ಕ್ರೈಂ

7 ವರ್ಷದ ಬಾಲಕಿ ಅಪಹರಿಸಿ ಅತ್ಯಾಚಾರ, ಕಬ್ಬಿನ ಗದ್ದೆಯೊಳಗೆ ಬಾಲಕಿ ಮೃತದೇಹ ಪತ್ತೆ !

ಮೊರಾದಾಬಾದ್: 7 ವರ್ಷದ ಬಾಲಕಿಯನ್ನು ಅಪಹರಿಸಿ, ಅತ್ಯಾಚಾರ ಎಸಗಿದ ಬಳಿಕ ಹತ್ಯೆ ಮಾಡಲಾಗಿರುವ ಘಟನೆ ಮೊರಾದಾಬಾದ್ ನ ಗ್ರಾಮವೊಂದರಲ್ಲಿ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿದ ಬಾಲಕಿ, ಮನೆಯ ಮುಂದೆ ಆಟವಾಡುತ್ತಿದ್ದಾಗ ಡಿಸೆಂಬರ್ 22ರಂದು ಕಾಣೆಯಾಗಿದ್ದಳು. ಈ ಸಂಬಂಧ ಕುಟುಂಬಸ್ಥರು ದೂರು ದಾಖಲಿಸಿದ ಮೇರೆಗೆ ಎರಡು ಪೊಲೀಸ್ ತಂಡಗಳನ್ನು ನಿಯೋಜಿಸಲಾಗಿತ್ತು. ಆದರೆ ಬಾಲಕಿಯ ಬಗ್ಗೆ ಯಾವುದೇ ಸುಳಿವು ಸಿಕ್ಕಿರಲಿಲ್ಲ.

ರೈತರೊಬ್ಬರು ತಮ್ಮ ಜಮೀನಿಗೆ ತೆರಳಿದಾಗ ಕೊಳೆತ ಶವದ ವಾಸನೆ ಬಂದಿದೆ. ಬಳಿಕ ಹುಡುಕಾಡಿದಾಗ ಬಾಲಕಿಯ ಮನೆಯಿಂದ 2 ಕಿ.ಮೀ ದೂರದಲ್ಲಿದ್ದ ಕಬ್ಬಿನ ಗದ್ದೆಯಲ್ಲಿ ಶವ ಬಿದ್ದಿರುವುದು ಶುಕ್ರವಾರ ರಾತ್ರಿ ಪತ್ತೆಯಾಗಿತ್ತು. ಮರಣೋತ್ತರ ಪರೀಕ್ಷೆಯಲ್ಲಿ ಬಾಲಕಿಯ ಮೇಲೆ ಅತ್ಯಾಚಾರ ನಡೆಸಿರುವುದು ದೃಢಪಟ್ಟಿದೆ. ಬಾಲಕಿಯ ತಂದೆ ತರಕಾರಿ ವ್ಯಾಪಾರಿಯಾಗಿದ್ದು, ಅವರಿಗೆ ನಾಲ್ವರು ಮಕ್ಕಳಿದ್ದರು. ಈ ಸಂಬಂಧ ಪೊಲೀಸರು ಐಪಿಸಿ ಸೆಕ್ಷನ್ ಮತ್ತು ಪೋಕ್ಸೊ ಕಾಯ್ದೆಯಡಿ ಎಫ್‌ಐಆರ್ ದಾಖಲಿಸಿದ್ದಾರೆ.

Related posts

ಪರಪ್ಪನ ಅಗ್ರಹಾರ ಜೈಲಿನಲ್ಲಿ ವಿ.ಐ.ಪಿ ಗಳದ್ದೇ ಹವಾ..! ಮಾಧ್ಯಮಗಳ ಕಣ್ತಪ್ಪಿಸಿ ಪತಿಯನ್ನು ನೋಡಲು ಜೈಲಿಗೆ ಬಂದ ವಿಜಯಲಕ್ಷ್ಮಿ..!

ಎಲೆಕ್ಟ್ರಿಕ್ ಬೈಕ್ ರಿಪೇರಿಯಿಂದ ಬೇಸತ್ತು ಶೋ ರೂಮ್ ​ಗೆ ಬೆಂಕಿ ಹಚ್ಚಿದ ಗ್ರಾಹಕ..! 20 ದಿನದ ಹಿಂದೆಯಷ್ಟೇ ಸ್ಕೂಟರ್ ಖರೀದಿಸಿದ್ದ ಆರೋಪಿ..!

50ರ ವಿವಾಹಿತನ ಜೊತೆ 19ರ ವಿದ್ಯಾರ್ಥಿನಿ ನಾಪತ್ತೆ..! 4 ದಿನಗಳ ಬಳಿಕ ಇಬ್ಬರ ಮೃತದೇಹಗಳು ಕೆರೆಯಲ್ಲಿ ಪತ್ತೆ..! ಇಲ್ಲಿದೆ ಸಂಪೂರ್ಣ ಮಾಹಿತಿ