ನ್ಯೂಸ್ ನಾಟೌಟ್: ಪ್ರೊ ಕಬಡ್ಡಿ ಮಾದರಿಯಲ್ಲಿ ನಡೆಯಲಿರುವ ಸುಳ್ಯ ತಾಲೂಕು ಧ್ವನಿ ಬೆಳಕು ಮತ್ತು ಶಾಮಿಯಾನ ಮಾಲಕರ ಸಂಘದ ಕಬಡ್ಡಿ ಕೂಟಕ್ಕೆ ಭರ್ಜರಿ ತಯಾರಿ ನಡೆಯುತ್ತಿದೆ. ಗಣ್ಯಾತಿ ಗಣ್ಯರು ಕ್ರೀಡಾಂಗಣದ ಸಿದ್ಧತೆ ವೀಕ್ಷಣೆಗೆಂದು ಆಗಮಿಸುತ್ತಿದ್ದಾರೆ. ಅಂತೆಯೇ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಸಿದ್ಧತೆಗಳನ್ನು ವೀಕ್ಷಿಸುವುದಕ್ಕೆಂದು ಸುಳ್ಯದ ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಶನ್ ಪ್ರಧಾನ ಕಾರ್ಯದರ್ಶಿ ಅಕ್ಷಯ್ ಕೆ.ಸಿ. ಭೇಟಿ ನೀಡಿದರು.
ಈ ಸಂದರ್ಭದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು,”ಸುಳ್ಯದಲ್ಲಿ ಅತ್ಯಂತ ವ್ಯವಸ್ಥಿತವಾಗಿ ಒಳಾಂಗಣ ಕ್ರೀಡಾಂಗಣ ನಿರ್ಮಿಸಿ ಇತಿಹಾಸ ನಿರ್ಮಿಸುವ ರೀತಿಯಲ್ಲಿ ರಾಷ್ಟ್ರೀಯ ಮಟ್ಟದ ‘ಎ’ ಗ್ರೇಡ್ ಪಂದ್ಯಾಟದ ಆಯೋಜನೆ ಮಾಡಲಾಗಿದೆ. ಸಂಘಟಕರನ್ನು ಅಭಿನಂದಿಸಿ ಸಂಪೂರ್ಣ ಸಹಕಾರ ನೀಡುವುದಾಗಿ ಘೋಷಿಸಿದರು. ಸುಳ್ಯದಲ್ಲಿ ಇಂತಹ ಶಾಶ್ವತ ಒಳಾಂಗಣ ಸ್ಟೇಡಿಯಂ ನಿರ್ಮಾಣವಾಗುವಂತಾಗಬೇಕು. ನಾನು ಒಬ್ಬ ಕ್ರೀಡಾ ಪ್ರೇಮಿಯಾಗಿದ್ದು ಮೂರು ದಿನಗಳ ಕಾಲ ನಡೆಯಲಿರುವ ಕೂಟವನ್ನು ವೀಕ್ಷಿಸಲು ಸಮಯ ಮೀಸಲಿರಿಸುವುದಾಗಿ ತಿಳಿಸಿದರು.