ನ್ಯೂಸ್ ನಾಟೌಟ್:ಕೇರಳದ ಮೂಲದ ವ್ಯಕ್ತಿಯೊಬ್ಬ ಅಮೆರಿಕದಲ್ಲಿ ತನ್ನ ಪತ್ನಿಯನ್ನು ಬರ್ಬರವಾಗಿ ಕೊಲೆ ಮಾಡಿದ್ದ ಪ್ರಕರಣಕ್ಕೆ ಸಂಬಂಧ ಪಟ್ಟಂತೆ ರೋಚಕ ತಿರುವು ಪಡೆದುಕೊಂಡಿದೆ.ಈತ ಪತ್ನಿಗೆ 17 ಬಾರಿ ಇರಿದಿದ್ದು ಮಾತ್ರವಲ್ಲದೇ ಆಕೆಯ ಕಾರನ್ನು ತೆಗೆದುಕೊಂಡು ಆಕೆಯ ದೇಹದ ಮೇಲೆ ಹರಿಸಿ, ಸ್ಥಳದಿಂದ ಪರಾರಿಯಾಗಿದ್ದ ಎಂಬ ಅಂಶ ಬಯಲಾಗಿದೆ.
ದೋಷಿ ಫಿಲಿಪ್ ಮ್ಯಾಥ್ಯೂ ತನ್ನ ಪತ್ನಿ ಮೆರಿನ್ ಜಾಯ್ ನನ್ನು 2020ರಲ್ಲಿ ಕೊಲೆ ಮಾಡಿದ್ದ. ಇದೀಗ ತನ್ನ ಪತ್ನಿಯನ್ನು ಬರ್ಬರವಾಗಿ ಕೊಂದಿದ್ದ (Murder) ಭಾರತೀಯ ವ್ಯಕ್ತಿಗೆ (Indian) ಫ್ಲೋರಿಡಾದ ನ್ಯಾಯಾಲಯ ಜೀವಾವಧಿ ಶಿಕ್ಷೆಯನ್ನು (Life Sentence) ವಿಧಿಸಿದೆ.
ದಂಪತಿ ಮೂಲತಃ ಕೇರಳದವರಾಗಿದ್ದು, ಕೇರಳದ (Kerala) ಕೊಟ್ಟಾಯಂ ಮೂಲದ ಮೆರಿನ್ ಜಾಯ್ ಅಮೆರಿಕದಲ್ಲಿ ನರ್ಸ್ ಆಗಿ ಕೆಲಸ ಮಾಡುತ್ತಿದ್ದ ಆಸ್ಪತ್ರೆಯ ಹೊರಗಡೆ ಆಕೆಯ ಪತಿ ಮ್ಯಾಥ್ಯೂ ಬರ್ಬರವಾಗಿ ಹತ್ಯೆ ಮಾಡಿದ್ದ. ಘಟನೆ ಬಳಿಕ ಜಾಯ್ನ ಸಹೋದ್ಯೋಗಿಯೊಬ್ಬರು ವ್ಯಕ್ತಿಯೊಬ್ಬ ಆಕೆಯ ದೇಹದ ಮೇಲೆ ಕಾರನ್ನು ಓಡಿಸಿದ್ದನ್ನು ನೋಡಿದ್ದಾಗಿ ತಿಳಿಸಿದ್ದಾರೆ. ಗಂಭೀರವಾಗಿ ಗಾಯಗೊಂಡಿದ್ದ ಆಕೆಗೆ ಪದೇ ಪದೇ ಅಳಲು ಮಾತ್ರವೇ ಸಾಧ್ಯವಾಗುತ್ತಿತ್ತು. ಈ ವೇಳೆ ಆಕೆ ತನಗೆ ಒಂದು ಮಗುವಿದೆ ಎಂದು ಹೇಳಿದ್ದಾಗಿ ತಿಳಿಸಿದ್ದರು.
ಜಾಯ್ ಸಾವನ್ನಪ್ಪುವುದಕ್ಕೂ ಮುನ್ನ ಪತಿಯ ಬಗ್ಗೆ ಹೇಳಿದ್ದಳು. ಇದರಿಂದ ಆರೋಪಿಯನ್ನು ಬಂಧಿಸಲು ಸಹಾಯವಾಗಿತ್ತು. ನವೆಂಬರ್ 3 ರಂದು ಫ್ಲೋರಿಡಾದ ನ್ಯಾಯಾಲಯ ಆತನಿಗೆ ಅಂತಿಮವಾಗಿ ಜೀವಾವಧಿ ಶಿಕ್ಷೆ ವಿಧಿಸಿದೆ.ಮೆರಿನ್ ಜಾಯ್ ಫಿಲಿಪ್ ಮ್ಯಾಥ್ಯೂ ಜೊತೆಗಿನ ಸಂಬಂಧವನ್ನು ಕೊನೆಗೊಳಿಸಲು ಬಯಸಿದ್ದಳು. ಈ ಹಿನ್ನೆಲೆ ಪತಿಯೇ ಆಕೆಯನ್ನು ಕೊಂದಿದ್ದಾನೆ ಎಂದು ವರದಿಯಾಗಿದೆ.