ನ್ಯೂಸ್ ನಾಟೌಟ್: ಕೆ. ವಿ. ಜಿ ಆಯುರ್ವೇದ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಸ್ಟೂಡೆಂಟ್ ಕೌನ್ಸಿಲ್ ಇನಾಗರೇಶನ್ ಕಾರ್ಯಕ್ರಮ ಇಂದು ಕೆ.ವಿ.ಜಿ. ಧನ್ವಂತರಿ ಹಾಲ್ ನಲ್ಲಿ ನಡೆಯಿತು.
ಆಕಾಡೆಮಿ ಆಫ್ ಲಿಬರಲ್ ಎಜುಕೇಶನ್ ಅಧ್ಯಕ್ಷ ಡಾ|ಕೆ.ವಿ ಚಿದಾನಂದ ದೀಪ ಬೆಳಗಿಸಿ ಕಾರ್ಯಕ್ರಮದ ಉದ್ಘಾಟನೆಯನ್ನು ನೆರವೇರಿಸಿದರು.ಬಳಿಕ ಮಾತನಾಡಿದ ಅವರು “ವಿದ್ಯಾರ್ಥಿಗಳು ಜವಾಬ್ದಾರಿ ಹಾಗೂ ಶಿಸ್ತು, ಉತ್ಸಾಹಗಳಿಂದ ಕೆಲಸ ನಿರ್ವಹಿಸಿ ದೇಶಕ್ಕೆ ಗೌರವ ತರುವ ಸಾಧನೆಗಳನ್ನು ಮಾಡಿ ” ಎಂದು ಶುಭನುಡಿಗಳನ್ನಾಡಿದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಸುಳ್ಯ ವಲಯ ಅರಣ್ಯಾಧಿಕಾರಿ ಮಂಜುನಾಥ್ “ವಿದ್ಯಾರ್ಥಿ ಸಂಘ ಕಾರ್ಯಕ್ರಮ ಪ್ರತೀ ವರ್ಷವೂ ನಡೆಯುತ್ತದೆ. ಆದರೆ ವಿದ್ಯಾರ್ಥಿ ಸಂಘ ಮತ್ತು ಅದರ ಪೂರ್ಣ ಮಹತ್ವವನ್ನು ಮೊದಲು ವಿದ್ಯಾರ್ಥಿಗಳು ತಿಳಿದಿರಬೇಕು.ನಾಯಕ ಎಂದೆನಿಸಿಕೊಂಡವನು ಧೈರ್ಯ ,ತಾಳ್ಮೆ,ಆತ್ಮವಿಶ್ವಾಸವನ್ನು ಮೈಗೂಡಿಸಿಕೊಂಡಿರೆ ಸಂಘದ ಬೆಳವಣಿಗೆಯಾಗಲು ಸಹಕಾರಿಯಾಗುತ್ತದೆ” ಎಂದರು.
ಈ ವೇಳೆ ನೂತನ ವಿದ್ಯಾರ್ಥಿ ಸಂಘದ ಪದಾಧಿಕಾರಿಗಳನ್ನು ಸ್ವಾಗತಿಸಲಾಯಿತು.ಬಳಿಕ ಪ್ರತಿಜ್ಞಾ ಸ್ವೀಕಾರ ಮಾಡಲಾಯಿತು.ತದನಂತರ ಸಾಧನೆಗೈದ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪತ್ರ ವಿತರಿಸಲಾಯಿತು.
ಈ ವೇಳೆ AOLE ಸೆಕ್ರೆಟರಿ ಐಶ್ವರ್ಯ ಕೆ. ಸಿ, ಕೆ. ವಿ. ಜಿ ಆಯುರ್ವೇದ ಕಾಲೇಜಿನ ಪ್ರಾಂಶುಪಾಲ ಡಾ.ಲೀಲಾಧರ್ ಡಿ. ವಿ , ವಿದ್ಯಾರ್ಥಿ ಕಲ್ಯಾಣ ಅಧಿಕಾರಿ ಡಾ.ಹರ್ಷಿತಾ ಎಂ , ಮಹಿಳಾ ಪ್ರತಿನಿಧಿ ಸ್ನೇಹ ಕೆ. ಎಲ್, ಜನರಲ್ ಸೆಕ್ರೆಟರಿ ಶ್ರೀಜಾ ರೈ, ವಿದ್ಯಾರ್ಥಿ ಸಂಘದ ಅಧ್ಯಕ್ಷ ಆರ್ಥಿಕ್ ಕೆ.ಎಸ್, ಪಿ.ಜಿ ಮುಖ್ಯಸ್ಥ ಈರಪ್ಪ ಯಲಿಗಾರ , ಸಿಬ್ಬಂದಿ ವರ್ಗ, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.