಕೇಳುತ್ತೇನೆ. ದಯವಿಟ್ಟು ಕೆಳಗೆ ಬಂದು ಕುಳಿತುಕೊಳ್ಳಿ. ಶಾರ್ಟ್ ಸರ್ಕ್ಯೂಟ್ ಆಗಬಹುದು. ಇದು ಸರಿಯಲ್ಲ. ನಾನು ಜನರಿಗಾಗಿಯೇ ಬಂದಿದ್ದೇನೆ. ಅಂತಹ ಕೆಲಸಗಳಿಂದ ಪ್ರಯೋಜನವಿಲ್ಲ ಎಂದು ಪ್ರಧಾನಿ ಭಾಷಣವನ್ನು ಅನುವಾದಿಸುತ್ತಿದ್ದ ರಾಜ್ಯಸಭಾ ಸದಸ್ಯ ಕೆ. ಲಕ್ಷ್ಮಣ್ ತೆಲುಗಿನಲ್ಲಿ ಮನವಿ ಮಾಡಿದರು.
ಈ ಘಟನೆಗೂ ಮುನ್ನ, ತಮ್ಮ ಭಾಷಣದ ಆರಂಭದಲ್ಲಿ, ಎಂಆರ್ಪಿಎಸ್ ಸಂಸ್ಥಾಪಕ ಕೃಷ್ಣ ಮಾದಿಗ ಪ್ರಧಾನಿ ಮೋದಿ ಸಾಂತ್ವನ ಹೇಳಿದ್ದು, ಕಣ್ಣೀರು ಸುರಿಸಿ ಅವರನ್ನು ಅಪ್ಪಿಕೊಂಡರು. ಈ ಘಟನೆಯ ವಿಡಿಯೋ ವೈರಲ್ ಆಗಿದೆ. ಮೋದಿಯನ್ನು ನೋಡಲು ಆಕೆ ಹಾಗೆ ವರ್ತಿಸಿದಳು ಎನ್ನಲಾಗಿದೆ.